ಡೆಡ್ಲಿ ವೈರಸ್​ಗೆ ಬೆಚ್ಚಿಬಿದ್ದ ಚೀನಾ: ಕೇವಲ 6 ದಿನದಲ್ಲಿ 1,000 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ!

ಬೀಜಿಂಗ್: ಚೀನಿಯರಿಗೆ ಈಗ ಹೊಸ ವರ್ಷದ ಸಂಭ್ರಮ. ಆದ್ರೆ ಇಡೀ ದೇಶವೇ ಹೊಸ ವೈರಸ್ ಭಯದಲ್ಲಿ ನಲುಗಿ ಹೋಗಿದೆ. ಕುಂತಲ್ಲೂ, ನಿಂತಲ್ಲೂ ಚೀನಿಯರಿಗೆ ಬರೀ ‘ಕೊರೊನಾ’ ವೈರಸ್​ನದ್ದೇ ದಿಗಿಲು. ಮತ್ತೊಂದ್ಕಡೆ ಈಗಿರುವ ಆಸ್ಪತ್ರೆಗಳ ಪೈಕಿ ಎಲ್ಲಾ ಬೆಡ್​ಗಳು ಫುಲ್ ಆಗಿದ್ದು, ಕೇವಲ 6 ದಿನದಲ್ಲಿ ಹೊಸದೊಂದು ಆಸ್ಪತ್ರೆ ನಿರ್ಮಾಣದ ಸಾಹಸಕ್ಕೆ ಜಿನ್​ಪಿಂಗ್ ಆಡಳಿತ ಮುಂದಾಗಿದೆ. 2200 ವರ್ಷಗಳ ಇತಿಹಾಸವನ್ನು ಸಾರುವ ಚೀನಾ ಮಹಾಗೋಡೆ ವಿಶ್ವದಲ್ಲೇ ಮಾನವ ನಿರ್ಮಿತ ಮಹಾ ರಚನೆ ಎಂದೇ ಗುರುತಿಸಿಕೊಂಡು ಪ್ರಪಂಚದ 7 ಅದ್ಭುತಗಳಲ್ಲಿ […]

ಡೆಡ್ಲಿ ವೈರಸ್​ಗೆ ಬೆಚ್ಚಿಬಿದ್ದ ಚೀನಾ: ಕೇವಲ 6 ದಿನದಲ್ಲಿ 1,000 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ!
Follow us
ಸಾಧು ಶ್ರೀನಾಥ್​
|

Updated on:Jan 26, 2020 | 1:06 PM

ಬೀಜಿಂಗ್: ಚೀನಿಯರಿಗೆ ಈಗ ಹೊಸ ವರ್ಷದ ಸಂಭ್ರಮ. ಆದ್ರೆ ಇಡೀ ದೇಶವೇ ಹೊಸ ವೈರಸ್ ಭಯದಲ್ಲಿ ನಲುಗಿ ಹೋಗಿದೆ. ಕುಂತಲ್ಲೂ, ನಿಂತಲ್ಲೂ ಚೀನಿಯರಿಗೆ ಬರೀ ‘ಕೊರೊನಾ’ ವೈರಸ್​ನದ್ದೇ ದಿಗಿಲು. ಮತ್ತೊಂದ್ಕಡೆ ಈಗಿರುವ ಆಸ್ಪತ್ರೆಗಳ ಪೈಕಿ ಎಲ್ಲಾ ಬೆಡ್​ಗಳು ಫುಲ್ ಆಗಿದ್ದು, ಕೇವಲ 6 ದಿನದಲ್ಲಿ ಹೊಸದೊಂದು ಆಸ್ಪತ್ರೆ ನಿರ್ಮಾಣದ ಸಾಹಸಕ್ಕೆ ಜಿನ್​ಪಿಂಗ್ ಆಡಳಿತ ಮುಂದಾಗಿದೆ.

2200 ವರ್ಷಗಳ ಇತಿಹಾಸವನ್ನು ಸಾರುವ ಚೀನಾ ಮಹಾಗೋಡೆ ವಿಶ್ವದಲ್ಲೇ ಮಾನವ ನಿರ್ಮಿತ ಮಹಾ ರಚನೆ ಎಂದೇ ಗುರುತಿಸಿಕೊಂಡು ಪ್ರಪಂಚದ 7 ಅದ್ಭುತಗಳಲ್ಲಿ ಒಂದೆನಿಸಿಕೊಂಡಿದೆ. ವಿಜ್ಞಾನ, ತಂತ್ರಜ್ಞಾನದಲ್ಲೂ ಮುಂದಿರುವ ಚೀನಾ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಇದೀಗ ಕೇವಲ 6 ದಿನದಲ್ಲಿ 1,000 ಹಾಸಿಗೆಯುಳ್ಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಚೀನಾ ಸರ್ಕಾರ ಮುಂದಾಗಿದೆ. ಈಗಾಗಲೇ ನೂರಾರು ಜೆಸಿಬಿಗಳ ಮುಖಾಂತರ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಅದೇ ನಮ್ಮ ದೇಶದಲ್ಲಿ ಒಂದು ಆಸ್ಪತ್ರೆ ನಿರ್ಮಾಣವಾಗಬೇಕಾದ್ರೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ನೀವೇ ಯೋಚಿಸಿ.

ಒಂದು ಆಸ್ಪತ್ರೆ ನಿರ್ಮಿಸಲು ನೂರಾರು ‘ಜೆಸಿಬಿ’ ಬಳಕೆ! ನೂರಾರು ಜೆಸಿಬಿಗಳನ್ನು ಬಳಸಿಕೊಂಡು ಯಾವುದೋ ಡ್ಯಾಂ ಕಾಮಗಾರಿ ಮಾಡುತ್ತಿಲ್ಲ. ಈ ಜಾಗದಲ್ಲಿ ಇನ್ನು 6 ದಿನದಲ್ಲಿ ಒಂದು ಆಸ್ಪತ್ರೆ ಎದ್ದೇಳಲಿದೆಯಂತೆ. ಹೌದು, ಇದ್ದಕ್ಕಿದ್ದಂತೆ ಎಂಟ್ರಿಕೊಟ್ಟು ಹತ್ತಾರು ಜನ ಜೀವ ಕಳೆದುಕೊಳ್ಳುವಂತೆ ಮಾಡಿದ ‘ಕೊರೊನಾ’ ವೈರಸ್ ವಿರುದ್ಧ ಹೋರಾಡಲು ಜಿನ್​ಪಿಂಗ್ ಆಡಳಿತ ಈ ಕ್ರಮ ಕೈಗೊಂಡಿದೆ. ಮೊದ್ಲೇ ಹೇಳಿದಂತೆ ‘ಕೊರೊನಾ’ಗೆ ಚಿಕಿತ್ಸೆ ನೀಡಲು ಈಗಿರುವ ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇಲ್ಲ. ಈ ಹಿನ್ನೆಲೆಯಲ್ಲಿ ನೂತನವಾಗಿ 1 ಸಾವಿರ ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಲು ಚೀನಾ ಮುಂದಾಗಿದೆ. ಈಗಾಗ್ಲೆ ರೋಗಿಗಳ ಸಂಖ್ಯೆ ಅತಿಹೆಚ್ಚಾಗಿರುವ, ಕೊರೊನಾ ತವರು ವುಹಾನ್​ನಲ್ಲೇ ಈ ಬೃಹತ್ ಆಸ್ಪತ್ರೆ ನಿರ್ಮಾಣವಾಗಲಿದೆ.

ರೋಗ ನಿಯಂತ್ರಿಸಲು ಚೀನಿಯರ ಪರದಾಟ: ಹೌದು, ಡೆಡ್ಲಿ ಕೊರೊನಾ ವೈರಸ್ ಅದೆಷ್ಟು ಭಯಾನಕವಾಗಿ ಹರಡುತ್ತಿದೆ ಅಂದ್ರೆ ರೋಗವನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಾರ್ಸ್ ಅಥವಾ ಕೊರೊನಾ ರೋಗಪೀಡಿತರ ಸಂಖ್ಯೆ ಸಾವಿರದ ಗಡಿಯನ್ನು ತಲುಪಿದ್ದು, ಸಾವಿನ ಸಂಖ್ಯೆ ಅರ್ಧಶತಕದ ಸಮೀಪವಿದೆ. ಇಷ್ಟೆಲ್ಲದರ ಮಧ್ಯೆ ರೋಗ ಇತರ ಪ್ರಾಂತ್ಯಕ್ಕೂ ಹರಡದಂತೆ ತಡೆಯಲು ಜಿನ್​ಪಿಂಗ್ ನೇತೃತ್ವದ ಆಡಳಿತ ಪರದಾಡುತ್ತಿದೆ.

250 ವಿದ್ಯಾರ್ಥಿಗಳ ಬಿಡುಗಡೆಗೆ ಭಾರತದ ಮನವಿ: ಇನ್ನು ಭಾರತದಿಂದ ವುಹಾನ್​ಗೆ ವಲಸೆ ಹೋಗಿ, ವ್ಯಾಸಾಂಗ ಮಾಡುತ್ತಿರುವ ಸುಮಾರು 250 ವಿದ್ಯಾರ್ಥಿಗಳ ಬಿಡುಗಡೆಗೆ ಭಾರತ ಮನವಿ ಮಾಡಿದೆ. ಈಗಾಗಲೇ, ವುಹಾನ್ ಪ್ರಾಂತ್ಯವನ್ನ ಚೀನಾ ಸರ್ಕಾರ ಬಂಧಿಖಾನೆ ಮಾಡಿದ್ದು, ಇಲ್ಲಿಂದ ಯಾರೂ ಮಿಸುಕಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನ ಕಳುಹಿಸುವಂತೆ ಭಾರತ ಮನವಿ ಮಾಡಿದೆ. ಆದರೆ ಈ ಬಗ್ಗೆ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

7 ಜನರ ಮೇಲೆ ನಿಗಾ ಇಟ್ಟ ವೈದ್ಯರು: ಇನ್ನು ಭಾರತಕ್ಕೆ ಬಂದಿದ್ದ ಸುಮಾರು 7 ಚೀನಿಯರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಈವರೆಗೆ ಅವರಲ್ಲಿ ‘ಕೊರೊನಾ’ ವೈರಸ್ ಅಟ್ಯಾಕ್ ಆಗಿರುವ ಲಕ್ಷಣ ಕಂಡುಬಂದಿಲ್ಲ. ಏರ್​ಪೋರ್ಟ್​ಗಳಲ್ಲಿ ತಪಾಸಣೆ ಇನ್ನಷ್ಟು ಬಿಗಿಯಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕರನ್ನೂ ಸ್ಕ್ಯಾನ್ ಮಾಡಿ ದೇಶದ ಒಳಗೆ ಬಿಡಲಾಗುತ್ತಿದೆ. ಒಟ್ನಲ್ಲಿ ಇಷ್ಟೆಲ್ಲಾ ಭಯ ಹುಟ್ಟಿಸಿರುವ ‘ಕೊರೊನಾ’ ನಿಯಂತ್ರಣಕ್ಕೆ ವಿಶ್ವದ ಪ್ರತಿಯೊಂದು ದೇಶವೂ ಸಾಕಷ್ಟು ಕ್ರಮಗಳನ್ನ ಕೈಗೊಂಡಿವೆ. ಆದರೂ ಈ ವೈರಸ್ ನೇಪಾಳ, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಫ್ರ್ಯಾನ್ಸ್​ನಲ್ಲಿ ಪತ್ತೆಯಾಗಿ ಆತಂಕ ಮೂಡಿಸಿದೆ. ಮುಂದಿನ ದಿನಗಳು ಭಯಾನಕವಾಗಿರಲಿವೆ ಅನ್ನೋದರ ಮುನ್ಸೂಚನೆಯನ್ನೂ ನೀಡುತ್ತಿದೆ.

Published On - 1:02 pm, Sun, 26 January 20

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ