Aruna Miller: ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ಸಂಜಾತೆ: ಅರುಣಾ ಮಿಲ್ಲರ್ ಈಗ ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್

| Updated By: ನಯನಾ ರಾಜೀವ್

Updated on: Nov 09, 2022 | 11:06 AM

ಭಾರತೀಯ ಮೂಲದ ಮಹಿಳೆ ಅರುಣಾ ಮಿಲ್ಲರ್ ಮೇರಿಲ್ಯಾಂಡ್​ನ ಲೆಫ್ಟಿನೆಂಟ್ ಗವರ್ನರ್ ಆಗಿ, ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳ ಮಧ್ಯೆ, ಈ ಬಾರಿ ಭಾರತೀಯ-ಅಮೆರಿಕನ್ನರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಶೇಕಡಾ 100 ಸ್ಟ್ರೈಕ್ ರೇಟ್ ಹೊಂದಬಹುದು.

Aruna Miller: ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ಸಂಜಾತೆ: ಅರುಣಾ ಮಿಲ್ಲರ್ ಈಗ  ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್
Aruna Miller
Follow us on

ಭಾರತೀಯ ಮೂಲದ ಮಹಿಳೆ ಅರುಣಾ ಮಿಲ್ಲರ್ ಮೇರಿಲ್ಯಾಂಡ್​ನ ಲೆಫ್ಟಿನೆಂಟ್ ಗವರ್ನರ್ ಆಗಿ, ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳ ಮಧ್ಯೆ, ಈ ಬಾರಿ ಭಾರತೀಯ-ಅಮೆರಿಕನ್ನರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಶೇಕಡಾ 100 ಸ್ಟ್ರೈಕ್ ರೇಟ್ ಹೊಂದಬಹುದು.

ವಾಸ್ತವವಾಗಿ, ಭಾರತೀಯ-ಅಮೆರಿಕನ್ನರಾದ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಮರು ಆಯ್ಕೆಯಾಗುವ ಸಾಧ್ಯತೆಯಿದೆ.

ಅರುಣಾ ಮಿಲ್ಲರ್ ಇತಿಹಾಸ ನಿರ್ಮಿಸಿದ್ದಾರೆ
ಲಕ್ಷಾಂತರ US ಮತದಾರರು ಗವರ್ನರ್, ರಾಜ್ಯ ಕಾರ್ಯದರ್ಶಿ ಮತ್ತು ಇತರ ಕಚೇರಿಗಳ ಮುಖ್ಯಸ್ಥರನ್ನು ಆಯ್ಕೆ ಮಾಡಲು ಮತ ಹಾಕಿದ್ದಾರೆ. ಇದೇ ವೇಳೆ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಸಂಜಾತೆ ಇತಿಹಾಸ ಸೃಷ್ಟಿಸಿದ್ದಾರೆ.

ಭಾರತೀಯ ಮೂಲದ ಅಮೇರಿಕನ್ ಮಹಿಳೆ ಅರುಣಾ ಮಿಲ್ಲರ್ ಅವರು ಮೇರಿಲ್ಯಾಂಡ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ಅಲಂಕರಿಸಿದ ಮೊದಲ ವಲಸಿಗರಾಗಿದ್ದಾರೆ.

ಅರುಣಾ ಮಿಲ್ಲರ್ ಯಾರು?
58 ವರ್ಷದ ಡೆಮೋಕ್ರಾಟ್ ಅರುಣಾ ಮಿಲ್ಲರ್ ಆಂಧ್ರಪ್ರದೇಶದಲ್ಲಿ 6 ನವೆಂಬರ್ 1964 ರಂದು ಜನಿಸಿದರು. ಆಕೆ ತನ್ನ ಏಳನೇ ವಯಸ್ಸಿನಲ್ಲಿ ತನ್ನ ಹೆತ್ತವರೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು.

1989 ರಲ್ಲಿ, ಅವರು ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು. ಅವರು 25 ವರ್ಷಗಳ ಕಾಲ ಮಾಂಟ್ಗೊಮೆರಿ ಕೌಂಟಿಯ ಸ್ಥಳೀಯ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿದರು.

2018ರ ಸಂಸತ್ ಚುನಾವಣೆಯಲ್ಲಿ ಸೋತರು
ಅರುಣಾ ಮಿಲ್ಲರ್ 2010 ರಿಂದ 2018 ರವರೆಗೆ ಮೇರಿಲ್ಯಾಂಡ್ ಹೌಸ್ ಆಫ್ ಡೆಲಿಗೇಟ್ಸ್‌ನಲ್ಲಿ 15 ಜಿಲ್ಲೆಗಳನ್ನು ಪ್ರತಿನಿಧಿಸಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದರ ನಂತರ, ಅವರನ್ನು ಡೆಮೋಕ್ರಾಟ್‌ಗಳ ಪರವಾಗಿ ಗವರ್ನರ್ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅರುಣಾ ಡೇವಿಡ್ ಮಿಲ್ಲರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಮಿಲ್ಲರ್ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.