‘ನಮಗೆ ಚೀನಾಕ್ಕೆ ಬಲವಂತ ಮಾಡಲು ಸಾಧ್ಯವೇ ಇಲ್ಲ..ನಮ್ಮ ಸದಸ್ಯ ರಾಷ್ಟ್ರಗಳು ಇದಕ್ಕೆ ಸಹಕಾರ ನೀಡಬೇಕು’- ಡಬ್ಲ್ಯೂಎಚ್​ಒ

ಕೊರೊನಾ ಮೂಲದ ಬಗ್ಗೆ ಹಲವು ರೀತಿಯ ವರದಿಗಳು ಹೊರಬೀಳುತ್ತಿವೆ. ಸೋಂಕಿನ ಮೂಲದ ಪತ್ತೆ ಕಾರ್ಯಕ್ಕಾಗಿ ಈ ವರ್ಷದ ಪ್ರಾರಂಭದಲ್ಲಿ ಡಬ್ಲ್ಯೂಎಚ್​ಒ ತಜ್ಞರ ತಂಡ ಚೀನಾಕ್ಕೆ ಭೇಟಿ ಕೊಟ್ಟಿತ್ತು. ಆದರೆ ನಿರೀಕ್ಷಿಸಿದಷ್ಟು ಮಾಹಿತಿ ಹೊರಬಿದ್ದಿರಲಿಲ್ಲ.

‘ನಮಗೆ ಚೀನಾಕ್ಕೆ ಬಲವಂತ ಮಾಡಲು ಸಾಧ್ಯವೇ ಇಲ್ಲ..ನಮ್ಮ ಸದಸ್ಯ ರಾಷ್ಟ್ರಗಳು ಇದಕ್ಕೆ ಸಹಕಾರ ನೀಡಬೇಕು’- ಡಬ್ಲ್ಯೂಎಚ್​ಒ
ಮೈಕ್ ರಯಾನ್​

ಕೊವಿಡ್​ 19 ಸೋಂಕಿನ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ಚೀನಾವನ್ನು ಪದೇಪದೇ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ತಿಳಿಸಿದೆ. ಆದರೆ ವೈರಸ್​ ಎಲ್ಲಿಂದ ಹೊರಹೊಮ್ಮಿತು ಎಂಬುದನ್ನು ಪತ್ತೆ ಹಚ್ಚಲು ಅಗತ್ಯವಿರುವ ಅಧ್ಯಯನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಸ್ತಾವನೆಯನ್ನು ಇಡಬಹುದಷ್ಟೇ ಎಂದೂ ವಿಶ್ವಆರೋಗ್ಯ ಸಂಸ್ಥೆ ತಿಳಿಸಿದೆ. ಸದ್ಯ ಅನೇಕ ರಾಷ್ಟ್ರಗಳು ಕೊರೊನಾ ವೈರಸ್​​ನ ಮೂಲ ಕಂಡು ಹಿಡಿಯುವ ಸಂಬಂಧ ತನಿಖೆ ಶುರು ಮಾಡಿವೆ. ಅದರಲ್ಲೂ ಅಮೆರಿಕ ಗುಪ್ತಚರ ದಳಗಳು ಕೊರೊನಾ ವುಹಾನ್​ ಲ್ಯಾಬ್​​ನಿಂದಲೇ ಹೊರಬಂದಿದ್ದು ಎಂದೂ ವರದಿ ನೀಡಿವೆ. ಈ ಹೊತ್ತಲ್ಲಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಡಬ್ಲ್ಯೂಎಚ್​ಒ ಹಿರಿಯ ಅಧಿಕಾರಿ ಮೈಕ್ ರಯಾನ್​​ ಹೀಗೆಂದು ಉತ್ತರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿ ಮೈಕ್​ ರಯಾನ್​, ಕೊರೊನಾ ವೈರಸ್​ ಮೂಲ ತಿಳಿಸುವಂತೆ ಚೀನಾವನ್ನು ಒತ್ತಾಯಿಸುವ ಅಧಿಕಾರ ನಮಗೆ ಇಲ್ಲ. ಈ ನಿಟ್ಟಿನಲ್ಲಿ ನಮ್ಮೆಲ್ಲ ಸದಸ್ಯ ರಾಷ್ಟ್ರಗಳ ಸಹಕಾರ, ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಜಗತ್ತಿಗೆ ಕಾಲಿಟ್ಟು ಒಂದು ವರ್ಷದ ಮೇಲಾಯಿತು. ಆದರೆ ಅದು ಎಲ್ಲಿಂದ ಶುರುವಾಗಿದ್ದು ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಮೊದಲು ಚೀನಾದ ವೆಟ್ ಮಾರ್ಕೆಟ್​​ನಲ್ಲಿ ಹುಟ್ಟಿತು ಎಂದು ಹೇಳಲಾಯಿತಾದರೂ, ನಂತರ ವುಹಾನ್​​ನ ಲ್ಯಾಬ್​​ನಿಂದ ಸೋರಿಕೆಯಾಗಿದ್ದು ಎಂದು ವರದಿಯಾಯಿತು.

ಕೊರೊನಾ ಮೂಲದ ಬಗ್ಗೆ ಹಲವು ರೀತಿಯ ವರದಿಗಳು ಹೊರಬೀಳುತ್ತಿವೆ. ಸೋಂಕಿನ ಮೂಲದ ಪತ್ತೆ ಕಾರ್ಯಕ್ಕಾಗಿ ಈ ವರ್ಷದ ಪ್ರಾರಂಭದಲ್ಲಿ ಡಬ್ಲ್ಯೂಎಚ್​ಒ ತಜ್ಞರ ತಂಡ ಚೀನಾಕ್ಕೆ ಭೇಟಿ ಕೊಟ್ಟಿತ್ತು. ಆದರೆ ನಿರೀಕ್ಷಿಸಿದಷ್ಟು ಮಾಹಿತಿ ಹೊರಬಿದ್ದಿರಲಿಲ್ಲ. ಚೀನಾದ ಪಾರದರ್ಶಕತೆಯ ಬಗ್ಗೆ ಈಗಲೂ ಹಲವು ರಾಷ್ಟ್ರಗಳು ಅನುಮಾನ ಪಡುತ್ತಿವೆ. ಈ ಮಧ್ಯೆ ಯುಎಸ್​, ಯುಕೆ, ಭಾರತ ಸೇರಿ ಹಲವು ದೇಶಗಳು ಈಗ ಮತ್ತೆ ಕೊವಿಡ್​ 19 ಸೋಂಕಿನ ಜಾಡು ಹಿಡಿದು ಹೊರಟಿವೆ.

ಇದನ್ನೂ ಓದಿ: ಕೊವಿಡ್ ಮೂರನೇ ಅಲೆ ನಂತರ ಏನಾಗುತ್ತದೆ ಎಂದು ಹೇಳುವುದು ಅಸಾಧ್ಯ; ಡಿಜಿಟಲ್ ಕಲಿಕೆ ಮುಂದುವರಿಯಲಿದೆ: ಪಿಣರಾಯಿ ವಿಜಯನ್

(We can not force china to give more information about covid 19 origin said WHO)