ರಷ್ಯಾದಲ್ಲಿ ಬಂಡಾಯ ತೀವ್ರ, ಮಾಸ್ಕೋದತ್ತ 30 ಸಾವಿರ ಹೋರಾಟಗಾರರು; ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಪುಟಿನ್

|

Updated on: Jun 24, 2023 | 12:50 PM

ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೊಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತರೂ ಆಗಿದ್ದರು ಎನ್ನಲಾಗಿದೆ. ಈ ಗುಂಪು ಪುಟಿನ್ ಅವರ ದೊಡ್ಡ ಶಕ್ತಿಯಾಗಿತ್ತು. ಆದರೆ ಇಂದು ರಷ್ಯಾಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ರಷ್ಯಾದಲ್ಲಿ ಬಂಡಾಯ ತೀವ್ರ, ಮಾಸ್ಕೋದತ್ತ 30 ಸಾವಿರ ಹೋರಾಟಗಾರರು; ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಪುಟಿನ್
ಸಾಂದರ್ಭಿಕ ಚಿತ್ರ
Follow us on

ಮಾಸ್ಕೋ: ದಂಗೆಯೆದ್ದಿರುವ ವ್ಯಾಗ್ನರ್ ಗುಂಪು ರಷ್ಯಾದ (Russia) ಸೈನ್ಯದ ಮೇಲೆಯೇ ದಾಳಿಗೆ ಮುಂದಾಗಿದ್ದು, ಉಕ್ರೇನ್​ ವಿರುದ್ಧದ ಯುದ್ಧದಲ್ಲಿ ತೊಡಗಿಸಿಕೊಂಡಿರುವ ರಷ್ಯಾ ಸೇನೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾದ ವಿರುದ್ಧ ಸಮರ ಸಾರಿದ್ದು, ಈ ಗುಂಪಿನ 30 ಸಾವಿರ ಹೋರಾಟಗಾರರು ಮಾಸ್ಕೋದತ್ತ ಧಾವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದೂ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಭದ್ರತಾ ದೃಷ್ಟಿಯಿಂದ ರಾಜಧಾನಿ ಮಾಸ್ಕೋಗೆ ಬರುವ ಹೆದ್ದಾರಿಯನ್ನು ಮುಚ್ಚಲಾಗಿದೆ. ಈ ಮಧ್ಯೆ, ರಷ್ಯಾದ ಸೈನ್ಯದ ಮತ್ತೊಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ವ್ಯಾಗ್ನರ್ ಗುಂಪು ಹೇಳಿಕೊಂಡಿದೆ. ರಷ್ಯಾ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಇರುವ ರೊಸ್ಟೊವ್​​ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರಬರದಂತೆ ಜನರಿಗೆ ರೊಸ್ಟೊವ್ ರಾಜ್ಯಪಾಲ ವಸಿಲಿ ಗೊಲುಬೆವ್ ಮನವಿ ಮಾಡಿದ್ದಾರೆ.

ಉಕ್ರೇನ್‌ ಯುದ್ಧದಲ್ಲಿ ಗೆಲುವಿನ ಭರವಸೆಯಲ್ಲಿ ರಷ್ಯಾದ ಅಧ್ಯಕ್ಷರು ಇದ್ದಾಗಲೇ ಈ ಬೆಳವಣಿಗೆ ನಡೆದಿದ್ದು, ದಂಗೆಯ ಅಪಾಯ ಎದುರಾಗಿದೆ. ಕ್ರೆಮ್ಲಿನ್ ಅನ್ನು ರಕ್ಷಿಸಲು ಟ್ಯಾಂಕ್‌ಗಳನ್ನು ನಿಯೋಜಿಸಲಾಗಿದೆ. ಮಾಸ್ಕೋದ ಬೀದಿಗಳು ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳಿಂದ ತುಂಬಿವೆ. ತನ್ನ ದಂಗೆಗೆ ರಷ್ಯಾದ ಖಾಸಗಿ ಸೇನೆಯೇ ಕಾರಣ ಎಂದು ಪುಟಿನ್ ಭಾವಿಸಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ರೊಸ್ಟೊವ್‌ನಲ್ಲಿರುವ ರಷ್ಯಾದ ಸೈನ್ಯದ ಮಿಲಿಟರಿ ಪ್ರಧಾನ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಪ್ರಿಗೊಜಿನ್ ಹೇಳಿದ್ದಾರೆ.

ಇದನ್ನೂ ಓದಿ: Russia: ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾಕ್ಕೀಗ ದಂಗೆಯ ಬಿಸಿ; ಸೇನೆ ವಿರುದ್ಧವೇ ಶುರುವಾಯ್ತು ಬಂಡಾಯ

ಪುಟಿನ್ ಬತ್ತಳಿಕೆಯ ಪ್ರಮುಖ ಅಸ್ತ್ರವೇ ರಷ್ಯಾಕ್ಕೆ ತಿರುಗುಬಾಣವಾಯ್ತು

ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೊಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತರೂ ಆಗಿದ್ದರು ಎನ್ನಲಾಗಿದೆ. ಈ ಗುಂಪು ಪುಟಿನ್ ಅವರ ದೊಡ್ಡ ಶಕ್ತಿಯಾಗಿತ್ತು. ಆದರೆ ಇಂದು ರಷ್ಯಾಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಮೂಲಗಳ ಪ್ರಕಾರ, ವ್ಯಾಗ್ನರ್ ಗುಂಪು ಉಕ್ರೇನಿಯನ್ ಸೈನ್ಯದ ಪರವಾಗಿದ್ದು, ಇದೀಗ ರಷ್ಯಾ ವಿರುದ್ಧ ದಂಗೆ ಎದ್ದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ