AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲಿಕಾಪ್ಟರ್ ಪತನ: ಬಾಸ್ಕೆಟ್​ಬಾಲ್ ದಂತಕಥೆ ಕೋಬಿ ಬ್ರ್ಯಾಂಟ್ ಇನ್ನಿಲ್ಲ

ಅಮೆರಿಕದ ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ನಗರದಲ್ಲಿ ಹೆಲಿಕಾಪ್ಟರ್ ಪತನವಾಗಿ, ಬಾಸ್ಕೆಟ್‌ಬಾಲ್ ದಂತಕಥೆ ಕೋಬಿ ಬ್ರ್ಯಾಂಟ್(41) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೋಬಿ ಬ್ರ್ಯಾಂಟ್​ ಹಾಗೂ ಆತನ ಪುತ್ರಿ ಗಿಯನ್ನಾ ಸೇರಿ ಒಟ್ಟು 9 ಜನ ಸಾವಿಗೀಡಾಗಿದ್ದಾರೆ. ದಟ್ಟ ಮಂಜಿನಿಂದಾಗಿ ಬೆಟ್ಟಗಳ ಮಧ್ಯೆ ಹೆಲಿಕಾಪ್ಟರ್ ಧರೆಗಪ್ಪಳಿಸಿ ದುರಂತ ಸಂಭವಿಸಿದೆ. ಸಿಎಎ ಪರವಾಗಿ ಪ್ರತಿಭಟನೆ: ಸ್ಕಾಟ್​ಲೆಂಡ್​ನಲ್ಲಿರೋ ಅನಿವಾಸಿ ಭಾರತೀಯರು ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆ ಸ್ಕಾಟ್​ಲೆಂಡ್​ನ ಎಡಿನ್​ಬರ್ಗ್​ನಲ್ಲಿ ಸೇರಿದ ಜನ ಭಿತ್ತಿಪತ್ರಗಳನ್ನ ಹಿಡಿದು ಸಿಎಎ ಪರವಾಗಿ ಘೋಷಣೆ ಕೂಗಿದ್ರು. […]

ಹೆಲಿಕಾಪ್ಟರ್ ಪತನ: ಬಾಸ್ಕೆಟ್​ಬಾಲ್ ದಂತಕಥೆ ಕೋಬಿ ಬ್ರ್ಯಾಂಟ್ ಇನ್ನಿಲ್ಲ
ಸಾಧು ಶ್ರೀನಾಥ್​
|

Updated on:Feb 09, 2020 | 1:28 PM

Share

ಅಮೆರಿಕದ ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ನಗರದಲ್ಲಿ ಹೆಲಿಕಾಪ್ಟರ್ ಪತನವಾಗಿ, ಬಾಸ್ಕೆಟ್‌ಬಾಲ್ ದಂತಕಥೆ ಕೋಬಿ ಬ್ರ್ಯಾಂಟ್(41) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೋಬಿ ಬ್ರ್ಯಾಂಟ್​ ಹಾಗೂ ಆತನ ಪುತ್ರಿ ಗಿಯನ್ನಾ ಸೇರಿ ಒಟ್ಟು 9 ಜನ ಸಾವಿಗೀಡಾಗಿದ್ದಾರೆ. ದಟ್ಟ ಮಂಜಿನಿಂದಾಗಿ ಬೆಟ್ಟಗಳ ಮಧ್ಯೆ ಹೆಲಿಕಾಪ್ಟರ್ ಧರೆಗಪ್ಪಳಿಸಿ ದುರಂತ ಸಂಭವಿಸಿದೆ.

ಸಿಎಎ ಪರವಾಗಿ ಪ್ರತಿಭಟನೆ: ಸ್ಕಾಟ್​ಲೆಂಡ್​ನಲ್ಲಿರೋ ಅನಿವಾಸಿ ಭಾರತೀಯರು ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆ ಸ್ಕಾಟ್​ಲೆಂಡ್​ನ ಎಡಿನ್​ಬರ್ಗ್​ನಲ್ಲಿ ಸೇರಿದ ಜನ ಭಿತ್ತಿಪತ್ರಗಳನ್ನ ಹಿಡಿದು ಸಿಎಎ ಪರವಾಗಿ ಘೋಷಣೆ ಕೂಗಿದ್ರು.

ಭೀಕರ ಕಾಡ್ಗಿಚ್ಚು!  ಹಿಮಾಚಲ ಪ್ರದೇಶದ ರಾಂಪುರದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ. ಬೆಂಕಿಯಲ್ಲಿ ಪ್ರಾಣಿಗಳು ಬೆಂದು ಹೋಗಿವೆ.. ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡ್ತಿದೆ.

Published On - 8:03 am, Mon, 27 January 20