ಏರ್ ಫೋರ್ಸ್ ಒನ್ ಹತ್ತುವಾಗ ಎರಡು ಬಾರಿ ಮುಗ್ಗರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

|

Updated on: Feb 22, 2024 | 1:04 PM

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಯುಎಸ್ ಮಿಲಿಟರಿ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ನಂತರ ವಿಮಾನವನ್ನು ಹತ್ತಿದ್ದಾರೆ. ಹತ್ತಿರತ್ತಿರವಿರುವ ಮೆಟ್ಟಿಲುಗಳನ್ನು ಹತ್ತುವಾಗ ಬೈಡನ್ ಎರಡು ಬಾರಿ ಎಡವಿದ್ದಾರೆ. ಕೂಡಲೇ ಅವರು ಹ್ಯಾಂಡ್ರೈಲ್ ಹಿಡಿದು ಸಾವರಿಸಿಕೊಂಡರು.

ಏರ್ ಫೋರ್ಸ್ ಒನ್ ಹತ್ತುವಾಗ ಎರಡು ಬಾರಿ ಮುಗ್ಗರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಜೋ ಬೈಡನ್
Follow us on

ವಾಷಿಂಗ್ಟನ್ ಫೆಬ್ರುವರಿ 22: ಅಮೆರಿಕದ ಅಧ್ಯಕ್ಷರ (US President) ಜೋ ಬೈಡನ್ (Joe Biden) ಇತ್ತೀಚೆಗೆ ವಿದೇಶಿ ನಾಯಕರ ಹೆಸರುಗಳನ್ನು ಹೇಳುವಾಗ ಗೊಂದಲಕ್ಕೊಳಗಾಗಿದ್ದು ಅವರಿಗೆ ನೆನಪಿನ ಶಕ್ತಿ ಕುಂದುತ್ತಿದೆಯೇ ಎಂಬ ಕಳವಳವನ್ನು ಹುಟ್ಟುಹಾಕಿತ್ತು. ಇದೀಗ ಯುಎಸ್ ಅಧ್ಯಕ್ಷರು ಏರ್ ಫೋರ್ಸ್ ಒನ್ (Air Force One)ಹತ್ತುವಾಗ ಎರಡು ಬಾರಿ ಮುಗ್ಗರಿಸಿರುವ ವಿಡಿಯೊವೊಂದು ವೈರಲ್ ಆಗಿದೆ. ಫಾಕ್ಸ್ ನ್ಯೂಸ್ ಪ್ರಕಾರ, ಅಧ್ಯಕ್ಷರು ಎಂದಿನಂತೆ ಇಲ್ಲ. ಜೋ ಬೈಡನ್ ಅವರು ಎಡವಿರುವ ವಿಡಿಯೊ ನೋಡಿ ಇನ್ನು ಕೆಲವರು ನಗೆಯಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಬೈಡನ್ ಯುಎಸ್ ಮಿಲಿಟರಿ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ನಂತರ ವಿಮಾನವನ್ನು ಹತ್ತಿದ್ದಾರೆ. ಹತ್ತಿರತ್ತಿರವಿರುವ ಮೆಟ್ಟಿಲುಗಳನ್ನು ಹತ್ತುವಾಗ ಬೈಡನ್ ಎರಡು ಬಾರಿ ಎಡವಿದ್ದಾರೆ. ಕೂಡಲೇ ಅವರು ಹ್ಯಾಂಡ್ರೈಲ್ ಹಿಡಿದು ಸಾವರಿಸಿಕೊಂಡರು. ಬೈಡನ್ ಆರೋಗ್ಯ ಸರಿಯಾಗಿಲ್ಲ ಎಂಬುದು ಈ ವಿಡಿಯೊ ತೋರಿಸಿದರೂ ಮತ್ತೇನಾಯಿತು ಎಂಬುದು ಇದರಲ್ಲಿಲ್ಲ.

ಬೈಡನ್ ಆ ರೀತಿ ಮೆಟ್ಟಿಲು ಹತ್ತುವಾಗ ಈ ರೀತಿ ಮುಗ್ಗರಿಸಿದ್ದಾರೆ. ಪದೇ ಪದೇ ಈ ರೀತಿ ಅವರು ಮುಗ್ಗರಿಸಿದ್ದರಿಂದ ವಿಮಾನ ಹತ್ತಲು ಅವರಿಗೆ ಒತ್ತೊತ್ತಾಗಿರುವ ಅಥವಾ ಕಡಿಮೆ ಅಂತರದ ಮೆಟ್ಟಿಲುಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಅವರು ಸುಲಭವಾಗಿ ವಿಮಾನವನ್ನು ಹತ್ತುತ್ತಾರೆ. ಕಳೆದ ವರ್ಷ, ಯುಎಸ್ ಏರ್ ಫೋರ್ಸ್ 2023 ಪದವಿ ಸಮಾರಂಭದಲ್ಲಿ ಅವರು ಬಿದ್ದು ಬಿಟ್ಟಿದ್ದರು.


ಬೈಡನ್ ಅವರ ವಿಡಿಯೊ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತರಹೇವಾರಿ ಕಾಮೆಂಟ್​​ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು “ಅವನು(ಬೈಡನ್) ಶೀಘ್ರದಲ್ಲೇ ಕನ್ವೇಯರ್ ಬೆಲ್ಟ್ ಅನ್ನು ಲಗೇಜ್ ಕಂಪಾರ್ಟ್‌ಮೆಂಟ್‌ಗೆ ಪ್ರಯಾಣ ಮಾಡುವುದನ್ನು ಪ್ರಾರಂಭಿಸಬೇಕು ಎಂದು ಹೇಳಿದರೆ ಇನ್ನೊಬ್ಬ ಬಳಕೆದಾರರು ಅವನನ್ನು ಸ್ಟ್ರೆಚರ್‌ನಲ್ಲಿ ಸಾಗಿಸಲು ಸಲಹೆ ನೀಡಿದರು.

“ನನ್ನ ಮೊಣಕಾಲಿನ ಹಿಂಭಾಗಲ್ಲಿ ಸ್ನಾಯು ಸಂಪೂರ್ಣ ಛಿದ್ರವಾಗಿದ್ದರೂ ನಾನು ಈ ಮನುಷ್ಯನಿಗಿಂತ ಉತ್ತಮವಾಗಿ ಮೆಟ್ಟಿಲುಗಳ ಮೇಲೆ ನಡೆಯಬಲ್ಲೆ” ಎಂದು ಒಬ್ಬ ಬಳಕೆದಾರ ಬರೆದರೆ, ಇನ್ನೊಬ್ಬರು ಅವರು ಈವರೆಗೆ ಬಾಡಿ ಡಬಲ್ (ಅವರಂತೆಯೇ ಹೋಲುವ ಇನ್ನೊಬ್ಬ ವ್ಯಕ್ತಿ) ಹೊಂದಿಲ್ಲದಿದ್ದರೆ ನಾವು ಬಹುಶಃ ಒಂದು ಅಥವಾ ಎರಡು ತಿಂಗಳಲ್ಲಿ ಬಾಡಿ ಡಬಲ್ ತರುತ್ತೇವೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, “ಇದು ದುಃಖದಂತೆಯೇ ಮುಜುಗರದ ಸಂಗತಿಯಾಗಿದೆ” ಎಂದು ಬರೆದರೆ, ಇನ್ನೊಬ್ಬ ವ್ಯಕ್ತಿ “ಇದ್ಯಾಕೋ ಚೆನ್ನಾಗಿಲ್ಲ” ಎಂದಿದ್ದಾರೆ.

ರಿಪಬ್ಲಿಕನ್ ನ್ಯಾಷನಲ್ ಕಮಿಟಿಯಿಂದ ನಿರ್ವಹಿಸಲ್ಪಡುವ ಆರ್ ಎನ್ ಸಿ ರಿಸರ್ಚ್, “ಈ ಸನ್ನಿವೇಶವು ಸಂಭವಿಸುವುದನ್ನು ತಡೆಯಲು ಬೈಡನ್ ಹತ್ತುವಾಗ ಅಥವಾ ಇಳಿಯುವಾಗ ಮೆಟ್ಟಿಲುಗಳ ಕೆಳಭಾಗದಲ್ಲಿ ರಹಸ್ಯ ಸೇವಾ ಏಜೆಂಟ್ ಅನ್ನು ಇರಿಸಲಾಗುತ್ತದೆ. ಬೈಡನ್​​ಗೆ ಆರಾಮವಿಲ್ಲ ಎಂದು ಬರೆದಿದ್ದಾರೆ.

ಇದನ್ನೂ ಓದಿ: ನೇಪಾಳದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಕೂಗು, ಎಲ್ಲೆಡೆ ಪ್ರತಿಭಟನೆ 

ಅಮೆರಿಕ ಅಧ್ಯಕ್ಷರಿಗೆ ಮರೆಗುಳಿ?

ಅಮೆರಿಕ ಅಧ್ಯಕ್ಷರಿಗೆ ಈಗ 81ವರ್ಷ. ಹೀಗಿರುವಾಗ ಬೈಡನ್ ಅವರು ತಮ್ಮ ಕೆಲಸದ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಮತ್ತು ಇನ್ನೊಂದು ಅವಧಿಗೆ ಸ್ಪರ್ಧಿಸಲು ಯೋಗ್ಯರಲ್ಲ ಎಂದು ಹಲವರು ವಾದಿಸಿದ್ದಾರೆ. ಕಳೆದ ವಾರ 388 ಪುಟಗಳ ಸಲಹೆಯ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಬೈಡನ್ ಅವರು ಉಪಾಧ್ಯಕ್ಷರಾಗಿದ್ದಾಗ ಅಫ್ಘಾನಿಸ್ತಾನದಲ್ಲಿ ಯುಎಸ್ ವಿದೇಶಾಂಗ ನೀತಿಯ ಬಗ್ಗೆ ವರ್ಗೀಕೃತ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಾರೆ ಎಂದು ಹೇಳುವಾಗ ಬೈಡನ್ ಅವರನ್ನು “ಸದುದ್ದೇಶವುಳ್ಳ, ಕಡಿಮೆ ನೆನಪಿನ ಶಕ್ತಿ ಹೊಂದಿರುವ ಹಿರಿಯ ವ್ಯಕ್ತಿ” ಎಂದು ವಿವರಿಸಿದ್ದಾರೆ. ಬೈಡನ್ ತನ್ನ ಸ್ಮರಣೆಯನ್ನು “ಉತ್ತಮ” ಎಂದು ವಿವರಿಸುವ ಮೂಲಕ ಈ ಪ್ರಕರಣ ಎದುರಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ