Corona Vaccine ಅಮೆರಿಕಾದಲ್ಲಿ ಬಳಕೆಗೆ ಲಭ್ಯವಾ ಫೈಜರ್, ಬಯೋಎನ್ಟೆಕ್ ಲಸಿಕೆ?
ಫೈಜರ್ ಮತ್ತು ಬಯೋಎನ್ಟೆಕ್ ಲಸಿಕೆ USನಲ್ಲಿ ಬಳಕೆಗೆ ಲಭ್ಯವಾಗುವ ಸೂಚನೆ ಸಿಕ್ಕಿದೆ. ಅಮೆರಿಕಾದಲ್ಲಿ 3 ಲಕ್ಷ ಜೀವಗಳನ್ನು ಬಲಿ ಪಡೆದುಕೊಂಡ ಕೊವಿಡ್ ವೈರಾಣುವಿನ ಅಂತ್ಯಕಾಲ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಯುಎಸ್ನಲ್ಲಿ ಕೊವಿಡ್ 19 ವಿರುದ್ಧದ ಫೈಜರ್ ಮತ್ತು ಬಯೊಎನ್ಟೆಕ್ ಲಸಿಕೆಯ ಬಳಕೆಗೆ ಇನ್ನು ಒಂದೇ ಹೆಜ್ಜೆ ಬಾಕಿ ಉಳಿದಿದೆ. ಲಸಿಕೆಯನ್ನು ತುರ್ತು ಬಳಕೆಗೆ ಲಭ್ಯವಾಗುವಂತೆ ಅನುಮತಿ ನೀಡಿ ಅಮೆರಿಕಾ ಸರ್ಕಾರ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಅಮೆರಿಕಾದಲ್ಲಿ 3 ಲಕ್ಷ ಜೀವಗಳನ್ನು ಬಲಿ ಪಡೆದುಕೊಂಡ ಕೊವಿಡ್ ವೈರಾಣುವಿನ ಅಂತ್ಯಕಾಲ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರಿಗೆ ಮೊದಲ ಸುತ್ತಿನಲ್ಲಿ ಲಸಿಕೆ ನೀಡುವ ಬಗ್ಗೆ ಮಾಹಿತಿ ದೊರಕಿದೆ. ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ನಿಂದ (FDA) ಫೈಜರ್ ಮತ್ತು ಜರ್ಮನ್ನ ಬಯೋಎನ್ಟೆಕ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ಸಿಗಬೇಕಿದೆ.
ಲಸಿಕೆಯ ಮೊದಲ ಡೋಸ್ಗಳನ್ನು ಯುಎಸ್, ಬ್ರಿಟನ್ ಮತ್ತು ಇತರ ಕೆಲ ದೇಶಗಳು ಸೇರಿ ಪ್ರಯೋಗಿಸುವ ಬಗ್ಗೆಯೂ ಹೇಳಲಾಗುತ್ತಿದೆ. ಚಳಿಗಾಲದ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಉದ್ದೇಶಿಸಲಾಗಿದೆ ಎಂದೂ ತಿಳಿದುಬಂದಿದೆ. ಈ ಬಗ್ಗೆ FDA ಅಧ್ಯಯನ ನಡೆಸುತ್ತಿದೆ. FDA ಬಹಳ ನಿಧಾನಗತಿಯಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಟ್ರಂಪ್ ಆಡಳಿತದಿಂದ ಬಹಳಷ್ಟು ಒತ್ತಡ ಅನುಭವಿಸಿದೆ ಮತ್ತು FDA ಮುಖ್ಯಸ್ಥ ಸ್ಟೀಫನ್ ಹಾನ್ರನ್ನು ಹುದ್ದೆಯಿಂದ ತೆಗೆಯುವ ಬಗ್ಗೆಯೂ ಒತ್ತಡವಿದೆ ಎಂಬ ಮಾತುಗಳು ಕೇಳಿಬಂದಿವೆ.
ಫೈಜರ್ ಮತ್ತು ಬಯೋಎನ್ಟೆಕ್ ಬಳಕೆಗೆ ಲಭ್ಯವಾದರೆ ಯುಎಸ್ ಇತಿಹಾಸದಲ್ಲೇ ಅತಿ ದೊಡ್ಡ ಲಸಿಕೆ ವಿತರಣಾ ಕಾರ್ಯಕ್ರಮ ನಡೆಯಲಿದೆ. ಇದರಿಂದ ಅಮೆರಿಕಾವನ್ನು ಹಿಂಬಾಲಿಸುವ ಇತರ ರಾಷ್ಟ್ರಗಳಿಗೂ ಸಹಾಯವಾಗಲಿದೆ. ಕೊವಿಡ್ ಸಂಕಷ್ಟದಿಂದ ಪಾರಾಗಲು ವಿಶ್ವದ ರಾಷ್ಟ್ರಗಳು ಲಸಿಕೆಗಾಗಿ ಕಾಯುತ್ತಿವೆ. ಫೈಜರ್ ಮತ್ತು ಬಯೋಎನ್ಟೆಕ್ ಲಸಿಕೆಗಳು ಮೊದಲು ಸಿದ್ಧವಾಗಿ ವಿಶ್ವ ಮಾರುಕಟ್ಟೆಗೆ ದಾಪುಗಾಲು ಇಡುವ ಸೂಚನೆ ಸಿಕ್ಕಿದೆ.
ಅಮೆರಿಕಾವು ಮಾಡೆರ್ನಾ ಲಸಿಕೆಯನ್ನೂ ನಂತರದ ಸ್ಥಾನದಲ್ಲಿ ಪರಿಗಣಿಸಿದ್ದು, ಜನವರಿ ತಿಂಗಳ ಮೊದಲಾರ್ಧದಲ್ಲಿ ಜಾನ್ಸನ್ & ಜಾನ್ಸನ್ ಲಸಿಕೆ ಸಿದ್ಧವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಒಂದೇ ದಿನ 635 ಮಂದಿಯಲ್ಲಿ ಕೊರೊನಾ ಸೋಂಕುಪತ್ತೆ: ರಾಜ್ಯದಲ್ಲಿ ಒಟ್ಟು 1210 ಹೊಸ ಪ್ರಕರಣಗಳು
Published On - 5:46 pm, Sat, 12 December 20