ನಮ್ಮಲ್ಲಿಗೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿ: ಚೀನಾಕ್ಕೆ ಮಾಲ್ಡೀವ್ಸ್ ಅಧ್ಯಕ್ಷರ ಮನವಿ
ಕೋವಿಡ್ ಗೆ ಮುನ್ನ ಚೀನಾ ನಮ್ಮ (ಮಾಲ್ಡೀವ್ಸ್‌ನ) ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾ ಈ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂಬುದು ನನ್ನ ವಿನಂತಿ ಎಂದು ಮೊಹಮ್ಮದ್ ಮುಯಿಝು ಹೇಳಿದರು. ಮಾಲ್ಡೀವ್ಸ್‌ನಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಅಮೆರಿಕನ್ ಯೋಜನೆಗೆ ಸಹಿ ಹಾಕಿವೆ ಎಂದು ವರದಿಯಾಗಿದೆ
ಬೀಜಿಂಗ್ ಜನವರಿ 09: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಮಾಲ್ಡೀವ್ಸ್ (Maldives) ಸಚಿವರ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ರಾಜತಾಂತ್ರಿಕ ಗದ್ದಲದ ನಡುವೆಯೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು “ತೀವ್ರಗೊಳಿಸುವಂತೆ” ಚೀನಾಕ್ಕೆ ವಿನಂತಿಸಿದ್ದಾರೆ. ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಂ ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಮೊಹಮ್ಮದ್ ಮುಯಿಝು ಚೀನಾವನ್ನು ದ್ವೀಪ ರಾಷ್ಟ್ರದ “ಹತ್ತಿರದ” ಮಿತ್ರ ಎಂದು ಕರೆದರು.
2014ರಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಆರಂಭಿಸಿದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (ಬಿಆರ್‌ಐ) ಯೋಜನೆಗಳನ್ನು ಶ್ಲಾಘಿಸಿದ ಅವರು, ಚೀನಾ ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಅಭಿವೃದ್ಧಿ ಪಾಲುದಾರರಲ್ಲಿ ಒಂದಾಗಿದೆ ಎಂದಿದ್ದಾರೆ. ಅದೇ ವೇಳೆ ಮಾಲ್ಡೀವ್ಸ್‌ಗೆ ತನ್ನ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಅವರು ಚೀನಾವನ್ನು ಒತ್ತಾಯಿಸಿದರು.
ಕೋವಿಡ್ ಗೆ ಮುನ್ನ ಚೀನಾ ನಮ್ಮ (ಮಾಲ್ಡೀವ್ಸ್‌ನ) ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾ ಈ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂಬುದು ನನ್ನ ವಿನಂತಿ ಎಂದು ಅವರು ಹೇಳಿದರು. ಮಾಲ್ಡೀವ್ಸ್‌ನಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಅಮೆರಿಕನ್ ಯೋಜನೆಗೆ ಸಹಿ ಹಾಕಿವೆ ಎಂದು ವರದಿಯಾಗಿದೆ. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿ ಪೋಸ್ಟ್ ವಿರುದ್ಧ ಕೆಲವು ಮಾಲ್ಡೀವ್ಸ್ ಮಂತ್ರಿಗಳ ಟೀಕೆಗಳ ನಂತರ ಎರಡು ದೇಶಗಳ ನಡುವೆ ರಾಜತಾಂತ್ರಿಕ ಗಲಾಟೆ ಭುಗಿಲೆದ್ದಿದೆ. ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟೂರಿಸಂ ಇಂಡಸ್ಟ್ರಿ (MATI) ಈ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದುಸ, ಎಲ್ಲಾ ಮೂವರು ಉಪ ಮಂತ್ರಿಗಳನ್ನು ಅಮಾನತುಗೊಳಿಸಲಾಗಿದೆ.
ತಮ್ಮ ಭಾಷಣದಲ್ಲಿ, ಮೊಹಮದ್ ಮುಯಿಝು, ತಮ್ಮ ಆಡಳಿತವು ಮಾಲ್ಡೀವ್ಸ್‌ನ ಆರ್ಥಿಕ ನೆಲೆಯನ್ನು ವೈವಿಧ್ಯಗೊಳಿಸಲು ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಿದರು. ಡಿಸೆಂಬರ್ 2014 ರಲ್ಲಿ ಚೀನಾದೊಂದಿಗೆ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ತ್ವರಿತ ಅನುಷ್ಠಾನದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ:ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಬೃಹತ್ ಪ್ರತಿಭಟನೆ
ಎಫ್‌ಟಿಎಯು ಉಭಯ ದೇಶಗಳ ನಡುವಿನ ನಿಕಟ ವಾಣಿಜ್ಯ ಸಂಬಂಧದ ಸಂಕೇತವಾಗಿದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸುವ ಎಫ್‌ಟಿಎಯ ಗುರಿ, ವಿಶೇಷವಾಗಿ ಚೀನಾಕ್ಕೆ ನಮ್ಮ ಮೀನು ಉತ್ಪನ್ನಗಳ ರಫ್ತು ಹೆಚ್ಚಿಸುವುದು ಎಫ್‌ಟಿಎ ಮೂಲಕ ನಮಗೆ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷರು ಮಾಲ್ಡೀವ್ಸ್ ಹೂಡಿಕೆ ವೇದಿಕೆಯಲ್ಲಿ 11 ಯೋಜನೆಗಳಿಗೆ ಚೀನೀ ಕಂಪನಿಗಳಿಂದ ಹೂಡಿಕೆಯನ್ನು ಕೋರಿದರು, ಇದರಲ್ಲಿ ಮಾಲೆ ವಾಣಿಜ್ಯ ಬಂದರನ್ನು ಥಿಲಾಫುಶಿಗೆ ಸ್ಥಳಾಂತರಿಸುವುದು, ವೆಲಾನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ ಮತ್ತು 15 ಹೆಚ್ಚಿನ ವಿಮಾನ ನಿಲ್ದಾಣಗಳ ನಿರ್ಮಾಣ ಸೇರಿವೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ