Pakistan: ಇಮ್ರಾನ್ ಖಾನ್ ಆಪ್ತ ಸಹಾಯಕ ಶಾ ಮೆಹಮೂದ್ ಖುರೇಷಿ ಬಂಧನ
ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಕೋಣೆಗೆ ನುಗ್ಗಿದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಅಧಿಕಾರಿಗಳ ಆದೇಶದ ಮೇರೆಗೆ ಅರೆಸೈನಿಕ ಪಡೆಗಳು ಪಿಟಿಐ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡ ಎರಡು ದಿನಗಳ ನಂತರ ಖರೇಷಿ ಬಂಧನವಾಗಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ವಿದೇಶಾಂಗ ಸಚಿವ, ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಆಪ್ತ ಸಹಾಯಕ ಶಾ ಮೆಹಮೂದ್ ಖುರೇಷಿ ( Shah Mehmood Qureshi) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪಾಕಿಸ್ತಾನದಲ್ಲಿನರಾಜಕೀಯ ಪ್ರಕ್ಷುಬ್ಧತೆಯ ನಡುವೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ರಾಜಧಾನಿ ಮತ್ತು ಮೂರು ಪ್ರಾಂತ್ಯಗಳಲ್ಲಿ ಸೇನೆ ನಿಯೋಜಿಸಲಾಗಿದೆ. ಖುರೇಷಿಯವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಸಾದಾ ಬಟ್ಟೆ ಧರಿಸಿದ ವ್ಯಕ್ತಿಗಳು ಅವರನ್ನು ಕರೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಅವರು ಬಂಧಿಸಲ್ಪಟ್ಟ ಸ್ಥಳದಿಂದ ಹೊರಡುವ ಮೊದಲು ಪಕ್ಷದ ಕಾರ್ಯಕರ್ತರತ್ತ ಕೈ ಬೀಸಿದರು. 66 ವರ್ಷದ ಶಾ ಮೆಹಮೂದ್ ಖುರೇಷಿ ಅವರನ್ನು ಗುರುವಾರ ಮುಂಜಾನೆ ಇಸ್ಲಾಮಾಬಾದ್ ಪೊಲೀಸರು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಪಿಟಿಐ ಹೇಳಿದೆ.
ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಕೋಣೆಗೆ ನುಗ್ಗಿದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಅಧಿಕಾರಿಗಳ ಆದೇಶದ ಮೇರೆಗೆ ಅರೆಸೈನಿಕ ಪಡೆಗಳು ಪಿಟಿಐ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡ ಎರಡು ದಿನಗಳ ನಂತರ ಖರೇಷಿ ಬಂಧನವಾಗಿದೆ.
ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಬುಧವಾರ 70 ವರ್ಷದ ಮಾಜಿ ಪ್ರಧಾನಿಯನ್ನು ಎಂಟು ದಿನಗಳ ಬಂಧನದಲ್ಲಿರಿಸಲು ಭ್ರಷ್ಟಾಚಾರ ನಿಗ್ರಹ ದಳ ಆದೇಶಿಸಿದೆ. ಮಂಗಳವಾರ ಇಮ್ರಾನ್ ಖಾನ್ ಅವರ ನಾಟಕೀಯ ಬಂಧನವು ಪಾಕಿಸ್ತಾನದಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಯನ್ನು ಹುಟ್ಟುಹಾಕಿತು, ಪ್ರತಿಭಟನಾಕಾರರು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಸುಮಾರು 300 ಜನರು ಗಾಯಗೊಂಡರು. ದೇಶದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
اسلام آباد پولیس کی جانب سے وائس چیئرمین تحریک انصاف مخدوم شاہ محمود قریشی کو گرفتار کر کے نامعلوم مقام پر منتقل کر دیا گیا ہے۔ #PakistanUnderSiege pic.twitter.com/R5cuLIc9UE
— PTI (@PTIofficial) May 11, 2023
ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶಹಬಾಜ್ ಷರೀಫ್ ಅವರು ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ನಂತರ ನಡೆದ ಹಿಂಸಾಚಾರಕ್ಕಾಗಿ ಇಮ್ರಾನ್ ಖಾನ್ ಅವರ ಪಿಟಿಐ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದ ಶತ್ರುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ಪ್ರಧಾನಿ ಹೇಳಿದ್ದು ರಾಜ್ಯ ವಿರೋಧಿ ಚಟುವಟಿಕೆಗಳನ್ನ ತಕ್ಷಣವೇ ನಿಲ್ಲಿಸುವಂತೆ ಪಿಟಿಐ ಪ್ರತಿಭಟನಾಕಾರರಲ್ಲಿ ಅವರು ಒತ್ತಾಯಿಸಿದರು. ಅವರು ಶತ್ರುಗಳಂತೆ ಸೂಕ್ಷ್ಮ ಆಸ್ತಿಯ ಮೇಲೆ ದಾಳಿ ಮಾಡಿದರು. ಇಂತಹ ಹೃದಯ ವಿದ್ರಾವಕ ದೃಶ್ಯಗಳನ್ನು ನಾನು ನೋಡಿಲ್ಲ. ಯಾರಿಗೂ ಪಿತೂರಿ ಮಾಡಲು ನಾವು ಬಿಡುವುದಿಲ್ಲ. ಅವರ ನೀಚ ಅಜೆಂಡಾ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ ಪ್ರಧಾನಿ.
ಪಂಜಾಬ್, ಖೈಬರ್ ಪಖ್ತುಂಖ್ವಾ ಮತ್ತು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸೇನೆಯನ್ನು ನಿಯೋಜಿಸಲು ನಿರ್ಧರಿಸಿದ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಶಹಬಾಜ್ ಷರೀಫ್ ಈ ರೀತಿ ಹೇಳಿದ್ದಾರೆ. ಲಾಹೋರ್ ಮತ್ತು ಪೇಶಾವರಲ್ಲಿ ಬೆಂಕಿ ಹಚ್ಚಿದ ಮತ್ತು ಗುಂಡಿನ ಘಟನೆಗಳೊಂದಿಗೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ವರದಿಗಳು ತೋರಿಸಿವೆ.
ಮಂಗಳವಾರ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ನಾಯಕನನ್ನು ಬಂಧಿಸಿದ್ದಕ್ಕಾಗಿ ಆಕ್ರೋಶಗೊಂಡ ಇಮ್ರಾನ್ ಖಾನ್ ಬೆಂಬಲಿಗರು ಬುಧವಾರ ಸೇನೆಯ ಜನರಲ್ ಹೆಡ್ ಕ್ವಾರ್ಟರ್ಸ್‌ಗೆ ದಾಳಿ ನಡೆಸಿದರು. ಮಿಲಿಟರಿ ವಾಹನಗಳು ಮತ್ತು ಸ್ಥಾಪನೆಗಳ ಮೇಲೆ ದಾಳಿ ಮಾಡುವಾಗ ಅವರು ಲಾಹೋರ್ ಕಾರ್ಪ್ಸ್ ಕಮಾಂಡರ್ ನಿವಾಸಕ್ಕೆ ಬೆಂಕಿ ಹಚ್ಚಿದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ