ʼನೈಲ್ ಅಥವಾ ಅಮೆಜಾನ್ʼ ವಿಶ್ವದ ಅತಿ ಉದ್ದದ ನದಿ ಯಾವುದು? ಶುರುವಾಗಲಿದೆ ಹೊಸ ಸಂಶೋಧನೆ

ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಂತಹ ಅಧಿಕೃತ ಮೂಲಗಳ ಪ್ರಕಾರ  ವಿಶ್ವದ ಅತೀ  ಉದ್ದದ ನದಿ ಎಂಬ ಶೀರ್ಷಿಕೆಯನ್ನು ಅಧಿಕೃತವಾಗಿ ಆಫ್ರಿಕಾದ ನೈಲ್ ನದಿಗೆ ನೀಡಲಾಗಿದೆ. ಆದರೆ ಇತ್ತೀಚಿಗೆ ವಿಶ್ವದ ಅತೀ ಉದ್ದವಾದ ನದಿ ಅಮೆಜಾನ್ ನದಿ ಎಂಬ ವಿವಾದ ಕೇಳಿಬರುತ್ತಿದೆ. ಈ ವಿವಾದವನ್ನು ಪರಿಹರಿಸುವ ಸಲುವಾಗಿ ಅಂತರಾಷ್ಟ್ರೀಯ ಪರಿಶೋಧಕರು ಮತ್ತು ಸಂಶೋಧಕರ ತಂಡವೊಂದು  ಅಮೆಜಾನ್ ನದಿ ವಿಶ್ವ ಅತೀ ಉದ್ದದ ನದಿ ಎಂದು ಹೇಳಲು ಹೊರಟಿದೆ. 

ʼನೈಲ್ ಅಥವಾ ಅಮೆಜಾನ್ʼ ವಿಶ್ವದ ಅತಿ ಉದ್ದದ ನದಿ ಯಾವುದು? ಶುರುವಾಗಲಿದೆ ಹೊಸ ಸಂಶೋಧನೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 03, 2023 | 2:52 PM

ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ (Encyclopaedia Britannica) ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ನಂತಹ ಅಧಿಕೃತ ಮೂಲಗಳ ಪ್ರಕಾರ  ವಿಶ್ವದ ಅತೀ  ಉದ್ದದ ನದಿ ಎಂಬ ಶೀರ್ಷಿಕೆಯನ್ನು ಅಧಿಕೃತವಾಗಿ ಆಫ್ರಿಕಾದ ನೈಲ್ ನದಿಗೆ ನೀಡಲಾಗಿದೆ.  ಆದರೆ ವಿಶ್ವದ ಅತಿ ಉದ್ದದ ನದಿ ಯಾವುದೆಂಬ ಬಗೆಗಿನ ವಿವಾದವೊಂದು ಶುರುವಾಗಿದೆ.  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ವರದಿಗಳು ವಿಶ್ವದ ಅತಿ ಉದ್ದವಾದ ನದಿ ನೈಲ್ ನದಿ ಎಂದು ಹೇಳಿದೆ. ಈ ನದಿ ಆಫ್ರಿಕಾದಿಂದ ಈಜಿಪ್ಟ್ ಮತ್ತು ಮೆಡಿಟರೇನಿಯನ್ ಸಮುದ್ರಕ್ಕೆ ಉತ್ತರಕ್ಕೆ ಹರಿಯುತ್ತದೆ, ಈ ನದಿ ಸುಮಾರು 4,132 ಮೈಲುಗಳನ್ನು ಒಳಗೊಂಡಿವೆ. ಆದರೆ ಅಮೆಜಾನ್ ನದಿ ವಿಶ್ವದ ಅತೀ ಉದ್ದವಾದ ನದಿ ಎಂಬ ವಾದವೊಂದು ಕೇಳಿಬರುತ್ತಿದೆ.  ಹೌದು ಪೆರುವಿನ ಆಂಡಿಸ್ ಪರ್ವತಗಳಿಂದ ಪೂರ್ವಕ್ಕೆ ದಕ್ಷಿಣ ಅಮೇರಕಾದ್ಯಂತ ಅಟ್ಲಾಂಟಿಕ್ ಸಾಗರದವರೆಗೆ ಹರಿಯುವ ಅಮೆಜಾನ್ ನದಿಯು  ನಿಜವಾಗಿಯೂ ವಿಶ್ವದ ಅತೀ ಉದ್ದದ ನದಿಯಾಗಿದೆ ಎಂದು ಅನೇಕ ಬ್ರೆಜಿಲಿಯನ್ನರು ವಾದಿಸುತ್ತಿದ್ದಾರೆ.  ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಬ್ರಿಟಾನಿಕ ಪ್ರಕಾರ ನೈಲ್ ಮತ್ತು ಅಮೆಜಾನ್ ನದಿಗಳ ನಡುವಿನ ಉದ್ದದ ವ್ಯತ್ಯಾಸವು ಕೇವಲ 132 ಮೈಲಿಗಳು.  ಈ ವಿಷಯಗಳನ್ನು ಸ್ಪಷ್ಟಪಡಿಸಲು, ಎಕ್ಸ್ಪ್ಲೋರರ್ಸ್ ಕ್ಲಬ್ ಮತ್ತು ಇತರ ಸಂಸ್ಥೆಗಳ ಬೆಂಬಲದೊಂದಿಗೆ ಅಂತರಾಷ್ಟ್ರೀಯ ಸಂಶೋಧಕರು ಮತ್ತು ಪರಿಶೋಶಕರ ತಂಡವೊಂದು ಅಮೆಜಾನ್ ನದಿಯ ಪೂರ್ಣ ಉದ್ದವನ್ನು ಅಳೆಯಲು ಯೋಜಿಸುತ್ತಿದೆ.

ಹೌದು ಅಮೆಜಾನ್ ನದಿಯ ಹುಟ್ಟು ಎಂದು ನಂಬಲಾದ ಪೆರುವಿನ ಅಂಡಿಸ್​​ನಿಂದ 2024 ರ ಏಪ್ರಿಲ್​​​ನಲ್ಲಿ ಈ ಒಂದು ಸಂಶೋಧನಾ ಯಾತ್ರೆ ಶುರುವಾಗಲಿದೆ.  ಸುಮಾರು ಏಳು ತಿಂಗಳುಗಳಲ್ಲಿ ಸಂಶೋಧನಾ ತಂಡವು  ಅಟ್ಲಾಂಟಿಕ್ ಸಾಗರವನ್ನು ತಲುಪುವವರೆಗೆ ನದಿಯ ಉದ್ದದ ಸಂಪೂರ್ಣ ಕೋರ್ಸ್ನ್ನು ನಕ್ಷೆ ಮಾಡಲಿದೆ ಮತ್ತು ಅದರ ಉದ್ದವನ್ನು ಅಳೆಯಲಿದೆ. ಮತ್ತು ಅಮೆಜಾನ್ ನದಿಯ ಸಂಪೂರ್ಣ ಉದ್ದವನ್ನು ಪ್ರಯಾಣಿಸಲು ಅಧುನಿಕ ಮ್ಯಾಪಿಂಗ್ ಉಪಗ್ರಹ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಸ್ಪ್ಯಾನಿಷ್ ಬಾವಲಿ ಗುಹೆಯಲ್ಲಿ ಯುರೋಪಿನ 6 ಸಾವಿರ ವರ್ಷಗಳಷ್ಟು ಹಳೆಯ ಬೂಟುಗಳು ಪತ್ತೆ

ಫಲಿತಾಂಶಗಳ ಹೊರತಾಗಿ, ಅಮೆಜಾನ್ ನದಿ ಸುತ್ತ ಭೌಗೋಳಿಕತೆ, ಜೀವವೈವಿದ್ಯತೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ಈ ನದಿಯ ನಿರ್ಣಾಯಕ ಪಾತ್ರವನ್ನು ಕೂಡಾ ಅಧ್ಯಯನ ಮಾಡಲಿದೆ. ಅಮೆಜಾನ್ ಮಳೆಕಾಡಿನ ನೈಸರ್ಗಿಕ ಸಂಪತ್ತು ಮತ್ತು ಹವಾಮಾನ ಬದಲಾವಣೆಗಳ ಕುರಿತ ಸಾಕ್ಷ್ಯ ಚಿತ್ರವನ್ನು ಮಾಡಲು ಪರಿಶೋಧಕರು ಯೋಜಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:49 pm, Tue, 3 October 23

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು