
ವಾಷಿಂಗ್ಟನ್, ಜೂನ್ 22: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆದಿದೆ. ಈ ಕುರಿತು ಖುದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಾಹಿತಿ ನೀಡಿದ್ದು, ಇದೀಗ ಶಾಂತಿಯ ಸಮಯ ಎಂದಿದ್ದಾರೆ. ಒಂದೊಮ್ಮೆ ಈಗ ಶಾಂತಿ ಸ್ಥಾಪಿಸದಿದ್ದರೆ ಮತ್ತೊಮ್ಮೆ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈಗ ಅಮೆರಿಕ ಕೂಡ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಬಹಿರಂಗವಾಗಿ ಸೇರಿಕೊಂಡಿದೆ. ಒಂದೊಮ್ಮೆ ಈಗ ಇರಾನ್ ಶಾಂತಿ ಕಾಪಾಡದೆ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರೆ ಸಂಪೂರ್ಣ ವಿನಾಶ ಮಾಡುವವರೆಗೂ ನಾವು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಸಾಮಾನ್ಯವಾಗಿ ಯಾವುದೇ ದೇಶಗಳು ತಮ್ಮ ಮೇಲೆ ಬೇರೆ ದೇಶಗಳು ದಾಳಿ ಮಾಡಿದಾಗ ನೋಡಿಕೊಂಡು ಶಾಂತವಾಗಿರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಅಮೆರಿಕ ಯಶಸ್ವಿಯಾಗಿ ವಾಯುದಾಳಿ ನಡೆಸಿದೆ ಎಂದು ಹೇಳಿದ್ದಾರೆ.ಯುದ್ಧ ವಿಮಾನಗಳು ಪ್ರಮುಖ ಗುರಿಯಾದ ಫೋರ್ಡೊ ಮೇಲೆ ಬಾಂಬ್ ದಾಳಿ ನಡೆಸಿದವು ಮತ್ತು ಈಗ ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಹಿಂತಿರುಗಿವೆ. ಅವರು ಇದನ್ನು ಅಮೆರಿಕದ ಮಿಲಿಟರಿ ಶಕ್ತಿಯ ಉದಾಹರಣೆ ಎಂದು ಕರೆದರು ಮತ್ತು ಈಗ ಶಾಂತಿಯ ಸಮಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ, ಪ್ರಪಂಚದಾದ್ಯಂತ ಮೂರನೇ ಮಹಾಯುದ್ಧದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಅನೇಕ ಜನರು ಮೂರನೇ ಮಹಾಯುದ್ಧದ ಟ್ರೇಲರ್ ಎಂದೇ ಹೇಳುತ್ತಿದ್ದಾರೆ. ಆದರೆ ಕೆಲವು ವಿಶ್ಲೇಷಕರು ಈ ದಿಕ್ಕಿನಲ್ಲಿ ಚೀನಾ ಮತ್ತು ಪಾಕಿಸ್ತಾನದ ಪಾತ್ರವು ಇನ್ನಷ್ಟು ಅಪಾಯಕಾರಿ ಎಂದು ಹೇಳುತ್ತಾರೆ.
30,000 ಪೌಂಡ್ ತೂಕದ “ಬಂಕರ್ ಬಸ್ಟರ್” ಬಾಂಬ್ ಹೊಂದಿದ ಅಮೆರಿಕನ್ ಸ್ಟೆಲ್ತ್ ಬಾಂಬರ್‌ಗಳು ಮಾತ್ರ ಇರಾನ್‌ನ ಫೋರ್ಡೋವ್‌ನಂತಹ ಆಳವಾಗಿ ಹೂತುಹೋಗಿರುವ ಪರಮಾಣು ಸೌಲಭ್ಯಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ತನ್ನ ಪರಮಾಣು ನೆಲೆಗಳ ಮೇಲಿನ ದಾಳಿಗಳು ಪ್ರತೀಕಾರಕ್ಕೆ ಕಾರಣವಾಗುತ್ತವೆ ಎಂದು ಇರಾನ್ ಪದೇ ಪದೇ ಎಚ್ಚರಿಸುತ್ತಲೇ ಇದೆ.
ಮತ್ತಷ್ಟು ಓದಿ: ರಾತ್ರೋರಾತ್ರಿ ಇರಾನ್ ಮೇಲೆ ಅಮೆರಿಕ ದಾಳಿ: ಮೂರು ಪರಮಾಣು ಕೇಂದ್ರಗಳು ಉಡೀಸ್!
ಇರಾನ್ ಮೇಲಿನ ದಾಳಿಯಲ್ಲಿ ಅಮೆರಿಕದ ಯಾವುದೇ ಪಾಲ್ಗೊಳ್ಳುವಿಕೆ ತುಂಬಾ ತುಂಬಾ ಅಪಾಯಕಾರಿ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಮೊದಲೇ ಹೇಳಿದ್ದರು. ಇದೀಗ ಅಮೆರಿಕ ಯುದ್ಧಕ್ಕೆ ಎಂಟ್ರಿಯಾಗಿದ್ದು, ಇದು ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ.
— Donald J. Trump (@realDonaldTrump) June 22, 2025
ಈ ಯುದ್ಧವು ಮಾನವ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ, ಲಕ್ಷಾಂತರ ಜನರು ಪರಿಣಾಮ ಬೀರುತ್ತಾರೆ, ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಇಡೀ ಜಗತ್ತು ರಾಜಕೀಯ ಮತ್ತು ಸಾಮಾಜಿಕ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ. ಈ ಭಯಾನಕ ಯುದ್ಧದ ಪರಿಣಾಮವು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಆದರೆ ಅದು ಜಾಗತಿಕ ಸ್ವರೂಪವನ್ನು ಪಡೆಯಬಹುದು ಈ ಕುರಿತು ಬಾಬಾ ವಾಂಗಾ ಸೇರಿದಂತೆ ಹಲವರು ಭವಿಷ್ಯ ನುಡಿದಿದ್ದರು.
ಇದೆಲ್ಲಕ್ಕೂ ಮುನ್ನ ಟ್ರಂಪ್ ವಾರಗಳ ಹಿಂದೆಯೇ ಇರಾನ್ಗೆ ಎಚ್ಚರಿಕೆ ನೀಡಿದ್ದರು,ಇಸ್ರೇಲ್ ಮುಂದೆ ಬೇಷರತ್ ಶರಣಾಗುವಂತೆ ಕೇಳಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ