ಹೂವಿನ ಜೊತೆ ನಾರೂ ಸ್ವರ್ಗಕ್ಕೆ; ಚೀನಾದ ಮೂನ್ ಮಿಷನ್ ಜೊತೆ ಪಾಕಿಸ್ತಾನದ ಚಂದ್ರ ಯೋಜನೆ; ನೆರೆಯ ದೇಶಕ್ಕೆ ಹೊಸ ಇತಿಹಾಸ
China's Chang'e-6 vs India's Chandrayaan-4, comparision: ಚೀನಾದ ಹೈನನ್ ಪ್ರಾಂತ್ಯದಿಂದ ಚೀನಾದ ಚಾಂಗ್-ಇ6 ಲೂನಾನ್ ಮಿಷನ್ ಶುಕ್ರವಾರ ಸಂಜೆ ಆರಂಭವಾಗಿದೆ. ಇದರಲ್ಲಿ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಸೆಟಿಲೈಟ್ಗಳೂ ಆಗಸಕ್ಕೆ ಚಿಮ್ಮುತ್ತಿವೆ. ಪಾಕಿಸ್ತಾನೀ ನಿರ್ಮಿತ ಐಕ್ಯೂಬ್ ಖಮರ್ ಚಂದ್ರನ ಕಕ್ಷೆಯಲ್ಲಿ ಸುತ್ತಾಡುವುದಕ್ಕೆ ಸೀಮಿತವಾಗಿರಲಿದೆ. ಚೀನಾದ ಲೂನಾರ್ ಪ್ರೋಬ್ ಚಂದ್ರನ ಆ ಅದೃಶ್ಯ ಬದಿಯಲ್ಲಿ ನೆಲಕ್ಕೆ ಇಳಿದು ಸ್ಯಾಂಪಲ್ ಸಂಗ್ರಹಿಸಿ ಭೂಮಿಗೆ ಮರಳಲಿದೆ. 2027ಕ್ಕೆ ನಿಗದಿಯಾಗಿರುವ ಭಾರತದ ನಾಲ್ಕನೇ ಚಂದ್ರಯಾನ ಕೂಡ ಇದೇ ರೀತಿ ಸ್ಯಾಂಪಲ್ ತರುವ ಗುರಿ ಹೊಂದಿದೆ.
ಬೀಜಿಂಗ್, ಮೇ 5: ಚಂದ್ರನ ಮತ್ತೊಂದು ಬದಿಯಿಂದ ಸ್ಯಾಂಪಲ್ಗಳನ್ನು ತರಲು ಚೀನಾ ಹೊಸ ಮೂನ್ ಮಿಷನ್ ಹಾರಿಬಿಟ್ಟಿದೆ. ಚೀನಾದ ದಕ್ಷಿಣ ಭಾಗದಲ್ಲಿರುವ ಹೈನಾನ್ ಪ್ರಾಂತ್ಯದಲ್ಲಿನ ವೆನ್ಚಾಂಗ್ ಸ್ಪೇಸ್ಕ್ರಾಫ್ಟ್ ಲಾಂಚ್ ಸೈಟ್ನಿಂದ ಚಾಂಗ್’ಇ-6 ಲೂನಾರ್ ಪ್ರೋಬ್ (Chang’e-6 moon mission) ಅನ್ನು ಕಳುಹಿಸಲಾಗಿದೆ. ಲಾಂಗ್ ಮಾರ್ಚ್-5 ವೈ8 ರಾಕೆಟ್ ಈ ಉಪಗ್ರಹವನ್ನು ಹೊತ್ತೊಯ್ದಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ಭೂಮಿಯಿಂದ ಕಾಣಿಸದ ಚಂದ್ರ ಇನ್ನೊಂದು ಭಾಗಕ್ಕೆ (other side of Moon) ಈ ಉಪಗ್ರಹ ತಲುಪಲಿದೆ. ಅಲ್ಲಿರುವ ಮಣ್ಣು, ಕಲ್ಲು ಇತ್ಯಾದಿ ಭಾಗಗಳನ್ನು ಸಂಗ್ರಹಿಸಿ ಮತ್ತೆ ವಾಪಸ್ ಬರಲಿದೆ. ಇದು ಯಶಸ್ವಿಯಾದಲ್ಲಿ ಆ ಭಾಗದಿಂದ ಸ್ಯಾಂಪಲ್ಗಳನ್ನು ತಂದ ಮೊದಲ ದೇಶವಾಗಲಿದೆ ಚೀನಾ.
ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಎಂಬಂತೆ ಪಾಕಿಸ್ತಾನ
ಚೀನಾದ ಈ ಚಾಂಗೀ ಲೂನಾರ್ ಪ್ರೋಬ್ನಲ್ಲಿ ಪಾಕಿಸ್ತಾನದ ಐಕ್ಯೂಬ್ ಕಮರ್ ಸೆಟಿಲೈಟ್ ಕೂಡ ಇದೆ. ಪಾಕಿಸ್ತಾನ ಮಾತ್ರವಲ್ಲ ಇನ್ನೂ ಕೆಲ ದೇಶಗಳ ಉಪಗ್ರಹಗಳನ್ನು ಚೀನಾದ ಈ ಮೂನ್ ಮಿಷನ್ ಆಗಸಕ್ಕೆ ತೆಗೆದುಕೊಂಡು ಹೋಗಿದೆ.
ಪಾಕಿಸ್ತಾನದ ಐಕ್ಯೂಬ್ ಖಮರ್ ಸೆಟಿಲೈಟ್ ಚಂದ್ರನ ಕಕ್ಷೆಗೆ ಸೀಮಿತವಾಗಿರಲಿದೆ. ಆ ಕಕ್ಷೆಯಲ್ಲಿ ಕೆಲ ತಿಂಗಳ ಕಾಲ ಸುತ್ತುತ್ತಾ ಚಂದ್ರನ ಮೇಲ್ಮೈನ ಉಪಗ್ರಹ ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ಮರಳಿಸುವ ಕಾರ್ಯ ಅದರದ್ದಾಗಿರುತ್ತದೆ.
ಇದನ್ನೂ ಓದಿ: ಪಾಠ ಕಲಿಯದ ನೇಪಾಳ; ಭಾರತದ ಪ್ರದೇಶಗಳನ್ನು ತನ್ನ ನೋಟಿನಲ್ಲಿ ಮುದ್ರಿಸಲು ನಿರ್ಧಾರ
ಪಾಕಿಸ್ತಾನಕ್ಕೆ ಇದು ಹೊಸ ಇತಿಹಾಸ
ಪಾಕಿಸ್ತಾನ ಇದೇ ಮೊದಲ ಬಾರಿಗೆ ಚಂದ್ರನ ಕಕ್ಷೆಗೆ ಉಪಗ್ರಹ ಕಳುಹಿಸುತ್ತಿರುವುದು. ಈ ಕಾರ್ಯದಲ್ಲಿ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಇದು ಹೊಸ ಇತಿಹಾಸ ಪುಟ ಶುರುವಾದಂತಾಗುತ್ತದೆ. ಚೀನಾದ ಶಾಂಘೈ ಯೂನಿವರ್ಸಿಟಿಯ ಸಹಯೋಗದೊಂದಿಗೆ ಪಾಕಿಸ್ತಾನದ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಟೆಕ್ನಾಲಜಿ (ಐಎಸ್ಟಿ) ಮತ್ತು ನ್ಯಾಷನಲ್ ಸ್ಪೇಸ್ ಏಜೆನ್ಸಿ ಸುಪಾರ್ಕೋ ಈ ಪಾಕಿಸ್ತಾನೀ ಉಪಗ್ರಹವನ್ನು ತಯಾರಿಸಿದೆ.
ಭಾರತದ ಚಂದ್ರಯಾನ-4 ಮತ್ತು ಚಾಂಗ್‘ಇ-6 ಯೋಜನೆಗಳ ಹೋಲಿಕೆ
ಶುಕ್ರವಾರ ಆಗಸಕ್ಕೆ ಚಿಮ್ಮಿದ ಚೀನಾದ ಚಾಂಗ್-ಇ6 ಲೂನಾರ್ ಪ್ರೋಬ್ ಯೋಜನೆ ಚಂದ್ರನ ಇನ್ನೊಂದು ಬದಲಿಯಿಂದ ಸ್ಯಾಂಪಲ್ ತರುವ ಗುರಿ ಹೊಂದಿದೆ. ಹಿಂದಿನ ಮಿಷನ್ನಲ್ಲಿ ಚಂದ್ರನ ಈ ಬದಿಯಿಂದ ಸ್ಯಾಂಪಲ್ ತರಲಾಗಿದೆ. 2026ರಲ್ಲಿ ಏಳನೇ ಮಿಷನ್ ನಡೆಯಲಿದೆ. ಆಗ ಚಂದ್ರನ ಸೌತ್ ಪೋಲ್ನ ಮೇಲ್ಮೈನ ಪರಿಸರ, ನೀರು, ಮಂಜುಗಡ್ಡೆ ಮತ್ತಿತರ ಅಂಶಗಳ ಸರ್ವೇಕ್ಷಣೆ ಮಾಡುವ ಗುರಿ ಇದೆ. 2030ರಷ್ಟರಲ್ಲಿ ಚಂದ್ರನ ಅಂಗಳಕ್ಕೆ ಮನುಷ್ಯನನ್ನು ಇಳಿಸುವ ದೊಡ್ಡ ಗುರಿಯ ಭಾಗವಾಗಿ ಈ ಮಿಷನ್ಗಳು ಪೂರ್ವಭಾವಿಯಾಗಿ ನಡೆಯುತ್ತಿವೆ.
ಇದನ್ನೂ ಓದಿ: ಭಾರತ, ಚೀನಾ, ಜಪಾನ್ಗೆ ಜೆನಾಫೋಬಿಯಾದ ಬಣ್ಣ ಹಚ್ಚಿದ ಅಮೆರಿಕ ಅಧ್ಯಕ್ಷ ಜೋ ಬೈಡನ್; ಏನಿದು ಜೆನಫೋಬಿಯಾ?
ಇನ್ನು, ಭಾರತದ ಮೂರನೇ ಚಂದ್ರಯಾನದಲ್ಲಿ ಉಪಗ್ರಹ ಅಥವಾ ಲೂನಾರ್ ಪ್ರೋಬ್ ಚಂದ್ರನ ಅಂಗಳಕ್ಕೆ ಇಳಿಯಲು ಯಶಸ್ವಿಯಾಗಿತ್ತು. 2027ಕ್ಕೆ ನಾಲ್ಕನೇ ಚಂದ್ರಯಾನ ನಡೆಯಲಿದೆ. ಚಂದ್ರನ ಇನ್ನೊಂದು ಬದಿಯಿಂದ ಮಣ್ಣಿನ ಸ್ಯಾಂಪಲ್ ತರಲಿದೆ. ಅಂದರೆ ಚೀನಾ ಈ ವರ್ಷ ಮಾಡಲಿರುವುದನ್ನು ಭಾರತ 3 ವರ್ಷದ ಬಳಿಕ ಪ್ರಯತ್ನಿಸಲಿದೆ. 2040ರೊಳಗೆ ಗಗನಯಾತ್ರಿಯನ್ನು ಚಂದ್ರನ ಅಂಗಳದಲ್ಲಿ ಇಳಿಸುವುದು ಭಾರತದ ಗುರಿಯಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ