ಮಹಿಳೆಯೊಬ್ಬಳು ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದರೂ ಕೂಡ ಆಕೆ ಜೈಲಿಗೆ ಹೋಗಲಿಲ್ಲ, ಹಾಗಾದರೆ ತಲೆ ಮರೆಸಿಕೊಂಡಿದ್ದಳಾ ಅದೂ ಅಲ್ಲ. ತನ್ನ ಪ್ರಿಯಕರನಿಗೆ 108 ಬಾರಿ ಇರಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕ್ಯಾಲಿಫೋರ್ನಿಯಾ ಮಹಿಳೆಯನ್ನು ನ್ಯಾಯಾಲಯ ಬಿಡುಗಡೆ ಮಾಡಿದ್ದಾರೆ.
ಇದು 2018ರಲ್ಲಿ ನಡೆದಿದ್ದ ಘಟನೆ, ಮಹಿಳೆ ತನ್ನ ಪ್ರಿಯಕರನ ಮೇಲೆ ಹಲ್ಲೆ ನಡೆಸಿ 100ಕ್ಕೂ ಹೆಚ್ಚು ಬಾರಿ ತಿವಿದಿದ್ದಳು, ಆಕೆ ಕೆನೆಬಿಸ್ ಇಂಡ್ಯೂಸ್ಡ್ ಡಿಸ್ಆರ್ಡರ್ನಿಂದ ಬಳಲುತ್ತಿದ್ದಳು, ಹೀಗಾಗಿ ಆಕೆ ಏನು ಮಾಡುತ್ತಿದ್ದಾಳೆ ಎಂಬುದರ ಮೇಲೆ ನಿಯಂತ್ರಣವಿರಲಿಲ್ಲ ಎಂಬುದು ತಿಳಿದುಬಂದಿದೆ.
ಇಬ್ಬರೂ ರಕ್ತದ ಮಡುವಿನಿನಲ್ಲಿ ಬಿದ್ದಿದ್ದರು, ಆಕೆ ತನ್ನನ್ನು ತಾನೂ ಇರಿದುಕೊಂಡಿದ್ದಳು, ಪೊಲೀಸರು ಬಂದು ನೋಡಿದಾಗಲೂ ಆಕೆಯ ಕೈಯಲ್ಲಿ ಇನ್ನೂ ಚಾಕು ಹಾಗೆಯೇ ಇತ್ತು. ಪೊಲೀಸರು ಬ್ರಿನ್ ಸ್ಪೆಜ್ಚರ್ನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ತನ್ನ ಕುತ್ತಿಗೆಯೇ ಕೊಯ್ದುಕೊಂಡಿದ್ದಳು. ಬಳಿಕ ಆಕೆಯ ಪೋಷಕರಿಗೆ ಕರೆ ಮಾಡಲಾಯಿತು.
ನ್ಯಾಯಾಲಯದಲ್ಲಿ ಇಬ್ಬರು ಕೂಡ ಆ ಸಮಯದಲ್ಲಿ ಗಾಂಜಾ ಸೇವಿಸಿದ್ದರು ಎಂಬುದೂ ತಿಳಿದುಬಂದಿದೆ.
ಮತ್ತಷ್ಟು ಓದಿ: ಮಂಡ್ಯ: ಶಿಕ್ಷಕಿ ಕೊಲೆಯಾದ 30 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು
ಓಮೆಲಿಯಾ ತಂದೆ ಮಾತನಾಡಿ, ಗಾಂಜಾ ಸೇವಿಸಿದ್ದರು ಎಂದ ಮಾತ್ರಕ್ಕೆ ಯಾರನ್ನಾದರೂ ಕೊಲ್ಲಲು ಪರವಾನಗಿ ಸಿಕ್ಕಿದಂತಾಗುತ್ತಾ ಎಂದು ಪ್ರಶ್ನಿಸಿದ್ದಾರೆ. ಐದೂವರೆ ವರ್ಷ ಕಳೆದರೂ ಯುವಕನ ಪೋಷಕರು ಅಸ್ತಿಯನ್ನು ಇನ್ನೂ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
100 ಗಂಟೆಗಳ ಕಾಲ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿದೆ. ಒಂದೊಮ್ಮೆ ಇದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ 4 ವರ್ಷಗಳ ಕಠಿಣ ಶಿಕ್ಷೆ ವಿಧಿಸುವುದಾಗಿ ನ್ಯಾಯಾಲಯ ಹೇಳಿದೆ.
ಆದರೆ ಆಕೆ ಇನ್ನುಮುಂದೆ ಇಂಥಹ ತಪ್ಪನ್ನು ಮಾಡುವುದಿಲ್ಲ, ಕ್ಷಮಿಸಿ ಎಂದು ಪೋಷಕರು ಕೇಳಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Thu, 25 January 24