Arati Prabhakar: ಬೈಡನ್ ಸರ್ಕಾರದ ವೈಜ್ಞಾನಿಕ ಸಲಹೆಗಾರ್ತಿಯಾಗಲಿರುವ ಭಾರತ ಮೂಲದ ಆರತಿ ಪ್ರಭಾಕರ್ ಯಾರು?

ಅಮೆರಿಕ ಅಧ್ಯಕ್ಷ ಜೋ ಬೈಡನ್( Joe Biden) ಭಾರತೀಯ ಮೂಲದ ಭೌತಶಾಸ್ತ್ರಜ್ಞೆ ಆರತಿ ಪ್ರಭಾಕರ್ ಅವರನ್ನು ತಮ್ಮ ವೈಜ್ಞಾನಿಕ ಸಲಹೆಗಾರ್ತಿಯನ್ನಾಗಿ ನಾಮನಿರ್ದೇಶನ ಮಾಡಲಿದ್ದಾರೆ. ಆರತಿ ಪ್ರಭಾಕರ್ ಅವರು ವೈಟ್ ಹೌಸ್ ಆಫೀಸ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿಯ (OSTP) ನಿರ್ದೇಶಕಿಯಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ.

Arati Prabhakar: ಬೈಡನ್ ಸರ್ಕಾರದ ವೈಜ್ಞಾನಿಕ ಸಲಹೆಗಾರ್ತಿಯಾಗಲಿರುವ ಭಾರತ ಮೂಲದ ಆರತಿ ಪ್ರಭಾಕರ್ ಯಾರು?
Arati PrabhakarImage Credit source: Politico
Follow us
TV9 Web
| Updated By: ನಯನಾ ರಾಜೀವ್

Updated on:Jun 15, 2022 | 11:51 AM

ಅಮೆರಿಕ ಅಧ್ಯಕ್ಷ ಜೋ ಬೈಡನ್( Joe Biden) ಭಾರತೀಯ ಮೂಲದ ಭೌತಶಾಸ್ತ್ರಜ್ಞೆ ಆರತಿ ಪ್ರಭಾಕರ್ ಅವರನ್ನು ತಮ್ಮ ವೈಜ್ಞಾನಿಕ ಸಲಹೆಗಾರ್ತಿಯನ್ನಾಗಿ  ನಾಮನಿರ್ದೇಶನ ಮಾಡಲಿದ್ದಾರೆ. ಆರತಿ ಪ್ರಭಾಕರ್ ಅವರು ವೈಟ್ ಹೌಸ್ ಆಫೀಸ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿಯ (OSTP) ನಿರ್ದೇಶಕಿಯಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ. ಎರಿಕ್ ಲ್ಯಾಂಡರ್ ಬದಲಿಗೆ ಆರತಿ ಪ್ರಭಾಕರ್ ಆಯ್ಕೆಯಾಗಲಿದ್ದಾರೆ. ಲ್ಯಾಂಡರ್ ಫೆಬ್ರವರಿ 7, 2022 ರಂದು ರಾಷ್ಟ್ರಪತಿಗಳ ವೈಜ್ಞಾನಿಕ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

OSTP ನಿರ್ದೇಶಕರಾಗಲು ಆರತಿ ಪ್ರಭಾಕರ್ ಅವರಿಗೆ ಸೆನೆಟ್ ಅನುಮೋದನೆಯ ಅಗತ್ಯವಿದೆ. ಈ ಪ್ರಕ್ರಿಯೆಯು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ಅವರು ತಕ್ಷಣವೇ ಅಧ್ಯಕ್ಷರ ಬೈಡನ್ ಸರ್ಕಾರದ ವಿಜ್ಞಾನ ಸಲಹೆಗಾರ್ತಿ ​​ಸ್ಥಾನವನ್ನು ಅಲಂಕರಿಸಬಹುದು.

ಆರತಿ ಪ್ರಭಾಕರ್ ಯಾರು? ಆರತಿ ಪ್ರಭಾಕರ್ (63) ಖ್ಯಾತ ಭೌತಶಾಸ್ತ್ರಜ್ಞೆ. 1993 ರಲ್ಲಿ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಆಂಡ್ ಟೆಕ್ನಾಲಜಿ (ಎನ್‌ಐಎಸ್‌ಟಿ) ಮುಖ್ಯಸ್ಥರಾಗಿ ಆಯ್ಕೆಯಾದರು.

NIST ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡ ಎರಡು ದಶಕಗಳ ನಂತರ, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಭಾಕರ್ ಅವರನ್ನು ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (DARPA) ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದರು.

ಈಗ OSTP ನಿರ್ದೇಶಕರಾಗಿ ಪ್ರಭಾಕರ್ ಅವರ ನೇಮಕವನ್ನು ಸೆನೆಟ್ ಅನುಮೋದಿಸಿದರೆ, ಅವರು OSTP ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಆರತಿ ಪ್ರಭಾಕರ್ ಹುಟ್ಟು, ಊರು ಆರತಿ ಪ್ರಭಾಕರ್ ಅವರು 2 ಫೆಬ್ರವರಿ 1959 ರಂದು ದೆಹಲಿಯಲ್ಲಿ ಜನಿಸಿದರು. ಅವರ ಬಾಲ್ಯ ಮತ್ತು ಆರಂಭಿಕ ಶಿಕ್ಷಣ ಟೆಕ್ಸಾಸ್‌ನಲ್ಲಿ ನಡೆಯಿತು. 1984 ರಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಿಎಚ್‌ಡಿ ಪಡೆದ ನಂತರ, ಅವರು ಫೆಡರಲ್ ಸರ್ಕಾರಕ್ಕೆ ಕೆಲಸ ಮಾಡಲು ಹೋದರು.

ಅವರು 30 ಜುಲೈ 2012 ರಿಂದ 20 ಜನವರಿ 2017 ರವರೆಗೆ ಯುನೈಟೆಡ್ ಸ್ಟೇಟ್ಸ್ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿಯ (DARPA) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ಪ್ರಭಾಕರ್ ಅವರು ಲಾಭರಹಿತ ಸಂಸ್ಥೆಯಾದ ಆಕ್ಚುಯೇಟ್‌ನ ಸಂಸ್ಥಾಪಕ ಮತ್ತು ಸಿಇಒ. ಅವರು 1993 ರಿಂದ 1997 ರವರೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ (NIST) ಗೆ ಮುಖ್ಯಸ್ಥರಾಗಿದ್ದರು ಮತ್ತು NIS ಗೆ ಮುಖ್ಯಸ್ಥರಾದ ಮೊದಲ ಮಹಿಳೆಯಾಗಿದ್ದಾರೆ.

ಇತರೆ  ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:49 am, Wed, 15 June 22

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ