Delta Variant: ಡೆಲ್ಟಾ ತಳಿ ಅತ್ಯಂತ ಅಪಾಯಕಾರಿ; ಮೈಮರೆತರೆ ಅನಾಹುತ ನಿಶ್ಚಿತ: ವಿಶ್ವ ಆರೋಗ್ಯ ಸಂಸ್ಥೆ
ಪ್ರಾತಿನಿಧಿಕ ಚಿತ್ರ

Delta Variant: ಡೆಲ್ಟಾ ತಳಿ ಅತ್ಯಂತ ಅಪಾಯಕಾರಿ; ಮೈಮರೆತರೆ ಅನಾಹುತ ನಿಶ್ಚಿತ: ವಿಶ್ವ ಆರೋಗ್ಯ ಸಂಸ್ಥೆ

| Updated By: Skanda

Updated on: Jul 14, 2021 | 9:03 AM

ರೂಪಾಂತರಿ ಡೆಲ್ಟಾ ಪ್ರಕರಣಗಳ ಅಬ್ಬರ ನೋಡಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಚಿಂತೆಗೀಡಾಗಿದ್ದು, ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ತಳಿ ಅತ್ಯಂತ ಅಪಾಯಕಾರಿ ಎಂದು ಡಬ್ಲ್ಯುಹೆಚ್​ಓ ಕಳವಳ ವ್ಯಕ್ತಪಡಿಸಿದೆ.

ಇಡೀ ಜಗತ್ತನ್ನೇ ವ್ಯಾಪಿಸಿ ಒಂದೂವರೆ ವರ್ಷದಿಂದ ನಿರಂತರವಾಗಿ ಕಾಡುತ್ತಿರುವ ಕೊರೊನಾ ವೈರಾಣು ಇದೀಗ ರೂಪಾಂತರ ಹೊಂದಿ ಮತ್ತೆ ಎಲ್ಲರನ್ನೂ ಆತಂಕಕ್ಕೆ ನೂಕಿದೆ. ರೂಪಾಂತರಿ ಡೆಲ್ಟಾ ಪ್ರಕರಣಗಳ ಅಬ್ಬರ ನೋಡಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಚಿಂತೆಗೀಡಾಗಿದ್ದು, ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ತಳಿ ಅತ್ಯಂತ ಅಪಾಯಕಾರಿ ಎಂದು ಡಬ್ಲ್ಯುಹೆಚ್​ಓ ಕಳವಳ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಡೆಲ್ಟಾ ಉಂಟುಮಾಡುವ ಪರಿಣಾಮಗಳ ಬಗ್ಗೆ ಈಗಲೇ ಜಗತ್ತನ್ನು ಎಚ್ಚರಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ, ಮೈಮರೆತರೆ ಡೆಲ್ಟಾ ತಳಿ ಗಂಭೀರ ಅಪಾಯವನ್ನು ತಂದೊಡ್ಡಲಿದೆ ಎಂದು ಹೇಳಿದೆ.

ಮೊದಲು ಭಾರತದಲ್ಲಿ ಪತ್ತೆಯಾದ ಡೆಲ್ಟಾ ತಳಿ ಈಗ ವಿಶ್ವದ ಅನೇಕ ರಾಷ್ಟ್ರಗಳನ್ನು ಭಾದಿಸುತ್ತಿದ್ದು, ಭಾರತ ಎರಡನೇ ಅಲೆ ವೇಳೆ ಅನುಭವಿಸಿದ ತೊಂದರೆ ಈಗ ವಿದೇಶಗಳಲ್ಲಿ ಮರುಕಳಿಸುತ್ತಿದೆ. ಡೆಲ್ಟಾ ಜತೆಗೆ ಡೆಲ್ಟಾ ಪ್ಲಸ್, ಕಪ್ಪಾ, ಲ್ಯಾಂಬ್ಡಾ ತಳಿಗಳು ಕೂಡಾ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವುದು ತಜ್ಞರಾದಿಯಾಗಿ ಎಲ್ಲರಲ್ಲೂ ಆತಂಕ ಹುಟ್ಟುಹಾಕಿದೆ.

ಇದನ್ನೂ ಓದಿ:
Delta, Kappa, Lambda Variant: ಡೆಲ್ಟಾ, ಕಪ್ಪಾ, ಲ್ಯಾಂಬ್ಡಾ ತಳಿಗಳ ನಡುವೆ ಇರುವ ವ್ಯತ್ಯಾಸವೇನು? ಒಂದಕ್ಕಿಂತ ಒಂದು ಭಿನ್ನ ಹೇಗೆ?