ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೋ ಡೊಮಿಂಗೊದಲ್ಲಿ ಖಾಸಗಿ ವಿಮಾನ ಪತನ, 9 ಜನ ದುರ್ಮರಣ
ಖಾಸಗಿ ವಿಮಾನ ಪತನವಾಗಿ 9 ಜನ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಲಾಸ್ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ, ಖಾಸಗಿ ವಿಮಾನವೊಂದು ಪತನವಾಗಿದೆ.
ಡೊಮಿನಿಕನ್ ರಿಪಬ್ಲಿಕ್‌ನ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿ(Dominican Republic plane crash) ಭಾರಿ ಅಪಘಾತವೊಂದು ಸಂಭವಿಸಿದೆ. ಖಾಸಗಿ ವಿಮಾನ ಪತನವಾಗಿ 9 ಜನ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಲಾಸ್ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ, ಖಾಸಗಿ ವಿಮಾನವೊಂದು ಪತನವಾಗಿದೆ. ವಿಮಾನಯಾನ ಕಂಪನಿ ಹೆಲಿಡೋಸಾ ಏವಿಯೇಷನ್ ಗ್ರೂಪ್ ಅಪಘಾತವನ್ನು ದೃಢಪಡಿಸಿದೆ.
“ನಮ್ಮ ಕಂಪನಿಯು ಹೆಚ್ಚಿನ ಮಾಹಿತಿಯನ್ನು ಹುಡುಕಲು ರಕ್ಷಣಾ ತಂಡಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಕಂಪನಿಯು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ವಿಮಾನದ ನಿರ್ವಾಹಕ ಹೆಲಿಡೋಸಾ ಏವಿಯೇಷನ್ ಗ್ರೂಪ್ ಪ್ರಕಾರ, ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ಇದುವರೆಗೂ ಮೃತಪಟ್ಟ ಪ್ರಯಾಣಿಕರ ಗುರುತು ಪತ್ತೆಯಾಗಿಲ್ಲ. ವಿಮಾನ ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.
Nine dead in Dominican Republic plane crash, reports AFP News Agency quoting the airline
— ANI (@ANI) December 16, 2021
ಇದನ್ನೂ ಓದಿ: ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದೆಯೇ? ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ ವಹಿಸಿ
Published On - 7:08 am, Thu, 16 December 21