ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan Government) ಆಕ್ರಮಿಸಿಕೊಂಡ ತಾಲಿಬಾನ್ (Taliban) ಸಂಘಟನೆ ಇದೀಗ ತನ್ನದೇ ಸರ್ಕಾರ ರಚನೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗರ ಸರ್ಕಾರ ರಚನೆಯಾದ ನಂತರ ಅಲ್ಲಿನ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಅಫ್ಘಾನಿಗರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಒಂದೆಡೆ ನಿರ್ಮಾಣವಾಗಿದ್ದರೆ ಇನ್ನೊಂದೆಡೆ ಅವರ ಹೊಸ ಕಾನೂನಿನಿಂದ ಅನೇಕರ ಜೀವನ ಬೀದಿಗೆ ಬಿದ್ದಿದೆ.
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಮತ್ತು ರಾಜಕೀಯ ಸಂಕಷ್ಟವನ್ನು ಎದುರಿಸುತ್ತಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರ ಇತ್ತೀಚಿನ ಟ್ವಿಟ್ಟರ್ ಪೋಸ್ಟ್ ರಾಷ್ಟ್ರದಲ್ಲಿ ಎಷ್ಟು ಪ್ರತಿಭಾವಂತ ವೃತ್ತಿಪರರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.
ಕಬೀರ್ ಹಕ್ಮಲ್ ಅವರು ಅಫ್ಘಾನ್ ಪತ್ರಕರ್ತ ಮೂಸಾ ಮೊಹಮ್ಮದಿ ಅವರ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಮುಸಾ ಮೊಹಮ್ಮದಿ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅಫ್ಘಾನಿಸ್ತಾನದಲ್ಲಿ ಇಂತಹ ಭೀಕರ ಆರ್ಥಿಕ ಪರಿಸ್ಥಿತಿಯ ನಡುವೆ, ಅವರು ತಮ್ಮ ಜೀವನೋಪಾಯಕ್ಕಾಗಿ ರಸ್ತೆಬದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್ ಟಾಯ್ಸ್ ಕೂಡ ಕೊಡ್ತಾರೆ!
ಮೂಸಾ ಮೊಹಮ್ಮದಿ ಅಫಘಾನಿಸ್ತಾನದ ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದ್ದರು. ಈಗ ಅವರ ಕುಟುಂಬವನ್ನು ಪೋಷಿಸಲು ಯಾವುದೇ ಆದಾಯವಿಲ್ಲ. ಹೀಗಾಗಿ, ಬೀದಿ ಬದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ. ಗಣರಾಜ್ಯದ ಪತನದ ನಂತರ ಅಫ್ಘಾನಿಸ್ತಾನದ ಜನರು ಭಾರೀ ಬಡತನವನ್ನು ಅನುಭವಿಸುತ್ತಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಮೊಹಮ್ಮದಿ ಅವರ ಫೋಟೋವನ್ನು ಹಂಚಿಕೊಳ್ಳಲಾಗಿದೆ.
Journalists life in #Afghanistan under the #Taliban. Musa Mohammadi worked for years as anchor & reporter in different TV channels, now has no income to fed his family. & sells street food to earn some money. #Afghans suffer unprecedented poverty after the fall of republic. pic.twitter.com/nCTTIbfZN3
— Kabir Haqmal (@Haqmal) June 15, 2022
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ದಿನದಿಂದ ಭಾರತವು ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಪತ್ರಕರ್ತರು, ವಿಶೇಷವಾಗಿ ಮಹಿಳೆಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅಫ್ಗಾನ್ ಸರ್ಕಾರ ಮಾಧ್ಯಮಗಳ ಮೇಲೆ ದಬ್ಬಾಳಿಕೆ ನಡೆಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Fri, 17 June 22