ಅಮೆರಿಕದ ಕೌರಿ ರಿಚಿನ್ಸ್ (33) ಎಂಬ ಮಹಿಳೆ ತನ್ನ ಪತಿಯ ಮರಣಾನಂತರ ಆತನ ನೆನಪಿಗಾಗಿ ತನ್ನ ಮಕ್ಕಳಿಗಾಗಿ ‘ಆರ್ ಯು ವಿತ್ ಮಿ’ ಪುಸ್ತಕ ಬರೆದಿದ್ದಾಳೆ. ಪತಿಯ ಮರಣದ ನಂತರ ತಾನು ಎದುರಿಸಿದ ನೋವು ಮತ್ತು ಸನ್ನಿವೇಶಗಳ ಕುರಿತು ಈ ಪುಸ್ತಕದಲ್ಲಿ (Book) ಬರೆಯಲಾಗಿದೆ ಎಂದು ಅವರು (Widow) ಹೇಳಿದ್ದಾರೆ. ಈ ಪುಸ್ತಕವು ಇತರ ಮಕ್ಕಳಿಗೆ (Kids) ಗೈಡ್ ಆಗಿ, ಆ ಭಾವನೆಗಳನ್ನು ಹೋಗಲಾಡಿಸಲು ಮತ್ತು ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಮತ್ತೆ ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಆಶಿಸಿದ್ದಾರೆ. ಇಲ್ಲಿ ಟ್ವಿಸ್ಟ್ ಏನೆಂದರೆ, ಕೊನೆಗೆ ಪತಿಯನ್ನು ಕೊಂದವಳು ಅವಳೇ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಗಂಡನ ಆಹಾರದಲ್ಲಿ ಮಾದಕ ವಸ್ತು ಬೆರೆಸಿ ಕೊಲೆ ಮಾಡಿದ್ದಳು (Murder) ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ 4ರಂದು ಮದ್ಯಕ್ಕೆ ಮಾದಕ ವಸ್ತು ಬೆರೆಸಿ ಪತಿ ಎರಿಕ್ ರಿಚಿನ್ಸ್ ಗೆ ನೀಡಿದ್ದರು. ಅದನ್ನು ಕುಡಿದ ನಂತರ ಅವರು ಅಸ್ವಸ್ಥರಾದರು. ಇದನ್ನು ಗಮನಿಸಿದ ಕೌರಿ ರಿಚಿನ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲಿಗೆ, ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ತಲುಪಿದರು. ಗಂಡ ಹಾಸಿಗೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. ಅವರನ್ನು ಆಸ್ಪತ್ರೆಗೆ ಸೇರಿಸಿ, ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನ ಆಗಿಲ್ಲ. ಪತಿಗೆ ಮದ್ಯ ನೀಡಿರುವುದಾಗಿ ತಿಳಿಸಿದ್ದಾಳೆ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಮಾದಕ ವಸ್ತುವಿನ ಮಿತಿಮೀರಿದ ಪ್ರಮಾಣವಿದ್ದು, ಅದರಿಂದಾಗಿಯೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇನ್ನೂ ಕೆಲ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಆ ವಿವರಗಳ ಪ್ರಕಾರ.. ಡಿಸೆಂಬರ್ 2021 ಮತ್ತು ಫೆಬ್ರವರಿ 2022 ರ ನಡುವೆ ಮಾದಕವಸ್ತು ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಯೊಂದಿಗೆ ಮಹಿಳೆ ಸಂಪರ್ಕದಲ್ಲಿದ್ದಳು ಎಂದು ಆಕೆಯ ಮೊಬೈಲ್ ಕಾಲ್ ಡೇಟಾ ಮೂಲಕ ತಿಳಿದುಬಂದಿದೆ. ಬೆನ್ನುಮೂಳೆಯ ಗಾಯದಿಂದ ಬಳಲುತ್ತಿರುವುದಾಗಿ ಹೇಳಿ ಆಕೆ ಮಾತ್ರೆಗಳನ್ನು ಖರೀದಿಸಿದ್ದಳು. ಎರಿಕ್ ರಿಚಿನ್ಸ್ ಅವರು ಮಾತ್ರೆಗಳನ್ನು ಖರೀದಿಸಿದ ಮೂರು ದಿನಗಳ ನಂತರ ಫೆಬ್ರವರಿ 14, 2022 ರಂದು ಅನಾರೋಗ್ಯಕ್ಕೆ ಒಳಗಾದರು.
ತನ್ನ ಪತ್ನಿ ವಿಷ ಕೊಡಲು ಯತ್ನಿಸುತ್ತಿದ್ದಾಳೆ ಎಂಬ ಅನುಮಾನವನ್ನೂ ಸಹ ಆತ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ. ಈ ಬಾರಿ ನೋವು ಕಡಿಮೆಯಾಗದ ಕಾರಣ ಡೀಲರ್ ಬಳಿ ಇನ್ನೂ ಹೆಚ್ಚು ಮಾತ್ರೆಗಳನ್ನು ಕೇಳಿದ್ದಾಳೆ. ಅಂದರೆ ಎರಿಕ್ ರಿಚಿನ್ಸ್ ಸಾವಿನ ಎರಡು ವಾರಗಳ ಮೊದಲು ಅವಳು ಮಾತ್ರೆಗಳನ್ನು ಖರೀದಿಸಿದಳು. ಆಕೆ ಖರೀದಿಸಿದ ಔಷಧ ಎರಿಕ್ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿತ್ತು ಎಂಬುದು ಗಮನಾರ್ಹ. ತನ್ನ ಪತಿಯ ಸಾವಿಗೆ ಆಕೆಯೇ ಕಾರಣ ಎಂದು ಪೊಲೀಸರು ಇತ್ತೀಚೆಗೆ ನಿರ್ಧರಿಸಿದ ನಂತರ ಕೌರಿ ರಿಚಿನ್ಸ್ ಅವರನ್ನು ಅಂತಿಮವಾಗಿ ಸೋಮವಾರ ಬಂಧಿಸಲಾಯಿತು.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ