ವರ್ಜೀನಿಯಾ: ಅಮೆರಿಕದ (America) ವರ್ಜೀನಿಯಾ (virigina) ರಾಜ್ಯದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ (Walmart) ಇಂದು (ಬುಧವಾರ) ಸಾಮೂಹಿಕ ಗುಂಡಿನ ದಾಳಿ ನಡೆದಿದೆ. VA ದಲ್ಲಿನ ವಾಲ್‌ಮಾರ್ಟ್ ಸೂಪರ್‌ಸ್ಟೋರ್‌ನೊಳಗೆ ಗುಂಡಿನ ದಾಳಿ ನಡೆದು ಹಲವು ಸಾವು- ನೋವುಗಳು ಸಂಭವಿಸಿದೆ. ಪೊಲೀಸ್ ವರದಿಯ ಪ್ರಕಾರ ಒಟ್ಟು 10 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ, ವಾಲ್‌ಮಾರ್ಟ್‌ನಲ್ಲಿನ ಮ್ಯಾನೇಜರ್ ಅನೇಕ ಉದ್ಯೋಗಿಗಳಿಗೆ ಗುಂಡು ಹಾರಿಸಲು ಪ್ರಾರಂಭಿಸಿದರು.
ಚೆಸಾಪೀಕ್ ಪೋಲೀಸರು ಪ್ರಕಾರ, Blvd ನ ಸ್ವಲ್ಪ ದೂರದಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ, ಇದರ ಹಿಂದೆ ಅನೇಕ ಶಂಕಿತ ವ್ಯಕ್ತಿಗಳು ಇದ್ದರೆ ಎಂದು ಮಾಹಿತಿ ನೀಡಿದ್ದಾರೆ. ಗುಂಡಿನ ದಾಳಿಯಲ್ಲಿ ಹಲವು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ, ಆದರೆ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
BREAKING?: A mass shooting has occurred at a Walmart in Chesapeake, Virginia. Video we’ve obtained from Walmart employees outside the store show multiple police cars arriving and also employees recounting what happened. pic.twitter.com/dB4X4ii9yE
— Officer Lew (@officer_Lew) November 23, 2022
ಇದನ್ನು ಓದಿ: ಅಮೆರಿಕದ ನೈಟ್ ಕ್ಲಬ್ನಲ್ಲಿ ಗುಂಡಿನ ದಾಳಿ: 5 ಸಾವು, 18 ಮಂದಿಗೆ ಗಾಯ
ಪೊಲೀಸ್ ವಕ್ತಾರರು WAVY ಯ ಮಿಚೆಲ್ ವುಲ್ಫ್‌ಗೆ 10 ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿಲ್ಲ ಎಂದು ಹೇಳಿದರು. ಶೂಟರ್ ಉದ್ಯೋಗಿಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಗುಂಡಿನ ದಾಳಿಯಲ್ಲಿ ಶೂಟರ್ ಸಾವನ್ನಪ್ಪಿದ್ದಾನೆ. ಅಧಿಕಾರಿಗಳು ವಾಲ್‌ಮಾರ್ಟ್ ಸೂಪರ್ ಸೆಂಟರ್ನಲ್ಲಿ ಕಾರ್ಯಚಾರಣೆಯನ್ನು ನಡೆಸುತ್ತಿದ್ದಾರೆ.
ವಿದೇಶಿಸ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:31 am, Wed, 23 November 22