ಛೇ, ಒಂದು ನಾಣ್ಯದಿಂದ ಯುವತಿಯ ಬದುಕೇ ನಾಶವಾಯ್ತು
ಒಂದು ನಾಣ್ಯವು ಯುವತಿಯ ಕೊಲೆಗೆ ಕಾರಣವಾಯ್ತು. ಪೋಲಿಷ್ ವ್ಯಕ್ತಿಯೊಬ್ಬ ಬಸ್ನಲ್ಲಿ ಭೇಟಿಯಾದ ಯುವತಿಯ ಭವಿಷ್ಯವನ್ನು ನಾಣ್ಯವನ್ನು ಟಾಸ್ ಮಾಡುವ ಮೂಲಕ ನಿರ್ಧರಿಸಿದ್ದಾನೆ. ಆಕೆಯನ್ನು ಕೊಲೆ ಮಾಡಿ ಶವದ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಾಣ್ಯದಲ್ಲಿ ಹೆಡ್ ಬಿದ್ದರೆ ಕೊಲೆ, ಟೇಲ್ ಬಿದ್ದರೆ ಹಾಗೆಯೇ ಆಕೆಯನ್ನು ಬಿಟ್ಟುಬಿಡುವುದು ಎಂದು ಆಲೋಚಿಸಿದ್ದನಂತೆ. ಹಾಗಾಗಿ ಒಂದು ನಾಣ್ಯವು ಯುವತಿಯ ಬದುಕನ್ನು ನಾಶಮಾಡಿಬಿಟ್ಟಿತು.
ಪೋಲೆಂಡ್ನಲ್ಲಿ 18 ವರ್ಷದ ಯುವತಿಯ ಕೊಲೆ, ಅತ್ಯಾಚಾರ ನಡೆದೇ ಹೋಗಿದೆ. ಆದರೆ ಕೊಲೆಗೂ ಮುನ್ನ ಆರೋಪಿ ನಡೆದುಕೊಂಡ ರೀತಿ ಭಯ ಹುಟ್ಟಿಸುವಂತಿದೆ. ಪೋಲಿಷ್ ವ್ಯಕ್ತಿಯೊಬ್ಬ ಬಸ್ನಲ್ಲಿ ಭೇಟಿಯಾದ ಯುವತಿಯ ಭವಿಷ್ಯವನ್ನು ನಾಣ್ಯವನ್ನು ಟಾಸ್ ಮಾಡುವ ಮೂಲಕ ನಿರ್ಧರಿಸಿದ್ದಾನೆ.
ಆಕೆಯನ್ನು ಕೊಲೆ ಮಾಡಿ ಶವದ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಾಣ್ಯದಲ್ಲಿ ಹೆಡ್ ಬಿದ್ದರೆ ಕೊಲೆ, ಟೇಲ್ ಬಿದ್ದರೆ ಹಾಗೆಯೇ ಆಕೆಯನ್ನು ಬಿಟ್ಟುಬಿಡುವುದು ಎಂದು ಆಲೋಚಿಸಿದ್ದನಂತೆ. ಹಾಗಾಗಿ ಒಂದು ನಾಣ್ಯವು ಯುವತಿಯ ಬದುಕನ್ನು ನಾಶಮಾಡಿಬಿಟ್ಟಿತು.
ಪೋಲೆಂಡ್‌ನ ಗ್ಲೈವೈಸ್‌ನಲ್ಲಿ 20 ವರ್ಷದ ಮಾಟೆಸ್ಜ್ ಹೆಪಾ ಅವರ ವಿಚಾರಣೆಯ ಸಮಯದಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. 2023ರ ಆಗಸ್ಟ್ನಲ್ಲಿ ಆಕೆಯನ್ನು ಹತ್ಯೆ ಮಾಡಿದ್ದು, ಆರೋಪ ಎದುರಿಸುತ್ತಿದ್ದಾನೆ. ಕೋಜಿಲ್ಸ್ಕಾ ಕಟೋವಿಸ್‌ನಲ್ಲಿನ ಪಾರ್ಟಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಕಾರ್ ರಿಪೇರಿ ಅಂಗಡಿಯಲ್ಲಿ ತನ್ನ ಪಾಳಿಯನ್ನು ಮುಗಿಸಿ ಹೊರಟಿದ್ದ ಹೋಪಾ ಎದುರಾಗಿದ್ದ.
ಆಕೆಯನ್ನು ಉಪಾಯವಾಗಿ ತನ್ನ ಫ್ಲ್ಯಾಟ್ಗೆ ಕರೆದೊಯ್ದಿದ್ದ, ಆಕೆ ರೂಮಿನಲ್ಲಿ ಮಲಗಿದ್ದಳು. ಬಳಿಕ ಆಕೆಯನ್ನು ಕೊಲೆ ಮಾಡಬೇಕೆ ಬೇಡವೇ ಎಂಬುದಕ್ಕೆ ನಾಣ್ಯ ಬಳಸಿದ್ದ, ಆಕೆ ಆತನನ್ನು ವಿರೋಧಿಸಲು ಪ್ರಯತ್ನಿಸಿದಾಗ ಹಗ್ಗದಿಂದ ಕತ್ತು ಹಿಸುಕಿ ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಮತ್ತಷ್ಟು ಓದಿ: ನಾಲ್ಕು ಮಕ್ಕಳು ಜಲಸಮಾಧಿ: ಮಕ್ಕಳನ್ನು ಕಾಲುವೆಗೆ ಎಸೆದು ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಬಚಾವ್
ಆಕೆಯನ್ನು ಕೊಂದ ಬಳಿಕ ಆಕೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜನವರಿ 8 ರಂದು ವಿಚಾರಣೆ ಪ್ರಾರಂಭವಾಯಿತು, ಕೊಜಿಲ್ಸ್ಕಾ ಅವರ ದುಃಖಿತ ಪೋಷಕರು ಮತ್ತು ಸ್ನೇಹಿತರು ನ್ಯಾಯಾಲಯದಲ್ಲಿ ಹಾಜರಾದರು. ಅಪರಾಧ ಸಾಬೀತಾದರೆ ಹೇಪಾ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ, ಮುಂದಿನ ವಿಚಾರಣೆಯನ್ನು ಫೆಬ್ರವರಿ 12 ಕ್ಕೆ ನಿಗದಿಪಡಿಸಲಾಗಿದೆ.
ನಾನು ಕೋಣೆಯ ಸುತ್ತಲೂ ನಡೆದೆ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದೆ, ಆದರೆ ನನಗೆ ಸಾಧ್ಯವಾಗಲಿಲ್ಲ, ಹಾಗಾಗಿ ನಾನು ನಾಣ್ಯದ ಸಹಾಯ ಪಡೆದೆ, ಆದರೆ ನಾನು ಆಕೆಯನ್ನು ಏಕೆ ಕೊಂದಿದ್ದೇನೆ ಎಂಬುದು ನನಗೆ ತಿಳಿದಿಲ್ಲ, ನನಗೆ ನನ್ನ ಮೇಲೆ ನಿಯಂತ್ರಣವಿರಲಿಲ್ಲ ಎಂದು ಆತ ಹೇಳಿದ್ದಾನೆ.
ಆಕೆಯ ಮೈಮೇಲೆ ಕುಳಿತು ಕತ್ತು ಹಿಸುಕಲು ಪ್ರಾರಂಭಿಸಿದೆ, ರಕ್ತ ಕಾಣುವುದಿಲ್ಲ ಎನ್ನುವ ಕಾರಣಕ್ಕೆ ಕತ್ತು ಹಿಸುಕುವುದೇ ಒಳ್ಳೆಯದೆಂದು ಭಾವಿಸಿದೆ, ಆಕೆ ಉಸಿರಾಡಲು ಪ್ರಯತ್ನಿಸುತ್ತಿದ್ದಳು, ಸ್ವಲ್ಪ ಸಮಯದ ಬಳಿಕ ಮೃತಪಟ್ಟಳು. ಆಕೆ ಮೃತಪಟ್ಟ ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿ ಸಂಭೋಗ ನಡೆಸಿರುವುದಾಗಿ ಹೇಳಿದ್ದಾನೆ. ಆಕೆಯ ದೇಹವನ್ನು ಚೀಲದಲ್ಲಿ ಇರಿಸಿ, ಸುಡುವುದೇ ಉತ್ತಮ ಎಂದು ಭಾವಿಸಿದ್ದಾಗಿ ಆರೋಪಿ ಹೇಳಿದ್ದಾನೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ