Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಹ್ಯಾಕಾಶಕ್ಕೆ ಭಗವದ್ಗೀತೆ, ಉಪನಿಷದ್ ಕೊಂಡೊಯ್ದಿದ್ದ ಸುನಿತಾ ವಿಲಿಯಮ್ಸ್​ಗೆ ಗಣೇಶ ಲಕ್ ಚಾರ್ಮ್ ಅಂತೆ

Indian origin American Astronaut Sunita Williams and Lord Ganesha: ಮೂರನೇ ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸುತ್ತಿರುವ ಸುನೀತಾ ವಿಲಿಯಮ್ಸ್ ತಮ್ಮ ಜೊತೆ ಗಣೇಶನ ವಿಗ್ರಹವನ್ನು ಕೊಂಡೊಯತ್ತಿದ್ದಾರೆ. ಭಾರತ ಮೂಲದ ಅಮೆರಿಕನ್ ಗಗನಯಾತ್ರಿಯಾದ ಸುನೀತಾ ವಿಲಿಯಮ್ಸ್ ಅವರಿಗೆ ಗಣೇಶ ಲಕ್ ಚಾರ್ಮ್ ಅಂತೆ. ಈ ಹಿಂದಿನ ಎರಡು ಬಾಹ್ಯಾಕಾಶ ಪ್ರಯಾಣದಲ್ಲಿ ಅವರು ಭಗವದ್ಗೀತೆ, ಓಂ ಮತ್ತು ಉಪನಿಷದ್ ಗ್ರಂಥಗಳನ್ನು ತೆಗೆದುಕೊಂಡು ಹೋಗಿದ್ದರು.

ಬಾಹ್ಯಾಕಾಶಕ್ಕೆ ಭಗವದ್ಗೀತೆ, ಉಪನಿಷದ್ ಕೊಂಡೊಯ್ದಿದ್ದ ಸುನಿತಾ ವಿಲಿಯಮ್ಸ್​ಗೆ ಗಣೇಶ ಲಕ್ ಚಾರ್ಮ್ ಅಂತೆ
ಸುನೀತಾ ವಿಲಿಯಮ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2024 | 1:47 PM

ನವದೆಹಲಿ, ಮೇ 7: ಭಾರತ ಮೂಲದ ಅಮೆರಿಕನ್ ಗಗನಯಾತ್ರಿಯಾದ ಸುನೀತಾ ವಿಲಿಯಮ್ಸ್ (Sunita Williams) ಅವರಿಗೆ ಗಣೇಶ ಅದೃಷ್ಟದಾಯಕನಂತೆ. 58 ವರ್ಷದ ಅವರು ಇಂದು ಮಂಗಳವಾರ ಮೂರನೇ ಬಾರಿ ಗಗನಕ್ಕೆ ಹಾರುತ್ತಿದ್ದು, ಈ ವೇಳೆ ಗಣೇಶನ ವಿಗ್ರಹವನ್ನು ಕೊಂಡೊಯ್ಯಲಿದ್ದಾರೆ. ಹಿಂದೂ ದೇವರಾದ ಗಣೇಶ ನನಗೆ ಗುಡ್ ಲಕ್ ಚಾರ್ಮ್ (good luck charm) ಆಗಿದ್ದು, ಬಾಹ್ಯಾಕಾಶದಲ್ಲಿ ವಿಘ್ನ ವಿನಾಯಕನನ್ನು ಜೊತೆಯಲ್ಲಿ ಇರಿಸಿಕೊಳ್ಳಲು ಬಹಳ ಖುಷಿಯಾಗುತ್ತದೆ ಎಂದಿದ್ದಾರೆ ಸುನೀತಾ ವಿಲಿಯಮ್ಸ್. ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕ್ಯಾನವರಲ್ ಎಂಬಲ್ಲಿಂದ ಬೋಯಿಂಗ್ ಸಂಸ್ಥೆಯ ಸ್ಟಾರ್​ಲೈನರ್ ಸ್ಪೇಸ್​ಕ್ರಾಫ್ಟ್​ನಲ್ಲಿ ಹೋಗಲಿರುವ ಇಬ್ಬರು ಗಗನಯಾತ್ರಿಕರಲ್ಲಿ ಸುನೀತಾ ಕೂಡ ಒಬ್ಬರು. ಬುಚ್ ವಿಲ್ಮೋರ್ ಅವರು ಸುನೀತಾ ಜೊತೆ ಇರುವ ಇನ್ನೊಬ್ಬ ಯಾತ್ರಿ. ಬಾಹ್ಯಾಕಾಶದಲ್ಲಿರುವ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್​ಗೆ ಈ ಗಗನನೌಕೆ ತಲುಪಲಿದೆ.

ಸುನೀತಾ ವಿಲಿಯಮ್ಸ್ ಹುಟ್ಟಿದ್ದು ಅಮೆರಿಕದಲ್ಲೇ ಆದರೂ ಅವರ ಕುಟುಂಬದ ಮೂಲ ಗುಜರಾತ್. ಗಗನಯಾತ್ರೆ ಕೈಗೊಂಡ ಭಾರತ ಮೂಲದ ಮೊದಲ ಮಹಿಳೆ ಎನಿಸಿದ್ದಾರೆ. 2006 ಮತ್ತು 2012ರಲ್ಲಿ ಅವರು ಐಎಸ್​ಎಸ್​ಗೆ ಹೋಗಿ ಬಂದಿದ್ದರು. 2006ರಲ್ಲಿ ಬಾಹ್ಯಾಕಾಶಕ್ಕೆ ಹೋದಾಗ ಸುನೀತಾ ವಿಲಿಯಮ್ಸ್ ಭಗವದ್ಗೀತೆ ಪುಸ್ತಕ ತೆಗೆದುಕೊಂಡು ಹೋಗಿದ್ದರು. 2012ರಲ್ಲಿ ಉಪನಿಷದ್ ಗ್ರಂಥವನ್ನು ತೆಗೆದುಕೊಂಡು ಹೋಗಿದ್ದರು. ಈಗ ಮೂರನೇ ಫ್ಲೈಟ್​ನಲ್ಲಿ ಅವರು ಗಣೇಶನ ವಿಗ್ರಹವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಸುನೀತಾ ವಿಲಿಯಮ್ಸ್ ಈವರೆಗೆ ಏಳು ಬಾರಿ ಸ್ಪೇಸ್​ವಾಕ್ ಮಾಡಿದ್ದಾರೆ. 50 ಗಂಟೆ 40 ನಿಮಿಷ ಕಾಲ ಸ್ಪೇಸ್ ವಾಕ್ ಮಾಡಿದ್ದಾರೆ. ಇಷ್ಟು ಅವಧಿ ಸ್ಪೇಸ್ ವಾಕ್ ಮಾಡಿರುವ ಮೊದಲ ಮಹಿಳೆ ಎಂಬ ದಾಖಲೆ ಅವರದ್ದಾಗಿದೆ.

ಇದನ್ನೂ ಓದಿ: ಹೂವಿನ ಜೊತೆ ನಾರೂ ಸ್ವರ್ಗಕ್ಕೆ; ಚೀನಾದ ಮೂನ್ ಮಿಷನ್ ಜೊತೆ ಪಾಕಿಸ್ತಾನದ ಚಂದ್ರ ಯೋಜನೆ; ನೆರೆಯ ದೇಶಕ್ಕೆ ಹೊಸ ಇತಿಹಾಸ

ಅಮೆರಿಕ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸಿದೆ. ಸ್ಪೇಸ್​ಎಕ್ಸ್​ ಸಂಸ್ಥೆಯ ಡ್ರಾಗನ್ ಸ್ಪೇಸ್​ಕ್ರಾಫ್ಟ್ ಮತ್ತು ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಸ್ಪೇಸ್​ಕ್ರಾಫ್ಟ್ ಅನ್ನು ಈ ಕಾರ್ಯಕ್ಕೆ ಬಳಸಲು ಅಮೆರಿಕದ ನಾಸಾ ನಿರ್ಧರಿಸಿದೆ. ಬೋಯಿಂಗ್​ನ ಸ್ಟಾರ್​ಲೈನರ್ ಗಗನನೌಕೆ ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿರುವುದು. ಹೀಗಾಗಿ, ಬೋಯಿಂಗ್ ಸಂಸ್ಥೆಗೆ ಈ ಫ್ಲೈಟ್ ಬಹಳ ಮುಖ್ಯ ಘಟ್ಟವಾಗಿದೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಶೋಕ
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಶೋಕ
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ
ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ
ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ
ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು
ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ