ಪುಟಿನ್​​​ ಹತ್ಯೆಗೆ ರಷ್ಯಾದಲ್ಲೇ ನಡೆದಿದೆಯಂತೆ ಸಂಚು; ವಿಷ ಪ್ರಾಶನದ ಭಯದಲ್ಲಿ 1000 ಉದ್ಯೋಗಿಗಳನ್ನು ಬದಲಿಸಿದ ಅಧ್ಯಕ್ಷ

ಹೀಗೆ ಪುಟಿನ್​​ರನ್ನು ಕೊಂದಾದರೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ಫೆಡರಲ್​ ಸೆಕ್ಯೂರಿಟಿ ಸರ್ವೀಸ್​​ ನಿರ್ದೇಶಕ ಅಲೆಕ್ಸಾಂಡರ್ ಬೊರ್ಟ್ನಿಕೋವ್ (70) ಪ್ರಮುಖರು ಎಂದು ಉಕ್ರೇನ್​ ಗುಪ್ತಚರ ದಳ ಹೇಳಿದೆ.

ಪುಟಿನ್​​​ ಹತ್ಯೆಗೆ ರಷ್ಯಾದಲ್ಲೇ ನಡೆದಿದೆಯಂತೆ ಸಂಚು; ವಿಷ ಪ್ರಾಶನದ ಭಯದಲ್ಲಿ 1000 ಉದ್ಯೋಗಿಗಳನ್ನು ಬದಲಿಸಿದ ಅಧ್ಯಕ್ಷ
ವ್ಲಾಡಿಮಿರ್ ಪುಟಿನ್
Follow us
TV9 Web
| Updated By: Lakshmi Hegde

Updated on: Mar 23, 2022 | 6:12 PM

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಸುಮಾರು 1000 ಮಂದಿ ವೈಯಕ್ತಿಕ ಸಿಬ್ಬಂದಿ (Personal Staff)ಯನ್ನು ಕೆಲಸದಿಂದ ತೆಗೆದು ಹಾಕಿ, ಖಾಲಿ ಇರುವ ಹುದ್ದೆಗೆ ಬೇರೆಯವರನ್ನು ತೆಗೆದುಕೊಂಡಿದ್ದಾರೆ. ಫೆಬ್ರವರಿಯಲ್ಲೇ ಪುಟಿನ್ ಈ ಕೆಲಸ ಮಾಡಿದ್ದಾಗಿ ವರದಿಯಾಗಿದೆ. ಹೀಗೆ ಕೆಲಸ ಕಳೆದುಕೊಂಡವರಲ್ಲಿ ಅಡುಗೆಯವರು, ಲಾಂಡ್ರಿಯವರು, ಬಾಡಿಗಾರ್ಡ್​​ಗಳೂ ಸೇರಿದ್ದಾರೆ. ಇದಕ್ಕೆ ಕಾರಣ ವಿಷಪ್ರಾಶನದ ಭಯವಂತೆ. ರಷ್ಯಾದಲ್ಲಿ ಆಡಳಿತದಲ್ಲಿರುವ ಆಯ್ದ ಕೆಲವು ಪ್ರಮುಖರೆಲ್ಲ ಸೇರಿಕೊಂಡು ಪುಟಿನ್​​ರಿಗೆ ವಿಷವುಣಿಸಿ ಕೊಂದು ನಂತರ ಅದೊಂದು ಅಪಘಾತ ಎಂದು ಬಿಂಬಿಸುವ ಸಂಚು ರೂಪಿಸಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಹತ್ತಿರದ 1000 ಉದ್ಯೋಗಿಗಳನ್ನು ಬದಲಿಸಿದ್ದಾರೆ ಎಂದು ಉಕ್ರೇನ್​ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿದ್ದಾಗಿ ಡೇಲಿ ಮೇಲ್​ ವರದಿ ಮಾಡಿದೆ.

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರುವುದು ಆ ರಾಷ್ಟ್ರದವರಿಗೇ ಅನೇಕರಿಗೆ ಇಷ್ಟವಿಲ್ಲ. ಈಗಂತೂ ಉಕ್ರೇನ್​ ಮೇಲೆ ಆಕ್ರಮಣ ಮಾಡಿದೆ ಎಂಬ ಕಾರಣಕ್ಕೆ ರಷ್ಯಾದ ಮೇಲೆ ವಿವಿಧ ಪ್ರಮುಖ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಿವೆ. ಹೀಗಾಗಿ ರಷ್ಯಾ ಆರ್ಥಿಕತೆಯೂ ವೇಗವಾಗಿ ಕುಸಿಯುತ್ತಿದೆ. ಅಷ್ಟಾದರೂ ಹಠ ಬಿಡದೆ ಯುದ್ಧ ಮುಂದುವರಿಸುತ್ತಿರುವ ಪುಟಿನ್​​ರನ್ನು ಹತ್ಯೆ ಮಾಡಿಯಾದರೂ ಯುದ್ಧ ನಿಲ್ಲಿಸಬೇಕು. ಅವರ ಜಾಗದಲ್ಲಿ ಬೇರೆ ಅಧ್ಯಕ್ಷನನ್ನು ನೇಮಕ ಮಾಡಬೇಕು. ಈ ಮೂಲಕ ನಿರ್ಬಂಧಗಳನ್ನು ತೆಗೆದು, ರಷ್ಯಾ ಆರ್ಥಿಕತೆ ಅಭಿವೃದ್ಧಿ ಮಾಡಬೇಕು ಎಂಬ ಸಂಚು ನಡೆಯುತ್ತಿದೆ ಎಂದು ಹೇಳಲಾಗಿದೆ.

ಹೀಗೆ ಪುಟಿನ್​​ರನ್ನು ಕೊಂದಾದರೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ಫೆಡರಲ್​ ಸೆಕ್ಯೂರಿಟಿ ಸರ್ವೀಸ್​​ ನಿರ್ದೇಶಕ ಅಲೆಕ್ಸಾಂಡರ್ ಬೊರ್ಟ್ನಿಕೋವ್ (70) ಪ್ರಮುಖರು ಎಂದು ಉಕ್ರೇನ್​ ಗುಪ್ತಚರ ದಳ ಹೇಳಿದೆ. ಹೀಗೆ ಒಂದೆಡೆ ಉಕ್ರೇನ್​ನಲ್ಲಿ ಯುದ್ಧ ನಡೆಯುತ್ತಿದ್ದರೆ, ಇನ್ನೊಂದೆಡೆ ಪುಟಿನ್​ ವೈಯಕ್ತಿಕ ಬದುಕಿನ ಕುರಿತೂ ಸಿಕ್ಕಾಪಟೆ ಚರ್ಚೆ ನಡೆಯುತ್ತಿದೆ. ಅವರಿಗೋ ಗಂಭೀರ ಮಾನಸಿಕ ಅನಾರೋಗ್ಯವಿದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ವಿವಾಹ ಲೈಸೆನ್ಸ್ ಅಲ್ಲ; ಹೆಂಡತಿ ಮೇಲೆ ರೇಪ್​ ಮಾಡುವ ಗಂಡನಿಗೆ ವಿನಾಯ್ತಿ ಇರಬಾರದು, ಶಾಸಕಾಂಗ ಚಿಂತನೆ ನಡೆಸಲಿ: ಹೈಕೋರ್ಟ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ