ಸಂಕ್ರಾಂತಿ ಹಿಂದೆ ಮುಂದೆ ಅಪಾಯವಿದೆ ಅಂತ ಭವಿಷ್ಯ ಹೇಳಿದ್ದರೂ ನಮ್ಮಿಂದಲೇ ಅಚಾತುರ್ಯ ನಡೆಯಿತು: ಚನ್ನರಾಜ ಹಟ್ಟಿಹೊಳಿ

ಅರುಣ್​ ಕುಮಾರ್​ ಬೆಳ್ಳಿ

Updated on: Jan 14, 2025 | 6:04 PM

ಕಾರಿನ ಡ್ರೈವರ್ ಗೆ ತರುಚಿದ ಗಾಯಗಳಾಗಿವೆ, ಅವರ ಪಕ್ಕದಲ್ಲಿ ಕುಳಿತಿದ್ದ ಗನ್ ಮ್ಯಾನ್ ಭುಜದಲ್ಲಿ ತುಂಬಾ ನೋವು ಎಂದು ಹೇಳುತ್ತಿದ್ದರು, ಅವರ ಭುಜದ ಸ್ಕ್ಯಾನಿಂಗ್ ಮಾಡಿಸಿದ್ದಾಗ ಯಾವುದೇ ರೀತಿಯ ಫ್ರ್ಯಾಕ್ಚರ್, ಮೂಕಪೆಟ್ಟು ಕಂಡು ಬಂದಿಲ್ಲ, ಅವರು ಮತ್ತು ಡ್ರೈವರ್ ನೋವು ನಿವಾರಕ ಮಾತ್ರೆಗಳಿಂದ ಗುಣ ಹೊಂದಲಿದ್ದಾರೆ ಎಂದು ಹೇಳಿದ ಚನ್ನರಾಜ್ ಸಚಿವರ ಕಾರಿನೊಂದಿಗೆ ಬೆಂಗಾವಲು ಪಡೆ ಇರಲಿಲ್ಲ ಎಂದರು.

ಬೆಳಗಾವಿ: ಅಪಘಾತಕ್ಕೊಳಗಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ದುರ್ಘಟನೆಯ ಬಗ್ಗೆ ನಿಖರವಾದ ಮಾಹಿತಿ ನೀಡಿದ್ದಾರೆ. ತಾವು ಪ್ರಯಾಣಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಒಂದು ಕಂಟೇನರ್ ನಿಧಾನ ಗತಿಯಲ್ಲಿ ಚಲಿಸುತ್ತಿತ್ತು ಮತ್ತು ಅದೇ ಸಮಯದಲ್ಲಿ ನಾಯಿಗಳು ಕಾರಿಗೆ ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿತು ಎಂದು ಚನ್ನರಾಜ್ ಹೇಳಿದರು. ಸಣ್ಣಪುಟ್ಟ ಗಾಯಗಳನ್ನು ಅನುಭವಿಸಿರುವ ಶಾಸಕ, ಸಂಕ್ರಾಂತಿ ಹಬ್ಬ ಮುಗಿಯುವವರೆಗೆ ಸಚಿವೆಗೆ ಅಪಾಯವಿದೆ ಅಂತ ಗುರುಹಿರಿಯರು ಭವಿಷ್ಯ ನುಡಿದಿದ್ದರು,  ಎಚ್ಚರವಹಿಸಿದಾಗ್ಯೂ ಅಚಾತುರ್ಯ ನಡೆದು ಹೋಯಿತು, ಅದಕ್ಕೆ ತಾವೇ ಕಾರಣ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆಸ್ಪತ್ರೆಗೆ ಭೇಟಿ ನೀಡಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅರೋಗ್ಯ ವಿಚಾರಿಸಿದ ಬಿಜೆಪಿ ನಾಯಕಿ ಶಶಿಕಲಾ ಜೊಲ್ಲೆ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.