ಡೊಮಿನಿಕನ್ ರಿಪಬ್ಲಿಕ್​​ನಲ್ಲಿ​​​ ಭಾರೀ ಮಳೆ, ಮಕ್ಕಳು ಸೇರಿ 21 ಜನ ಸಾವು

ಡೊಮಿನಿಕನ್ ರಿಪಬ್ಲಿಕ್  (Dominican Republic) ದೇಶದಲ್ಲಿ ಭಾರೀ ಮಳೆಗೆ ಮಕ್ಕಳು ಸೇರಿ 21 ಜನ ಸಾವನ್ನಪ್ಪಿದ್ದಾರೆ. ಮಳೆಯಿಂದ ಡೊಮಿನಿಕನ್ ರಿಪಬ್ಲಿಕ್​​ ನಗರಗಳು ಮುಳುಗುವ ಹಂತಕ್ಕೆ ಬಂದಿದೆ. ಕಳೆದ 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಮಳೆಯಿಂದ ನಗರದ ಮೂಲಸೌಕರ್ಯಗಳು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೊಮಿನಿಕನ್ ರಿಪಬ್ಲಿಕ್​​ನಲ್ಲಿ​​​ ಭಾರೀ ಮಳೆ, ಮಕ್ಕಳು ಸೇರಿ 21 ಜನ ಸಾವು
Follow us
|

Updated on:Nov 20, 2023 | 11:29 AM

ಡೊಮಿನಿಕನ್ ರಿಪಬ್ಲಿಕ್  (Dominican Republic) ದೇಶದಲ್ಲಿ ಭಾರೀ ಮಳೆಗೆ ಮಕ್ಕಳು ಸೇರಿ 21 ಜನ ಸಾವನ್ನಪ್ಪಿದ್ದಾರೆ. ಮಳೆಯಿಂದ ಡೊಮಿನಿಕನ್ ರಿಪಬ್ಲಿಕ್​​ ನಗರಗಳು ಮುಳುಗುವ ಹಂತಕ್ಕೆ ಬಂದಿದೆ. ಕಳೆದ 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಮಳೆಯಿಂದ ನಗರದ ಮೂಲಸೌಕರ್ಯಗಳು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆರಿಬಿಯನ್​​ದಲ್ಲಿ ಅನೇಕ ಮನೆಗಳು ನೆಲಸಮಗೊಂಡಿದ್ದು, ಈ ಬಗ್ಗೆ ಅಧ್ಯಕ್ಷ ಲೂಯಿಸ್ ಅಬಿನಾಡರ್ ಅವರು ವರದಿಯನ್ನು ತರಿಸಿಕೊಂಡಿದ್ದಾರೆ. ಇಂತಹ ಘಟನೆ ನಮ್ಮ ದೇಶದ ಇತಿಹಾಸದಲ್ಲೇ ಮೊದಲು ಎಂದು ಹೇಳಿದ್ದಾರೆ.

ಇನ್ನು ಹವಾಮಾನ ತಂಬಾ ಹದಗೆಟ್ಟಿದ್ದು, ಇದನ್ನು ನಂಬಲು ಸಾಧ್ಯವಿಲ್ಲ, ಮಳೆಯಿಂದ ಅನೇಕ ಮೂಲಸೌಕರ್ಯಗಳು ಹಾನಿಯಾಗಿದೆ ಎಂದು ಹೇಳಿದ್ದಾರೆ. ಮಳೆ ಮುನ್ನಚ್ಚರಿಕೆ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದ್ದು, ಇನ್ನು ಅನೇಕ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮಳೆಯಿಂದ ಗುಡ್ಡಾಗಾಡು ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಕಲ್ಲು-ಬಂಡೆಗಳು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕೆಲವೊಂದು ಕಡೆ ಮನೆ ಗೋಡೆಗಳು ಕುಸಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲದ ಬಗ್ಗೆ ತನಿಖೆ ನಡೆಸುವಂತೆ ಡೊಮಿನಿಕನ್ ರಿಪಬ್ಲಿಕ್ ಸಚಿವಾಲಯ ಆದೇಶ ನೀಡಿದೆ.

ಇದನ್ನೂ ಓದಿ: ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೋ ಡೊಮಿಂಗೊದಲ್ಲಿ ಖಾಸಗಿ ವಿಮಾನ ಪತನ, 9 ಜನ ದುರ್ಮರಣ

ಈಗಾಗಲೇ ತುರ್ತು ಕಾರ್ಯಾಚರಣೆ ನಡೆಸಲಾಗಿದ್ದು, ಇದೀಗ ದೇಶಾದ್ಯಂತ ಸುಮಾರು 13,000 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 32 ಪ್ರಾಂತ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆದೇಶ ನೀಡಿದೆ. ಕೆಲವೊಂದು ಪ್ರದೇಶಗಳಲ್ಲಿ ಮಳೆಯಿಂದ ವಿದ್ಯುತ್​​​ ಮತ್ತು ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ. ಇದರ ಜತೆಗೆ ಶಾಲೆಗಳ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಅಧ್ಯಕ್ಷ ಲೂಯಿಸ್ ಅಬಿನಾಡರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:29 am, Mon, 20 November 23

ತಾಜಾ ಸುದ್ದಿ
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು
ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು
ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ