AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್ ಜೈಲಲ್ಲಿ ದೀರ್ಘಕಾಲದ ಸಂಗಾತಿಯನ್ನು ಮದುವೆಯಾದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ

ರಾಯಭಾರಿ ಕಚೇರಿಯಲ್ಲಿರುವಾಗಲೇ ಅಸ್ಸಾಂಜೆ ಅವರು ವೃತ್ತಿಯಿಂದ ವಕೀಲೆಯಾಗಿರುವ ಮತ್ತು ವಯಸ್ಸಿನಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವರಾಗಿರುವ ಮೋರಿಸ್ ರಿಂದ ಎರಡು ಮಕ್ಕಳನ್ನು ಪಡೆದಿದ್ದಾರೆ.

ಲಂಡನ್ ಜೈಲಲ್ಲಿ ದೀರ್ಘಕಾಲದ ಸಂಗಾತಿಯನ್ನು ಮದುವೆಯಾದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ
ಜೂಲಿಯನ್ ಅಸ್ಸಾಂಜೆ ಮತ್ತು ಸ್ಟೆಲ್ಲಾ ಮೋರಿಸ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Mar 24, 2022 | 6:39 AM

Share

ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ (Julian Assange) ತಮ್ಮ ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ರನ್ನು (Stella Moris) ಭಾರಿ ಬಿಗಿ ಭದ್ರತೆಯ ಬ್ರಿಟಿಷ್ (British) ಸೆರೆಮನೆಯೊಂದರಲ್ಲಿ ಬುಧವಾರ ಮದುವೆಯಾದರು. ವಧು-ವರರು ಪ್ರಮಾಣಗಳನ್ನು ವಿನಿಮಮ ಮಾಡಿಕೊಳ್ಳುವ ಸಂದರ್ಭದಲ್ಲಿ ಕೇವಲ 8 ಜನ ಹಾಜರಿದ್ದರು-ನಾಲ್ವರು ಅತಿಥಿಗಳು, ಇಬ್ಬರು ಸ್ಥಳೀಯ ಸಾಕ್ಷಿದಾರರು ಮತ್ತು ಇಬ್ಬರು ಜೈಲು ಕಾವಲುಗಾರರು. ಅಸ್ಸಾಂಜೆ ಯುಕೆ ಜೈಲಿನಲ್ಲಿದ್ದಾರೆ, ಅದರೆ ಒಂದು ದಶಕದ ಹಿಂದೆ ವಿಕಿಲೀಕ್ಸ್‌ನ ಅಮೆರಿಕd ರಹಸ್ಯ ಮಿಲಿಟರಿ ದಾಖಲೆಗಳು ಮತ್ತು ರಾಜತಾಂತ್ರಿಕ ಕೇಬಲ್‌ಗಳನ್ನು ಬಿಡುಗಡೆ ಮಾಡಿದ ವಿಕಿಲೀಕ್ಸ್‌ಗೆ ಸಂಬಂಧಿಸಿದ 18 ಅರೋಪಗಳಲ್ಲಿ ವಿಚಾರಣೆಯನ್ನು ನಡೆಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ತಮಗೆ ಹಸ್ತಾಂತರಿಸಬೇಕೆಂದು ಯುಎಸ್ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ.

‘ನನಗೆ ತುಂಬಾ ಸಂತೋಷದ ಜೊತೆಗೆ ದುಃಖವೂ ಆಗುತ್ತಿದೆ. ಜೂಲಿಯನ್ ಅವರನ್ನು ಮನಸಾರೆ ಪ್ರೀತಿಸುತ್ತೇನೆ ಮತ್ತು ಅವರು ನನ್ನೊಂದಿಗೆ ಹೊರಗೆ ಇರಬೇಕಿತ್ತೆಂದು ಬಯಸುತ್ತೇನೆ,’ ಎಂದು ಮೋರಿಸ್ ವಿವಾಹದ ನಂತರ ಬೆಲ್ಮಾರ್ಶ್ ಜೈಲಿನ ದ್ವಾರದ ಹೊರಭಾಗದಲ್ಲಿದ್ದ ಮಾಧ್ಯಮದವರಿಗೆ ಹೇಳಿದರು.

ಆಸ್ಟ್ರೇಲಿಯ ಮೂಲದ 50-ವರ್ಷ ವಯಸ್ಸಿನ ಅಸ್ಸಾಂಜೆ ತನ್ನಿಂದ ಯಾವುದೇ ಪ್ರಮಾದ ಜರುಗಿಲ್ಲ ಎಂದು ಹೇಳುತ್ತಿದ್ದಾಗ್ಯೂ 2019 ರಿಂದ ಲಂಡನ್ ನಗರದ ಆಗ್ನೇಯ ಭಾಗದಲ್ಲಿರುವ ಜೈಲೊಂದರಲ್ಲಿದ್ದಾರೆ. ಅದಕ್ಕೂ ಮೊದಲು 7 ವರ್ಷಗಳ ಕಾಲ ಲಂಡನ್ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅವರನ್ನು ಇರಿಸಲಾಗಿತ್ತು. ರಾಯಭಾರಿ ಕಚೇರಿಯಲ್ಲಿರುವಾಗಲೇ ಅಸ್ಸಾಂಜೆ ಅವರು ವೃತ್ತಿಯಿಂದ ವಕೀಲೆಯಾಗಿರುವ ಮತ್ತು ವಯಸ್ಸಿನಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವರಾಗಿರುವ ಮೋರಿಸ್ ರಿಂದ ಎರಡು ಮಕ್ಕಳನ್ನು ಪಡೆದಿದ್ದಾರೆ. 2011 ರಲ್ಲಿ ಅಸ್ಸಾಂಜೆಯವರ ಲೀಗಲ್ ಟೀಮಿನೊಂದಿಗೆ ಮೋರಿಸ್ ಕೆಲಸ ಮಾಡಲಾರಂಭಿಸಿದ ಬಳಿಕ ಅಸ್ಸಾಂಜೆ ಅವರ ಪರಿಚಯವಾಗಿ 2015 ರಿಂದ ಅವರ ನಡುವೆ ಸಂಬಂಧವೇರ್ಪಟ್ಟಿತ್ತು.

ಮಕ್ಕಳ ಹಂತಕ ಇಯಾನ್ ಹಂಟ್ಲೀ ಸೇರಿದಂತೆ ಹಲವಾರು ಕುಖ್ಯಾತ ಕ್ರಿಮಿನಲ್ ಗಳು ಸೆರೆವಾಸ ಅನುಭವಿಸಿರುವ ಸದರಿ ಜೈಲಿನಲ್ಲಿ ಬುಧವಾರ ವಿವಾಹ ನೋಂದಣಾಧಿಕಾರಿಯೊಬ್ಬರು ವಿಸಿಟಿಂಗ್ ಅವರ್ಸ್ನಲ್ಲಿ ಅಸ್ಸಾಂಜೆ ಮತ್ತು ಮೋರಿಸ್ ಅವರ ಮದುವೆ ಕಾರ್ಯವನ್ನು ನೆರವೇರಿಸಿದರು. ವಿವಾಹ ವಿಧಿಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಅತಿಥಿಗಳನ್ನು ಹೊರಗೆ ಹೋಗುವಂತೆ ತಿಳಿಸಲಾಯಿತು. ಮೋರಿಸ್, ಲಿಲ್ಯಾಕ್ ಸ್ಯಾಟಿನ್ ಮದುವೆ ಉಡುಪು ಧರಿಸಿದ್ದರೆ, ಅಸ್ಸಾಂಜೆ ಅವರು ಸ್ಕಾಟ್ಲೆಂಡ್ ನೊಂದಿಗೆ ತಮ್ಮ ಬಾಂಧವ್ಯವನ್ನು ಪ್ರತಿನಿಧಿಸುವ ಮತ್ತು ಬ್ರಿಟನ್ನಿನ ಖ್ಯಾತ ಫ್ಯಾಶನ್ ಡಿಸೈನರ್ ಮತ್ತು ಅಸ್ಸಾಂಜೆಯ ಹಸ್ತಾಂತರ ಮಾಡುವ ವಿರುದ್ಧ ಅಭಿಯಾನ ನಡೆಸಿದ ವಿವಿಯನ್ ವೆಸ್ಟ್ ವುಡ್ ವಿನ್ಯಾಸಗೊಳಿಸಿದ ಸೂಟ್ ತೊಟ್ಟಿದ್ದರು.

ವಧುವಿನ ಉಡುಗೆಯು ವೆಸ್ಟ್‌ವುಡ್‌ನಿಂದ ಬಂದ ವೈಯಕ್ತಿಕ ಸಂದೇಶವನ್ನು ಒಳಗೊಂಡಿತ್ತು ಮತ್ತು ಗೌನಿನ ಮೇಲೆ ‘ಪರಾಕ್ರಮಿ’, ‘ದಣಿವರಿಯದ,’ ಮತ್ತು ‘ಮುಕ್ತ ಶಾಶ್ವತ ಪ್ರೀತಿ,’ ಮುಂತಾದ ಪದಗಳಿಂದ ಕಸೂತಿ ಮಾಡಲಾಗಿತ್ತು. ‘ನನ್ನ ಪಾಲಿಗೆ ಜೂಲಿಯನ್ ಅಸ್ಸಾಂಜೆ ಒಂದು ಶುದ್ಧ ಆತ್ಮ ಹೊಂದಿರುವ ವ್ಯಕ್ತಿ ಮತ್ತು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿದ್ದಾನೆ,’ ಎಂದು ವೆಸ್ಟ್ ವುಡ್ ಹೇಳಿದ್ದಾರೆ. ಜೈಲಿನ ಹೊರಗಡೆ ಮೋರಿಸ್ ಮದುವೆ ಕೇಕ್ ಕತ್ತರಿಸಿ ಮದುವೆ ಸಮಾರಂಭಕ್ಕಾಗಿ ಅಗಮಿಸಿದ್ದ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದರು.

‘ಬಹಳ ಕಠಿಣ, ಕ್ರೂರ ಮತ್ತು ಅಮಾನವೀಯ ಪರಿಸ್ಥಿಯಲ್ಲಿ ನಾವಿದ್ದೇವೆ. ನಮ್ಮಿಬ್ಬರ ನಡುವಿನ ಪ್ರೀತಿಯೇ ನಮ್ಮ ಪಾಲಿನ ಧೀಶಕ್ತಿಯಾಗಿದ್ದು ಅದೇ ನಮ್ಮನ್ನು ಮುನ್ನಡೆಸುತ್ತಿದೆ. ಅವರಿಗಿಂತ ವಿಶಿಷ್ಟವಾದ ವ್ಯಕ್ತಿ ಪ್ರಪಂಚದಲ್ಲಿ ಯಾರೂ ಇಲ್ಲ. ಬಹಳ ಅದ್ಭುತವಾದ ವ್ಯಕ್ತಿಯಾಗಿರುವ ಅಸ್ಸಾಂಜೆಯನ್ನು ಬಿಡುಗಡೆ ಮಾಡಬೇಕು,’ ಎಂದು ಮೋರಿಸ್ ಹೇಳಿದರು. ಈ ತಿಂಗಳು ಅರಂಭದಲ್ಲಿ ತಮ್ಮನ್ನು ಹಸ್ತಾಂತರಿಸುವ ನಿರ್ಣಯದ ವಿರುದ್ಧ ಬ್ರಿಟನ್ನಿನ ಸುಪ್ರೀಮ್ ಕೋರ್ಟ್ ನಲ್ಲಿ ಮನವಿಯೊಂದನ್ನು ಸಲ್ಲಿಸಲು ಅನುಮತಿ ನಿರಾಕರಿಸಿದ್ದರಿಂದ ಅಸ್ಸಾಂಜೆ ಹಿನ್ನಡೆ ಅನುಭವಿಸಬೇಕಾಯಿತು. ಅಷ್ಟಾಗಿಯೂ ಅವರು ಸರ್ಕಾರದ ನಿರ್ಣಯವನ್ನು ಪ್ರಶ್ನಿಸುವ ಅವಕಾಶ ಇನ್ನೂ ಹೊಂದಿದ್ದಾರೆ.

ಇದನ್ನೂ ಓದಿ:   Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್