Bastille Day 2021: ಫ್ರೆಂಚ್ ರಾಷ್ಟ್ರೀಯ ದಿನವನ್ನು ಗುರುತಿಸುವ ಬಾಸ್ಟಿಲ್ ಡೇ ದಿನದ ಮಹತ್ವ ಮತ್ತು ಇತಿಹಾಸ
French National Day 2021: 1789 ರಂದು ಪ್ಯಾರಿಸ್ನಲ್ಲಿ ನಡೆದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಅಧಿಕಾರದ ದುರುಪಯೋಗದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳನ್ನು ಹಿಡಿದಿಟ್ಟಿದ್ದ ಜೈಲಿನಲ್ಲಿ ಬಿರುಗಾಳಿಯೇ ಎದ್ದಿತ್ತು. ಬಾಸ್ಟಿಲ್ ಕೋಟೆಯಲ್ಲಿ ನಡೆದ ಈ ಬಿರುಗಾಳಿಯ ಸಂದರ್ಭವನ್ನು ಪ್ರತೀವರ್ಷ ಬಾಸ್ಟಿಲ್ ಡೇ ಎಂದು ಗುರುತಿಸಿ ಆಚರಿಸಲಾಗುತ್ತದೆ.
ಫ್ರೆಂಚ್ನಲ್ಲಿ ರಾಷ್ಟ್ರೀಯ ದಿನವನ್ನು(French National Day) ಸಾಮಾನ್ಯವಾಗಿ ಬಾಸ್ಟಿಲ್ ಡೇ ಎಂದು ಕರೆಯಲಾಗುತ್ತಾದೆ. ಪ್ರತೀ ವರ್ಷ ಜುಲೈ 14ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದು ಫ್ರೆಂಚ್ ಪ್ರಮುಖ ದಿನಗಳಲ್ಲಿ ಒಂದು. 1789 ರಂದು ಪ್ಯಾರಿಸ್ನಲ್ಲಿ ನಡೆದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಅಧಿಕಾರದ ದುರುಪಯೋಗದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳನ್ನು ಹಿಡಿದಿಟ್ಟಿದ್ದ ಜೈಲಿನಲ್ಲಿ ಬಿರುಗಾಳಿಯೇ ಎದ್ದಿತ್ತು. ಬಾಸ್ಟಿಲ್ ಕೋಟೆಯಲ್ಲಿ ನಡೆದ ಈ ಬಿರುಗಾಳಿಯ ಸಂದರ್ಭವನ್ನು ಪ್ರತೀವರ್ಷ ಬಾಸ್ಟಿಲ್ ಡೇ(Bastille Day) ಎಂದು ಗುರುತಿಸಿ ಆಚರಿಸಲಾಗುತ್ತದೆ.
ಈ ದಿನದ ಪ್ರಯುಕ್ತ ವಾರ್ಷಿಕವಾಗಿ ಸಾಂಪ್ರದಾಯಿಕ ಮೆರವಣಿಗೆ ಮತ್ತು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಫ್ರೆಂಚ್ ಜನರಲ್ಲಿ ಏಕತೆಯನ್ನು ಸಾರುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಕಳೆದ ವರ್ಷದಿಂದ ಹರಡಿದ ಸಾಂಕ್ರಾಮಿಕ ಕೊರೊನಾ ವೈರಸ್ ಹಾವಳಿಯಿಂದಾಗಿ ಯಾವುದೇ ಸಾಂಪ್ರದಾಯಿಕ ಮೆರವಣಿಗೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.
ವಿದೇಶಾಂಗ ವ್ಯವಹಾರ ಸಚಿವ ಡಾ. ಎಸ್ ಜೈಶಂಕರ್ ಅವರು ಫ್ರೆಂಚ್ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾದ ಜೀನ್-ಯ್ವೆಸ್ ಲೆ ಡ್ರಿಯಾನ್ ಮತ್ತು ಫ್ಯಾನ್ಸ್ ಜನರಿಗೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
Extend my warm wishes to FM @JY_LeDrian and the Government & people of France on Bastille Day. Confident that our wide-ranging Strategic Partnership will continue to strengthen.
— Dr. S. Jaishankar (@DrSJaishankar) July 14, 2021
ಇದನ್ನೂ ಓದಿ:
Tv9 Kannada Digital Explainer: ವಿದೇಶದಲ್ಲಿರುವ ಭಾರತದ ಆಸ್ತಿಗಳ ವಶಕ್ಕೆ ಕೇರ್ನ್ ಎನರ್ಜಿ ಮುಂದಾಗಿರುವುದು ಏಕೆ?
ಸನೋಫಿ-ಜಿಎಸ್ಕೆ ಕೊರೊನಾ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ನಡೆಸಲು ಡಿಸಿಜಿಐ ಅನುಮೋದನೆ
Published On - 11:34 am, Wed, 14 July 21