Vladimir Putin: ಐದನೇ ಅವಧಿಗೆ ರಷ್ಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್
ಮಂಗಳವಾರ ಸಮಾರಂಭದಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ದೂರ ಉಳಿದಿವೆ. "ಇಲ್ಲ, ಆ ಸಮಾರಂಭದಲ್ಲಿ ನಾವು ಪ್ರತಿನಿಧಿಯನ್ನು ಹೊಂದಿರುವುದಿಲ್ಲ" . "ನಾವು ಖಂಡಿತವಾಗಿಯೂ ಆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಯುತವೆಂದು ಪರಿಗಣಿಸಲಿಲ್ಲ. ಆದರೆ ಅವರು ರಷ್ಯಾದ ಅಧ್ಯಕ್ಷರಾಗಿದ್ದಾರೆ. ಅವರು ಆ ಸಾಮರ್ಥ್ಯದಲ್ಲಿ ಮುಂದುವರಿಯಲಿದ್ದಾರೆ ಎಂದು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸೋಮವಾರ ಹೇಳಿದ್ದಾರೆ

ಮಾಸ್ಕೋ ಮೇ 07: ಉಕ್ರೇನ್ ಮೇಲೆ ರಷ್ಯಾ (Russia) ನಡೆಸುತ್ತಿರುವ ಯುದ್ಧದಿಂದಾಗಿ ಅಮೆರಿಕ ಮತ್ತು ಇತರ ಹಲವಾರು ಪಾಶ್ಚಿಮಾತ್ಯ ದೇಶಗಳು ಬಹಿಷ್ಕರಿಸಿದ ಕ್ರೆಮ್ಲಿನ್ ಸಮಾರಂಭದಲ್ಲಿ ವ್ಲಾಡಿಮಿರ್ ಪುಟಿನ್ (Vladimir Putin) ಮಂಗಳವಾರ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. 1999 ರಿಂದ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಪುಟಿನ್, ಹತ್ತಾರು ಸಾವಿರ ಸೈನಿಕರನ್ನು ಉಕ್ರೇನ್‌ಗೆ (Ukraine) ಕಳುಹಿಸಿದ ಎರಡು ವರ್ಷಗಳ ನಂತರ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಮುಂದುವರಿಸುತ್ತಿದ್ದಾರೆ. ಅಂದಹಾಗೆ 71 ನೇ ವಯಸ್ಸಿನಲ್ಲಿಯೂ, ಪುಟಿನ್ ದೇಶೀಯ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ, ಅವರು ಪಾಶ್ಚಿಮಾತ್ಯ ದೇಶಗಳೊಂದಿಗೆ ಮುಖಾಮುಖಿಯಾಗಿದ್ದು, ರಷ್ಯಾವನ್ನು ಸೋಲಿಸಲು ಮತ್ತು ವಿಭಜಿಸಲು ಪ್ರಯತ್ನಿಸಲು ಉಕ್ರೇನ್ ಅನ್ನು ಅವರು ವಾಹನವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಮಾರಂಭದ ಮೊದಲು ರಾಯಿಟರ್ಸ್ ಪ್ರತಿನಿಧ ಜತೆ ಮಾತನಾಡಿದ ಪುಟಿನ್ ಆಪ್ತ ಸೆರ್ಗೆಯ್ ಚೆಮೆಜೊವ್, “ರಷ್ಯಾಕ್ಕೆ, ಇದು ನಮ್ಮ ಹಾದಿಯ ಮುಂದುವರಿಕೆಯಾಗಿದೆ, ಇದು ಸ್ಥಿರತೆ. ನೀವು ಬೀದಿಯಲ್ಲಿರುವ ಯಾವುದೇ ನಾಗರಿಕರನ್ನು ಕೇಳಬಹುದು” ಎಂದಿದ್ದಾರೆ.
ಪ್ರಮಾಣ ವಚನ ಸಮಾರಂಭಕ್ಕೆ ಪುಟಿನ್ ಆಗಮಿಸಿದ್ದು ಹೀಗೆ
Russian national anthem plays in the Kremlin as Vladimir Putin assumes the presidency with 87.28% vote mandatepic.twitter.com/SteB6qPYgz
— COMBATE |🇵🇷 (@upholdreality) May 7, 2024
“ಅಧ್ಯಕ್ಷ ಪುಟಿನ್ ಮತ್ತೊಮ್ಮೆ ಚುನಾಯಿತರಾಗಿದ್ದು, ಅಧಿಕಾರ ಮುಂದುವರೆಸುತ್ತಾರೆ. ಆದಾಗ್ಯೂ ಪಶ್ಚಿಮವು ಬಹುಶಃ ಅದನ್ನು ಇಷ್ಟಪಡುವುದಿಲ್ಲ. ಆದರೆ ಹೊಸ ನೀತಿಗಳೊಂದಿಗೆ ಬಂದ ಕೆಲವು ರೀತಿಯ ಹೊಸ ವ್ಯಕ್ತಿಗಳಿಗಿಂತ ಪುಟಿನ್ ರಷ್ಯಾಕ್ಕೆ ಸ್ಥಿರತೆ ತಂದಿದ್ದಾರೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ಸೆರ್ಗೆಯ್ ಹೇಳಿದ್ದಾರೆ.
ಮಾರ್ಚ್‌ನಲ್ಲಿ ಪುಟಿನ್ ಅವರು ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದರು. ಅವರ ಅತ್ಯಂತ ಪ್ರಸಿದ್ಧ ಎದುರಾಳಿ ಅಲೆಕ್ಸಿ ನವಲ್ನಿ ಅವರು ಒಂದು ತಿಂಗಳ ಹಿಂದೆ ಹಠಾತ್ತನೆ ನಿಧನರಾದರು. ಇತರ ಪ್ರಮುಖ ವಿಮರ್ಶಕರು ಜೈಲಿನಲ್ಲಿದ್ದಾರೆ ಅಥವಾ ವಿದೇಶಕ್ಕೆ ಪಲಾಯನ ಮಾಡಲು ಒತ್ತಾಯಿಸಲ್ಪಟ್ಟರು.
ಮಂಗಳವಾರ ಸಮಾರಂಭದಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ದೂರ ಉಳಿದಿವೆ. “ಇಲ್ಲ, ಆ ಸಮಾರಂಭದಲ್ಲಿ ನಾವು ಪ್ರತಿನಿಧಿಯನ್ನು ಹೊಂದಿರುವುದಿಲ್ಲ” ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸೋಮವಾರ ಹೇಳಿದ್ದಾರೆ. “ನಾವು ಖಂಡಿತವಾಗಿಯೂ ಆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಯುತವೆಂದು ಪರಿಗಣಿಸಲಿಲ್ಲ. ಆದರೆ ಅವರು ರಷ್ಯಾದ ಅಧ್ಯಕ್ಷರಾಗಿದ್ದಾರೆ. ಅವರು ಆ ಸಾಮರ್ಥ್ಯದಲ್ಲಿ ಮುಂದುವರಿಯಲಿದ್ದಾರೆ ಎಂದಿದ್ದಾರೆ ಮಿಲ್ಲರ್.
ಇದನ್ನೂ ಓದಿ: China Knife Attack: ಚೀನಾದ ಆಸ್ಪತ್ರೆಯಲ್ಲಿ ಕಂಡ ಕಂಡವರ ಮೇಲೆ ಚಾಕುವಿನಿಂದ ಹಲ್ಲೆ, 10 ಮಂದಿ ಸಾವು
ಬ್ರಿಟನ್, ಕೆನಡಾ ಮತ್ತು ಹೆಚ್ಚಿನ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಪ್ರಮಾಣವಚನವನ್ನು ಬಹಿಷ್ಕರಿಸಲು ನಿರ್ಧರಿಸಿದವು, ಆದರೆ ಫ್ರಾನ್ಸ್ ತನ್ನ ರಾಯಭಾರಿಯನ್ನು ಕಳುಹಿಸುವುದಾಗಿ ಹೇಳಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Tue, 7 May 24



