ಕೊರೊನಾ ಸೋಂಕನ್ನು ಲಸಿಕೆ ಪಡೆಯುವ ಕೊವಿಡ್-19 ಸೋಂಕನ್ನು ಹಿಮ್ಮೆಟ್ಟಿಸಬಹುದೆಂದು ಅಮೇರಿಕಾದ ಜನರು ಪ್ರಾಯಶಃ ಸಾಬೀತು ಮಾಡಿದಂತಿದೆ. ಶುಕ್ರವಾರದಂದು ವೈಟ್ಹೌಸ್ನ ಒಂದು ಬೃಹತ್ ಕೋಣೆಯಲ್ಲಿ ಜನ ಕ್ಕಿಕ್ಕಿರಿದು ನೆರೆದಿದ್ದರು. ಅವರಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಎಲ್ಲರ ಮುಖದಲ್ಲಿ ಹರ್ಷದ ಕಳೆ, ಉತ್ಸಾಹ, ನಗು ಮತ್ತು ಉಲ್ಲಾಸ ಎದ್ದು ಕಾಣಿಸುತ್ತಿತ್ತು. ಪರಸ್ಪರ ಕೈಕುಲುಕುವುದು, ತಬ್ಬಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿತ್ತು. ಪದಕದಿಂದ ಸನ್ಮಾನಿತರಾದ 94-ವರ್ಷ ವಯಸ್ಸಿನ ವೃದ್ಧರೊಬ್ಬರನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಆನಂದದಿಂದ ತಬ್ಬಿಕೊಂಡರು. ನಿಸ್ಸಂದೇಹವಾಗಿ ವೈಟ್ಹೌಸ್ಗೆ ಜೀವಕಳೆ ವಾಪಸ್ಸಾಗಿತ್ತು. ಕೊರೋನಾವನ್ನು ಗೆದ್ದ ಸಂಭ್ರಮ ಅಮೇರಿಕನ್ನರ ಮುಖದಲ್ಲಿ ಮನೆ ಮಾಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಕೊರೊನಾ ವೈರಸ್ ವಿರುದ್ಧ ಲಸಿಕೆ ಆ ದೇಶದಲ್ಲಿ ಹೇರಳವಾಗಿ ಲಭ್ಯವಾಗುತ್ತಿರುವುದು ಮತ್ತು ಜೋ ಬೈಡೆನ್ ಸರ್ಕಾರ ಕೊವಿಡ್-19 ನಿಯಮಾವಳಿ ಮತ್ತ ಸಾಮಾಜಿಕ ಅಂತರದ ನಿಯಮವನ್ನು ಸಡಿಲಗೊಳಿಸಿರುವುದರಿಂದ ಜನ ಕೊವಿಡ್-ಮೊದಲಿನ ದಿನಗಳಿಗೆ ವಾಪಸ್ಸಾಗಿರುವ ಸಂಭ್ರಮದಲ್ಲಿದ್ದಾರೆ. ಶ್ವೇತ ಭವನಕ್ಕೆ ಸಿಬ್ಬಂದಿ ವಾಪಸ್ಸಾಗಿದೆ ಮತ್ತು ಮಾಧ್ಯಮದವರು ಸಹ ಅದರ ಸುತ್ತ ಘೇರಾಯಿಸುತ್ತಿದ್ದಾರೆ. ಲಸಿಕೆ ಮೂಲಕ ಕೊರೊನಾ ಗೆಲ್ಲಬಹದೆಂದು ಅಮೇರಿಕ ಸಾಬೀತು ಮಾಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಜನರಲ್ಲಿದ್ದ ಆತಂಕ ದೂರವಾಗಿದೆ.
ಶುಕ್ರವಾರದಂದುವೈಟ್ಹೌಸ್ ಪ್ರತಿನಿತ್ಯದ ಬ್ರೀಫಿಂಗ್ ನೀಡಿದ ಅದರ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಅವರು, ‘ನಾವೆಲ್ಲ ವಾಪಸ್ಸಾಗಿದ್ದೇವೆ. ನಾವೆಲ್ಲ ಆರೋಗ್ಯವಾಗಿದ್ದೇವೆ ಸಿಬ್ಬಂದಿ ವರ್ಗದವರು ಒಒಬ್ಬರನ್ನೊಬ್ಬರಿ ಆಲಂಗಿಸಿ ಗ್ರೀಟ್ ಮಾಡುತ್ತಿದ್ದಾರೆ,’ ಎಂದು ಹೇಳಿದರು.
ಕಳೆದ ಒಂದು ವಾರದಲ್ಲಿ ವೈಟ್ಹೌಸ್ ಭಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಜನ ಮಾಸ್ಕ ಧರಿಸದೆ ಅದನ್ನು ಪ್ರವೇಶಿಸುತ್ತಿದ್ದಾರೆ, ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿದ್ದಾರೆ ಮತ್ತು ಇಲ್ಲಿ ಸಾಮಾಜಿಕ ಅಂತರವೆನ್ನುವುದು ಕಳೆದುಹೋದ ವಸ್ತುವಾಗಿದೆ. ಈ ಬದಲಾವಣೆಯನ್ನು ಅಧ್ಯಕ್ಷ ಜೊ ಬೈಡೆನ್ ಅವರಿಗಿಂತ ಜಾಸ್ತಿ ಪ್ರಾಯಶಃ ಬೇರೆ ಯಾರೂ ಆನಂದಿಸುತ್ತಿಲ್ಲ.
ಮೇ 13ರಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಪ್ರಕಟಿಸಿದ ನಂತರ ಬೈಡನ್ ಅದೇ ದಿನ ರೋಸ್ ಗಾರ್ಡನ್ಗೆ ಮಾಸ್ಕ್ ಧರಿಸದೆ ಬಂದು ಮಾಸ್ಕ್ ಕುರಿತ ಸಡಲಿಕೆಯನ್ನು ಘೋಷಿಸಿದರು. ಅವರ ಘೋಷಣೆಯ ನಂತರ ಅಮೇರಿಕದಲ್ಲಿ ಜೀವಂತಿಕೆ ವಾಪಸ್ಸಾಗಿದ್ದು ಜನ ಗುಂಪು ಗುಂಪಾಗಿ ಸೇರಿ ಸಂಭ್ರಮಿಸುತ್ತಿದ್ದಾರೆ.
ಶುಕ್ರವಾರದಂದು ಶ್ವೇತ ಭವನದಲ್ಲಿ ನಡೆದ ಸಮಾರಂಭದಲ್ಲಿ 70 ವರ್ಷಗಳ ಹಿಂದೆ ಕೊರಿಯ ವಿರುದ್ಧ ನಡೆದ ಯುದ್ಧದಲ್ಲಿ ಪರಾಕ್ರಮ ಮೆರೆದಿದ್ದ94-ವರ್ಷ ಪ್ರಾಯದ ನಿವೃತ್ತ ಕರ್ನಲ್ ರಾಲ್ಫ್ ಪಕೆಟ್ ಜ್ಯೂನಿಯರ್ ಅವರಿಗೆ ಬೈಡನ್ ಅವರು ಮೊದಲ ಬಾರಿ ಕಮಾಂಡರ್-ಇನ್-ಚೀಫ್ ಆಗಿ ಮೆಡಲ್ ಆಫ್ ಆನರ್ನಿಂದ ಸನ್ಮಾನಿಸಿದರು,
ಈ ಸಮಾರಂಭವನ್ನು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರು ಅಮೇರಿಕಾಗೆ ನೀಡಿರುವ ಭೇಟಿಯ ಸಂದರ್ಭದಲ್ಲಿ ವೈಟ್ಹೌಸ್ ಆಯೋಜಿಸಿದ್ದು ವಿಶೇಷ. ಮೂನ್ ಅವರು ಬೈಡೆನ್ರರೊಂದಿಗೆ ಸೇರಿ ಪಕೆಟ್ ಅವರ ಕೈಗಗಳನ್ನು ಹಿಡಿದು ಫೋಟೋಗಳಿಗೆ ಪೋಸ್ ನೀಡಿದರು. ಇದಕ್ಕೆ ಮೊದಲು ಬೈಡನ್ ಅವರು ಕೆನಡಿ ಸೆಂಟರ್ನಲ್ಲಿ ಸನ್ಮಾನಿತರರನ್ನು ವೈಟ್ಹೌಸ್ಗೆ ಬರಮಾಡಿಕೊಂಡಿದ್ದರು.
ಕೆನಡಿ ಸೆಂಟರ್ ಸನ್ಮಾನಿತರು ಹೇಳುವ ಪ್ರಕಾರ ವೈಟ್ಹೌಸ್ನಲ್ಲಿ ನಡೆದ ಸಮಾರಂಭವು ಅದ್ಭುತವಾಗಿತ್ತು ಮತ್ತು ಅಧ್ಯಕ್ಷ ಬೈಡೆನ್ ಅವರು ಅತಿಥಿಗಳೊಂದಿಗೆ ಬಹಳ ಸಂತೋಷದಿಂದ ಸಮಯ ಕಳೆದರು.
ಡಬ್ಬಿ ಅಲೆನ್ ಎನ್ನವವರು, ‘ಅಧ್ಯಕ್ಷರು ಬಹಳ ಮುಕ್ತವಾಗಿ ಮಾತಾಡಿದರು, ನಾವು ಅಂದುಕೊಂಡದ್ದಕ್ಕಿಂತ ಜಾಸ್ತಿ ಸಮಯವನ್ನು ಅವರು ನಮ್ಮೊಂದಿಗೆ ಕಳೆದರು,’ ಎಂದರು.
ಜೋನ್ ಬೇಜ್ ಹೆಸರಿನ ಇನ್ನೊಬ್ಬರು, ‘ನಮ್ಮ ಅಧಿಕೃತ ಭೇಟಿಯು ಜಾಲಿ ಟ್ರಿಪ್ನಂತಿತ್ತು,’ ಎಂದು ಹೇಳಿದರು.
ಕೊವಿಡ್ ಸೋಂಕು ಹಬ್ಬಿದ ನಂತರ ಸಾಮಾಜಿಕ ಅಂತರದ ನಿಯಮ ಜಾರಿಗೆ ಬಂದ ಹಿನ್ನೆಲೆಯಲ್ಲಿ ವೈಟ್ಹೌಸ್ಗೆ ಭೇಟಿ ನೀಡುವ ಮಾಧ್ಯಮದವರ ಸಂಖ್ಯೆಯನ್ನು ತಗ್ಗಿಸಲಾಗಿತ್ತು. ಶುಕ್ರವಾರದಂದು ಸಹ ಸಾಕಿ ಅವರ ಬ್ರೀಫಿಂಗ್ ಕೋಣೆಯಲ್ಲಿ ಕೇವಲ ಕಾಲು ಭಾಗದಷ್ಟು ಪತ್ರಕರ್ತರು ಮಾತ್ರ ಹಾಜರಿದ್ದರು. ಇದು ಇಷ್ಟರಲ್ಲೇ ಅರ್ಧಭಾಗದಷ್ಟರ ಮಟ್ಟಿಗೆ ಹೆಚ್ಚಲಿದೆಯಂತೆ.
ಸುರಕ್ಷತೆಯ ನಿಯಮಗಳನ್ನು ಪಾಲಿಸುವುದು ಗೌರವದ ಸಂಕೇತವಾಗಿದೆ ಎಂದು ಸಾಕಿ ತಮ್ಮ ಬ್ರೀಫಿಂಗ್ನಲ್ಲಿ ಹೇಳಿದರು. ವ್ಯಾಕ್ಸಿನೇಷನ್ ಅಗಿದೆಯೇ ಇಲ್ಲವೇ ಅಂತ ಜನರನ್ನು ಕೇಳುವ ಯೋಜನೆ ವೈಟ್ಹೌಸ್ಗಿರಲಿಲ್ಲ. ಸಿಡಿಸಿ ಸದಸ್ಯರು ಕೆಲವು ಬಾರಿ ಗೊಂದಲ ಹುಟ್ಟಿಸುವ ನಿಯಮಗಳನ್ನು ಜಾರಿಗೊಳಿಸುತ್ತಾರೆ. ಮಾಸ್ಕ್ ಯಾರು ಧರಿಸಬೇಕು, ಯಾವಾಗ ಧರಿಸಬೇಕು ಅಥವಾ ಈಗಲೂ ಅದನ್ನು ಧರಿಸಬೇಕೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಾಕಿ ಹೇಳಿದರು.
ಆದಾಗ್ಯೂ ಅಮೇರಿಕನ್ನರ ಮೂಡು ಬಹಳಷ್ಟು ಬದಲಾಗಿದೆ. ಅವರು ತಮ್ಮ ಹೊಸ ಅಧ್ಯಕ್ಷನನ್ನು ಮೊದಲ ಬಾರಿಗೆ ನೋಡಿದ್ದು ಓವಲ್ ಆಫೀಸಿನ ರೆಸುಲ್ಯೂಟ್ ಡೆಸ್ಕ್ ಹಿಂದೆ ಮಾಸ್ಕ್ ಧರಿಸಿ ಕೂತಿದ್ದಾಗ, ಆದರೆ ಶುಕ್ರವಾರ ವೈಟ್ಹೌಸ್ನಲ್ಲಿ ಅದಕ್ಕೆ ತದ್ವಿರುದ್ಧವಾದ ಸನ್ನಿವೇಶವಿತ್ತು.
ಪ್ಯಾಂಡೆಮಿಕ್ನಿಂದಾಗಿ ಬೈಡೆನ್ ತಮ್ಮ ಸಹೋದ್ಯೋಗಿಳೊಂದಿಗೆ ಬಹಳ ದಿನಗಳವರೆಗ ಮುಖತಃ ಬೇಟಿಯಾಗದಂಥ ಸ್ಥಿತಿಯಿಂದ ಕಂಗೆಟ್ಟಿದ್ದರು. ಅವರೊಂದಿಗೆ ಮತ್ತು ವಿಶ್ವದ ನಾಯಕರೊಂದಿಗೆ ಬೈಡೆನ್ ಜೂಮ್ ಮೂಲಕ ಮಾತುಕತೆ ನಡೆಸುತ್ತಿದ್ದರು
ಆದರೆ, ಶುಕ್ರವಾರ, ಮೂನ್ ಅವರು ವೈಟ್ಹೈಸ್ಗೆ ಕಾಲಿಟ್ಟ್ಟಾಗ ಹಲವಾರು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಎಲ್ಲ ಸಂಪ್ರದಾಯ, ಶಿಷ್ಟಾಚಾರಗಳಳು ಪುನರರಂಭಗೊಂಡವು. ಇಬ್ಬರು ನಾಯಕರು ಮುಖಾಮುಖಿಯಾಗಿ ಕೂತು ಮಾತುಕತೆ ನಡೆಸಿದರು. ಅಮೇಲೆ ಅವರಿಬ್ಬರು ಮಾಸ್ಕರಹಿತವಾಗಿ ಕಾಯುತ್ತಿದ್ದ ಡಿಪ್ಲೊಮ್ಯಾಟ್ಗಳು, ಅಧಿಕಾರಿಗಳು ಮತ್ತು ಪತ್ರಕರ್ತರಿದ್ದಲ್ಲಿಗೆ ಬಂದರು.
ಇದನ್ನೂ ಓದಿ: UFO Over America: ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಅಮೇರಿಕನ್ನರು ಅತೀ ಹೆಚ್ಚು ಹಾರುವ ತಟ್ಟೆಗಳನ್ನು ನೋಡಿದ್ದಾರೆ !