ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪತ್ನಿಗೆ ಕಿರೀಟ ಬಂದಿಲ್ಲ ಎಂದು ಈ ಪತಿರಾಯ ಗೆಲುವು ಸಾಧಿಸಿದ ಮಹಿಳೆ ತಲೆಯಿಂದ ಕಿರೀಟವನ್ನು ತೆಗೆದು ನೆಲಕ್ಕೆ ಹೊಡೆದಿದ್ದಾನೆ. ಹೌದು ಇಂತಹ ಆಘಾತಕಾರಿ ಘಟನೆಯೊಂದರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದೆ. ಸೌಂದರ್ಯ ಸ್ಪರ್ಧೆಯ ಸ್ಪರ್ಧಿಯ ಪತಿ ವೇದಿಕೆಯ ಮೇಲೆ ಹತ್ತಿ, ವಿಜೇತರ ಕಿರೀಟವನ್ನು ಕಿತ್ತುಕೊಂಡು ನೆಲಕ್ಕೆ ಒಡೆದುಹಾಕಿದ, ನಂತರ ಆತನ ಹೆಂಡತಿಗೆ ಎರಡನೇ ಸ್ಥಾನ ನೀಡಲಾಯಿತು. ಸ್ಥಳೀಯ ಸುದ್ದಿವಾಹಿನಿ ಗ್ಲೋಬೋ ಪ್ರಕಾರ, ಬ್ರೆಜಿಲ್‌ನಲ್ಲಿ ಶನಿವಾರ ನಡೆದ LGBTQ+ ಸೌಂದರ್ಯ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಮಿಸ್ ಗೇ ಮಾಟೊ ಗ್ರೊಸೊ 2023 ಸ್ಪರ್ಧೆಯಲ್ಲಿ ವಿಜೇತರನ್ನು ಘೋಷಿಸುತ್ತಿದ್ದಂತೆಯೇ ಈ ವ್ಯಕ್ತಿ ವೇದಿಕೆ ಮೇಲೆ ಬಂದು ಗಲಾಟೆ ಮಾಡಿದ್ದಾನೆ.
ಕಿರೀಟಧಾರಣೆ ಸಮಾರಂಭದಲ್ಲಿ ಇಬ್ಬರು ಫೈನಲಿಸ್ಟ್‌ಗಳಾದ ನತಲ್ಲಿ ಬೆಕರ್ ಮತ್ತು ಇಮಾನ್ಯುಲಿ ಬೆಲಿನಿ ಅವರನ್ನು ವಿಜೇತರು ಎಂದು ಘೋಷಣೆ ಮಾಡುವ ವೀಡಿಯೊದಲ್ಲಿ ತೋರಿಸುತ್ತದೆ. ಈ ಸಮಯದಲ್ಲಿ ಇಬ್ಬರು ಮುಂದೆ ಬರುತ್ತಾರೆ. ಕೊನೆಯಲ್ಲಿ Ms ಬೆಲಿನಿ ಅವರನ್ನು ಅಂತಿಮವಾಗಿ ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ. ಅವರ ತಲೆಗೆ ಈ ಹೊಳೆಯುವ ಕಿರೀಟವನ್ನು ಇರಿಸಲು ಮುಂದಾಗುತ್ತಾರೆ. ಆದರೆ ಸಮಾರಂಭ ಪೂರ್ಣಗೊಳ್ಳುವ ಮುನ್ನವೇ ರನ್ನರ್ ಅಪ್ ಸ್ಪರ್ಧಿಯ ಪತಿ ಅದಕ್ಕೆ ಅಡ್ಡಿಪಡಿಸಿದ್ದಾರೆ.
Revolta na final do concurso Miss Brasil Gay 2023. Torcedor arranca coroa da vencedora e joga no chão durante a cerimônia de premiação. pic.twitter.com/rb6duFvAEn
— Bruno Guzzo® (@brunoguzzo) May 28, 2023
ಇದನ್ನೂ ಓದಿ: Video Viral : ಆಸ್ತಿಯ ವ್ಯಾಮೋಹ, ಸಾವನ್ನಪ್ಪಿದ ವೃದ್ಧೆ ಕೈಯಿಂದ ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಹಾಕಿಸಿಕೊಂಡ ಸಂಬಂಧಿಕರು
Ms ಬೆಲಿನಿ ಕೈಯಿಂದ ಕಿರೀಟವನ್ನು ಎಳೆದು ನೆಲದ ಮೇಲೆ ಎಸೆಯುತ್ತಾರೆ. ಅಲ್ಲಿಯೇ ಇದ್ದ ಇತರ ಸ್ಪರ್ಧಿಗಳು ಭಯಗೊಳ್ಳುತ್ತಾರೆ. ತನ್ನ ಹೆಂಡತಿಯನ್ನು ವಿಜೇತೆ ಎಂದು ಘೋಷಣೆ ಮಾಡುವಂತೆ ಕೂಗುತ್ತಾನೆ. ತಕ್ಷಣ ರಕ್ಷಣಾ ಸಿಬ್ಬಂದಿಗಳು ವೇದಿಕೆ ಮೇಲೆ ಬಂದು ಆತನನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Tue, 30 May 23