Viral Video: ಪಾರ್ಟಿ ವಿಡಿಯೋ ಸೋರಿಕೆ ನಂತರ ಡ್ರಗ್ಸ್ ಪರೀಕ್ಷೆಗೆ ಒಳಗಾದ ಫಿನ್​ಲ್ಯಾಂಡ್ ಪ್ರಧಾನಿ

ಪಾರ್ಟಿಯೊಂದರಲ್ಲಿ ತಮ್ಮ ನೃತ್ಯ ಮತ್ತು ತುಟಿ ಸಿಂಕ್ ಮಾಡುವ ಹಾಡುಗಳ ವಿಡಿಯೋ ಸೋರಿಕೆಯಾಗಿ ಟೀಕೆಗೆ ಗುರಿಯಾಗಿದ್ದ ಫಿನ್​​ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರು, ಡ್ರಗ್ಸ್ ಸೇವನೆ ಪರೀಕ್ಷೆಗೆ ಒಳಗಾಗಿದ್ದಾರೆ.

Viral Video: ಪಾರ್ಟಿ ವಿಡಿಯೋ ಸೋರಿಕೆ ನಂತರ ಡ್ರಗ್ಸ್ ಪರೀಕ್ಷೆಗೆ ಒಳಗಾದ ಫಿನ್​ಲ್ಯಾಂಡ್ ಪ್ರಧಾನಿ
ಪಾರ್ಟಿಯೊಂದರಲ್ಲಿ ಡಾನ್ಸ್ ಮಾಡುತ್ತಿರುವ ಫಿನ್​​ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್
Edited By:

Updated on: Aug 21, 2022 | 4:43 PM

ಖಾಸಗಿ ಪಾರ್ಟಿಯೊಂದರಲ್ಲಿ ತಮ್ಮ ನೃತ್ಯ ಮತ್ತು ತುಟಿ ಸಿಂಕ್ ಮಾಡುವ ಹಾಡುಗಳ ವಿಡಿಯೋ ಸೋರಿಕೆಯಾಗಿ ಟೀಕೆಗೆ ಗುರಿಯಾಗಿದ್ದ ಫಿನ್​​ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರು, ಡ್ರಗ್ಸ್ ಸೇವನೆ ಪರೀಕ್ಷೆಗೆ ಒಳಗಾಗಿದ್ದಾರೆ. ಸ್ವತಃ ಪ್ರಧಾನಿಯವರೇ ಈ ಹೇಳಿಕೆಯನ್ನು ನೀಡಿದ್ದಾರೆ. “ನಾನು ಸ್ನೇಹಿತರೊಂದಿಗೆ ಮಾತ್ರ ಮದ್ಯ ಸೇವಿಸಿದ್ದೇನೆ. ಅದಾಗ್ಯೂ ತನ್ನ ಸ್ವಂತ ಕಾನೂನು ರಕ್ಷಣೆಗಾಗಿ ಡ್ರಗ್ ಪರೀಕ್ಷೆಯನ್ನು ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

“ನನ್ನ ಸ್ವಂತ ಕಾನೂನು ರಕ್ಷಣೆಗಾಗಿ ನಾನು ಡ್ರಗ್ ಪರೀಕ್ಷೆಯನ್ನು ತೆಗೆದುಕೊಂಡಿದ್ದೇನೆ, ಅದರ ಫಲಿತಾಂಶ ಸುಮಾರು ಒಂದು ವಾರದಲ್ಲಿ ಬರಲಿದೆ” ಎಂದು ಮರಿನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಸೋಸಿಯೇಟೆಡ್ ಪ್ರೆಸ್‌ನ ವರದಿಯ ಪ್ರಕಾರ, ಈ ಬಗ್ಗೆ Hufvudstadsbladet ಪತ್ರಿಕೆ ವರದಿ ಮಾಡಿದೆ.

ಪಾರ್ಟಿಯೊಂದರಲ್ಲಿ ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಮತ್ತು ಇತರ ಐವರು ಹಾಡೊಂದಕ್ಕೆ ಲಿಪ್ ಸಿಂಕ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ಪ್ರಧಾನಿ ಲಿಪ್ ಸಿಂಕ್ ಮಾಡುವಾಗ ಮೊಣಕಾಲುಗಳ ಮೇಲೆ ನಿಂತು ಕೊಂಚ ಮಾದಕವಾಗಿ ನೃತ್ಯ ಮಾಡಿದ್ದಾರೆ. ತಾನು ಓರ್ವ ಪ್ರಧಾನಿಯೆಂದು ಅರಿತುಕೊಳ್ಳದೆ ಈ ರೀತಿ ವರ್ತನೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು. ಅಷ್ಟೇ ಅಲ್ಲದೆ ಅವರು ಡ್ರಗ್ಸ್ ತೆಗೆದುಕೊಂಡಿರಬಹುದು ಎಂಬ ಪ್ರಶ್ನೆಗಳನ್ನೂ ಎತ್ತಲಾಗಿತ್ತು.

ಟೀಕೆಗೆ ಪ್ರತಿಕ್ರಿಯಿಸಿದ ಸನ್ನಾ ಮರಿನ್, ವಾರಾಂತ್ಯದಲ್ಲಿ ಯಾವುದೇ ಸರ್ಕಾರಿ ಸಭೆಗಳನ್ನು ಹೊಂದಿರಲಿಲ್ಲ, ನನಗೆ ಸ್ವಲ್ಪ ಸಮಯವಿದೆ ಮತ್ತು ನಾನು ಅದನ್ನು ನನ್ನ ಸ್ನೇಹಿತರೊಂದಿಗೆ ಕಳೆದಿದ್ದೇನೆ. ಆದರೆ ನಾನು ಕಾನೂನುಬಾಹಿರವಾಗಿ ಏನನ್ನೂ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಪಾರ್ಟಿ ಯಾವಾಗ ನಡೆಯಿತು ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಸನ್ನಾ ಮರಿಮ್ ಪಾರ್ಟಿಯಲ್ಲಿ ಭಾಗಿಯಾಗಿ ಟೀಕೆಗೆ ಗುರಿಯಾಗಿರುವುದು ಇದೇ ಮೊದಲಲ್ಲ. 36 ವರ್ಷದ ಸನ್ನಾ ಮರಿನ್ ಕಳೆದ ವರ್ಷ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:39 am, Sat, 20 August 22