ಹಿಂದೂ ಧರ್ಮದ ಮೇಲಿನ ನಂಬಿಕೆಯೇ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಫೂರ್ತಿ: ವಿವೇಕ್ ರಾಮಸ್ವಾಮಿ

|

Updated on: Nov 19, 2023 | 12:42 PM

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಹಿಂದೂ ಧರ್ಮದ ಮೇಲಿಟ್ಟಿರುವ ನಂಬಿಕೆಯೇ ಸ್ಫೂರ್ತಿ ಎಂದು ಭಾರತ ಮೂಲದ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ, ಈ ಸಲದ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್, ಭಾರತ ಮೂಲದ ನಿಕ್ಕಿ ಹ್ಯಾಲೆ, ವಿವೇಕ್​ ರಾಮಸ್ವಾಮಿ ಸೇರಿದಂತೆ ಹಲವರು ರೇಸ್​ನಲ್ಲಿದ್ದಾರೆ.

ಹಿಂದೂ ಧರ್ಮದ ಮೇಲಿನ ನಂಬಿಕೆಯೇ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಫೂರ್ತಿ: ವಿವೇಕ್ ರಾಮಸ್ವಾಮಿ
ವಿವೇಕ್ ರಾಮಸ್ವಾಮಿ
Image Credit source: Reuters
Follow us on

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಹಿಂದೂ ಧರ್ಮದ ಮೇಲಿಟ್ಟಿರುವ ನಂಬಿಕೆಯೇ ಸ್ಫೂರ್ತಿ ಎಂದು ಭಾರತ ಮೂಲದ ವಿವೇಕ್ ರಾಮಸ್ವಾಮಿ(Vivek Ramaswamy) ಹೇಳಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ, ಈ ಸಲದ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್, ಭಾರತ ಮೂಲದ ನಿಕ್ಕಿ ಹ್ಯಾಲೆ, ವಿವೇಕ್​ ರಾಮಸ್ವಾಮಿ ಸೇರಿದಂತೆ ಹಲವರು ರೇಸ್​ನಲ್ಲಿದ್ದಾರೆ.

ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಹಿಂದೂ ಧರ್ಮದ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ ಎಂದಿದ್ದಾರೆ. ನಾನು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವನು, ಈ ಕಾರಣವೇ ನನ್ನನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದೆ, ನಾನೊಬ್ಬ ಹಿಂದೂ ಎಂದು ಹೇಳುಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.

ನಾನು ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದವನು, ಕುಟುಂಬವೇ ಅಡಿಪಾಯ ಎಂದು ನನ್ನ ಪೋಷಕರು ನನಗೆ ಕಲಿಸಿದ್ದಾರೆ. ನಿಮ್ಮ ಹೆತ್ತವರನ್ನು ಗೌರವಿಸಿ ಎಂದರು.

ಮತ್ತಷ್ಟು ಓದಿ: ಟ್ವಿಟ್ಟರ್​ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ

ಓಹಿಯೋ ಮೂಲದ ಬಯೋಟೆಕ್ ಉದ್ಯಮಿ ಹಿಂದೂ ಮತ್ತು ಕ್ರಿಶ್ಚಿಯನ್ ನಂಬಿಕೆಗಳ ನಡುವಿನ ಹೋಲಿಕೆಗಳನ್ನು ಸಹ ಮಾಡಿದರು. ಅವರ ತಂದೆ ಜನರಲ್ ಎಲೆಕ್ಟ್ರಿಕ್​ ಎಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು, ಪೋಷಕರು ಕೇರಳದಿಂದ ಅಮೆರಿಕಕ್ಕೆ ವಲಸೆ ಬಂದವರಾಗಿದ್ದರು.
ವಿವೇಕ್ ರಾಮಸ್ವಾಮಿ ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲಿ, ಇದೇ ದೇಶದಲ್ಲೇ ವಿವಾಹವಾದರು, ಇಬ್ಬರು ಮಕ್ಕಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ