AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರನ್ನೂ ಬಿಟ್ಟು ಆ ಕಮಲಾ ಹ್ಯಾರಿಸ್​ರನ್ನೇ ಯಾಕೆ ಆಯ್ಕೆ ಮಾಡಬೇಕಿತ್ತು?-ಜೋ ಬೈಡನ್​ ಪತ್ನಿ ಜಿಲ್​​ ಬೈಡನ್​ಗೆ ಅಸಮಾಧಾನ

ಪುಸ್ತಕದ ಹೆಸರು This Will Not Pass: Trump, Biden, and the Battle for America’s Future. ಇದೊಂದು ರಾಜಕೀಯ ವಿಚಾರಗಳೇ ತುಂಬಿರುವ ಪುಸ್ತಕ. ಟ್ರಂಪ್ ಆಡಳಿತದ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆ ಎನ್ನಲಾಗಿದೆ.

ಎಲ್ಲರನ್ನೂ ಬಿಟ್ಟು ಆ ಕಮಲಾ ಹ್ಯಾರಿಸ್​ರನ್ನೇ ಯಾಕೆ ಆಯ್ಕೆ ಮಾಡಬೇಕಿತ್ತು?-ಜೋ ಬೈಡನ್​ ಪತ್ನಿ ಜಿಲ್​​ ಬೈಡನ್​ಗೆ ಅಸಮಾಧಾನ
ಜೋ ಬೈಡನ್ ಮತ್ತು ಜಿಲ್ ಬೈಡನ್​
TV9 Web
| Edited By: |

Updated on:Mar 24, 2022 | 11:46 AM

Share

ಯುಎಸ್​ ಅಧ್ಯಕ್ಷ ಜೋ ಬೈಡನ್​​ ಪತ್ನಿ ಜಿಲ್​ ಬೈಡನ್​​ ತಮ್ಮ ಪತಿಯ ಬಗ್ಗೆ ಒಂದು ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2021ರ ಅಧ್ಯಕ್ಷೀಯ  ಚುನಾವಣೆಯಲ್ಲಿ ಜೋ ಬೈಡನ್​ ತಮ್ಮ ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್​ರನ್ನು ಆಯ್ಕೆ ಮಾಡಿಕೊಂಡಿದ್ದು ತಮಗೆ ಇಷ್ಟವಾಗಲಿಲ್ಲ ಎಂದು ಜಿಲ್​ ಬೈಡನ್​ ಹೇಳಿದ್ದಾಗಿ ಹೊಸ ಪುಸ್ತಕವೊಂದರಲ್ಲಿ ವರದಿ ಮಾಡಲಾಗಿದೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್​ ನೇಮಕವಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಈ ಪುಸ್ತಕ ಪ್ರಕಟವಾಗಿದ್ದು, ಈ ಒಂದು ವರ್ಷದಲ್ಲಿ ಏನಾಯಿತು ಎಂಬಿತ್ಯಾದಿ ವಿಚಾರಗಳನ್ನು ಒಳಗೊಂಡಿದೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲೂ ಕಮಲಾ ಹ್ಯಾರಿಸ್​ ಅವರೇ ನನ್ನ ಉತ್ತರಾಧಿಕಾರಿ (Running Mate) ಎಂದು ಈಗಾಗಲೇ ಜೋ ಬೈಡನ್​ ಘೋಷಣೆ ಮಾಡಿದ್ದಾರೆ. ಆದರೆ ಈಗ ಈ ಪುಸ್ತಕ ಹೇಳಿರುವ ಪ್ರಕಾರ, ಮೊದಲ ಅವಧಿಯಲ್ಲಿ ಕಮಲಾ ಹ್ಯಾರಿಸ್​​ರನ್ನು ಆಯ್ಕೆ ಮಾಡಿ, ನಂತರ ಅವರು ಉಪಾಧ್ಯಕ್ಷರಾಗಿದ್ದೇ ಜಿಲ್​ ಬೈಡನ್​ಗೆ ಇಷ್ಟವಿರಲಿಲ್ಲ.

ಅಂದಹಾಗೇ, ಈ ಪುಸ್ತಕದ ಹೆಸರು This Will Not Pass: Trump, Biden, and the Battle for America’s Future. ಇದೊಂದು ರಾಜಕೀಯ ವಿಚಾರಗಳೇ ತುಂಬಿರುವ ಪುಸ್ತಕ. 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಹೊತ್ತಲ್ಲಿ ಜೋ ಬೈಡನ್​ ತಮ್ಮ ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್​ರನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ಡೆಮಾಕ್ರಟಿಕ್ ಪಕ್ಷವೇ ಗೆದ್ದು, ಟ್ರಂಪ್​ ಆಡಳಿತ ಕೊನೆಗೊಂಡಿತು. ಜೋ ಬೈಡನ್​ ಅಧ್ಯಕ್ಷರಾದರೆ, ಭಾರತ ಮೂಲದ ಕಮಲಾ ಹ್ಯಾರಿಸ್​ ಉಪಾಧ್ಯಕ್ಷೆಯಾದರು. ಈ ಬಗ್ಗೆ ಜಿಲ್​ ಬೈಡನ್​ ಪ್ರತಿಕ್ರಿಯೆ ನೀಡಿ, ಈ ಅಮೆರಿಕದಲ್ಲಿ ಲಕ್ಷಾಂತರ ಜನರಿದ್ದರು. ಆದರೆ ಅವರೆಲ್ಲರನ್ನೂ ಬಿಟ್ಟು, ಒಂದು ಕಾಲದಲ್ಲಿ ಜೋ ಬೈಡನ್​ ವಿರುದ್ಧವೇ ಕಟು ಟೀಕೆ ಮಾಡಿ, ಅವರನ್ನು ವ್ಯಂಗ್ಯ ಮಾಡಿದ್ದ ಕಮಲಾ ಹ್ಯಾರಿಸ್​ರನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದ್ದಾರೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಈ ಪುಸ್ತಕವನ್ನು ಬರೆದವರು ನ್ಯೂಯಾರ್ಕ್​ ಟೈಮ್ಸ್​​ ಪತ್ರಿಕೆ ವರದಿಗಾರರಾದ ಜೊನಾಥನ್ ಮಾರ್ಟಿನ್​ ಮತ್ತು ಅಲೆಕ್ಸ್​ ಬರ್ನ್ಸ್​ ಎಂಬುವರು. ಇದು ಮೇ 3ರಂದು ಬಿಡುಗಡೆಯಾಗಲಿದೆ. 2019ರಲ್ಲಿ ನಡೆದ ಟಿವಿ ಡಿಬೇಟ್​ವೊಂದರಲ್ಲಿ ಪಾಲ್ಗೊಂಡಿದ್ದ ಕಮಲಾ ಹ್ಯಾರಿಸ್​ ಮತ್ತು ಜೋ ಬೈಡನ್​ ಇಬ್ಬರೂ ಪಾಲ್ಗೊಂಡಿದ್ದರು. ಈ ವೇಳೆ ಕಮಲಾ ಹ್ಯಾರಿಸ್​ ನೇರವಾಗಿಯೇ ಬೈಡನ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೋ ಬೈಡನ್​ ಒಬ್ಬರು ಜನಾಂಗೀಯವಾದಿ (ಜಾತೀಯವಾದಿ). ಇದಕ್ಕೆ ಉದಾಹರಣೆ ಇದೆ.  ಬೈಡನ್​ ಅವರು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಬೇರೆ ಜನಾಂಗದವರೊಂದಿಗೆ ಕೆಲಸ ಮಾಡಿದ ರೀತಿ ನನಗೆ ತುಂಬ ನೋವು ಕೊಟ್ಟಿದೆ. ಅಷ್ಟೇ ಅಲ್ಲ, 1970ರ ದಶಕದಲ್ಲಿ ನಾನು ಸೆನೆಟರ್ ಆಗಿದ್ದೆ, ಆಗ, ಸಾರ್ವಜನಿಕ ಶಾಲೆಗಳನ್ನು ಜನಾಂಗೀಯವಾಗಿ ಸಂಯೋಜಿಸುವುದಕ್ಕೆ ವಿರೋಧಿಸಿದ್ದರು ಎಂಬಿತ್ಯಾದಿ ಆರೋಪಿಸಿದ್ದರು. ಇದೇ ಕಾರಣವನ್ನು ಉಲ್ಲೇಖಿಸಿ ಜಿಲ್​ ಬೈಡನ್​ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲರನ್ನೂ ಬಿಟ್ಟು, ಬೈಡನ್​ ವಿರುದ್ಧ ಅಷ್ಟು ಆರೋಪ ಮಾಡಿ, ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದ ಕಮಲಾ ಹ್ಯಾರಿಸ್​ರನ್ನೇ ಯಾಕೆ ಆಯ್ಕೆ ಮಾಡಬೇಕಿತ್ತು ಎಂದು ಕೇಳಿದ್ದಾಗಿ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್‌’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್​ಕುಮಾರ್​ ಹೇಳಿಕೆ

Published On - 11:31 am, Thu, 24 March 22

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ
ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ