Video: ತಾವೇ ಶ್ರೇಷ್ಠರು ಎಂದು ಭಾವಿಸುತ್ತಾರೆ ಬ್ರಾಹ್ಮಣ ಮಹಿಳೆಯರು; ವಲಸಿಗರ ವಿರುದ್ಧ ಮಾತನಾಡಿ ವಿವಾದ ಸೃಷ್ಟಿಸಿದ ಯುಎಸ್ ಪ್ರಾಧ್ಯಾಪಕಿ

ಪೆನ್ನ್​ ಲಾ ಸ್ಕೂಲ್​​ನಲ್ಲಿ ಪ್ರಾಧ್ಯಾಪಕರಾಗಿರುವ ಆ್ಯಮಿ ಅವರ ಉದ್ಯೋಗ ಅವಧಿ ಕೊನೆಯಾಗುತ್ತಿರುವ ಲಕ್ಷಣ ಈ ವಿಡಿಯೋದಲ್ಲಿ ಗೋಚರಿಸುತ್ತಿದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

Video: ತಾವೇ ಶ್ರೇಷ್ಠರು ಎಂದು ಭಾವಿಸುತ್ತಾರೆ ಬ್ರಾಹ್ಮಣ ಮಹಿಳೆಯರು; ವಲಸಿಗರ ವಿರುದ್ಧ ಮಾತನಾಡಿ ವಿವಾದ ಸೃಷ್ಟಿಸಿದ ಯುಎಸ್ ಪ್ರಾಧ್ಯಾಪಕಿ
ಆ್ಯಮಿ ವಾಕ್ಸ್​
Updated By: Lakshmi Hegde

Updated on: Apr 14, 2022 | 1:55 PM

ಅಮೆರಿಕದ ಕಾನೂನು ಪ್ರಾಧ್ಯಾಪಕಿಯೊಬ್ಬರು ಭಾರತೀಯ ವಲಸಿಗರ ಬಗ್ಗೆ ಅದರಲ್ಲೂ ಭಾರತದಿಂದ ಅಮೆರಿಕ್ಕೆ ಹೋಗಿ ನೆಲೆಸಿರುವ ಬ್ರಾಹ್ಮಣ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ, ವಿವಾದ ಸೃಷ್ಟಿಸಿದ್ದಾರೆ. ಇವರ ಹೇಳಿಕೆಗೆ ಮೂಲತಃ ಅಮೆರಿಕದವರೇ ಆದ ಅನೇಕರು ಪ್ರತಿಕ್ರಿಯೆ ನೀಡಿ, ಇಂಥ ಮಾತುಗಳನ್ನಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ಪ್ರಾಧ್ಯಾಪಕಿಯ ಹೆಸರು ಆ್ಯಮಿ ವಾಕ್ಸ್​. ಯುಎಸ್​ನ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಇವರು ಕಾನೂನು ವಿಚಾರ ಬೋಧನೆ ಮಾಡುತ್ತಾರೆ. ಟಿವಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿ, ಇಲ್ಲೊಂದು ಸಮಸ್ಯೆ ಇದೆ, ಭಾರತದಿಂದ ವಲಸೆ ಬಂದಿರುವ ಒಂದಷ್ಟು ಬ್ರಾಹ್ಮಣ ಮಹಿಳೆಯರು ಇದ್ದಾರೆ. ತಾವು ಎಲ್ಲರಿಗಿಂತಲೂ ಶ್ರೇಷ್ಠರು ಎಂಬುದು ಅವರ ಭಾವನೆ. ಇವತ್ತಿಗೂ, ಎಂದೆಂದಿಗೂ ತಾವು ಗಣ್ಯರು ಎಂದೇ ಅಂದುಕೊಳ್ಳುತ್ತಾರೆ ಎಂದು ಹೇಳಿದ್ದರು. ಟಿವಿ ಶೋದಲ್ಲಿ ಆ್ಯಮಿ ಆಡಿದ ಮಾತುಗಳ ವಿಡಿಯೋ ಕ್ಲಿಪ್​ಗಳು ಎಲ್ಲೆಡೆ ವೈರಲ್​ ಆಗುತ್ತಿವೆ. ಅಷ್ಟೇ ಅಲ್ಲ, ಕಪ್ಪು ವರ್ಣೀಯರು ಮತ್ತು ಇನ್ನಿತರ ಪಾಶ್ಚಿಮಾತ್ಯರಲ್ಲದ ಗುಂಪುಗಳು, ಪಾಶ್ಚಿಮಾತ್ಯರ ವಿರುದ್ಧ ಅನೇಕ ವಿಷಯಗಳಿಗೆ ಅಸಮಾಧಾನ, ಅಸೂಯೆಯನ್ನು ಹೊಂದಿದ್ದಾರೆ ಎಂಬುದನ್ನೂ ಆ್ಯಮಿ ಹೇಳಿದ್ದಾರೆ.

ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ನೆಟ್ಟಿಗರು ಆ್ಯಮಿ ಹೇಳಿಕೆಯನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ಪೆನ್ನ್​ ಲಾ ಸ್ಕೂಲ್​​ನಲ್ಲಿ ಪ್ರಾಧ್ಯಾಪಕರಾಗಿರುವ ಆ್ಯಮಿ ಅವರ ಉದ್ಯೋಗ ಅವಧಿ ಕೊನೆಯಾಗುತ್ತಿರುವ ಲಕ್ಷಣ ಈ ವಿಡಿಯೋದಲ್ಲಿ ಗೋಚರಿಸುತ್ತಿದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೊಬ್ಬರಂತೂ, ಈ ಪ್ರಾಧ್ಯಾಪಕಿಯನ್ನು ಇನ್ನೂ ಕೆಲಸದಲ್ಲಿ ಉಳಿಸಿಕೊಳ್ಳಲಾಗಿದೆಯಾ? ಅವರಿಗೆ ಬೋಧನೆ ಮಾಡುವ ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂದು ಕೇಳಿದ್ದಾರೆ. ಅವರ ಹೇಳಿಕೆಗಳು ರೆಕಾರ್ಡ್ ಆಗುತ್ತಿವೆ ಎಂಬುದು ಆ್ಯಮಿಗೆ ಗೊತ್ತಿಲ್ಲವೇ, ನಾನಂತೂ ಅವರಿಗೆ ನೀಡಿದ್ದ ಟ್ಯೂಷನ್ ಶುಲ್ಕವನ್ನು ವಾಪಸ್ ಪಡೆಯುತ್ತೇನೆ, ಆ್ಯಮಿ ನಿಜಕ್ಕೂ ಪ್ರೊಫೆಸರ್ ಹೌದಾ? ಹೀಗೆ ವಿವಿಧ ಕಮೆಂಟ್​ಗಳನ್ನು ನೆಟ್ಟಿಗರು ಹಾಕಿದ್ದಾರೆ. ಅಂದಹಾಗೇ, ಆ್ಯಮಿಯವರ ಸಂದರ್ಧನ ಫಾಕ್ಸ್​ ನ್ಯೂಸ್​ ಚಾನಲ್​ನಲ್ಲಿ ಪ್ರಸಾರವಾಗಿತ್ತು.

ಇದನ್ನೂ ಓದಿ: ಸಂತೋಷ್ ಕುಟುಂಬಕ್ಕೆ ತಕ್ಷಣ 1 ಕೋಟಿ ಪರಿಹಾರ ಕೊಡಿ: ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

Published On - 12:47 pm, Thu, 14 April 22