ಯಾವ ಸೌಲಭ್ಯವೂ ಇಲ್ಲದ ಮನೆಯಲ್ಲಿ 9 ವರ್ಷದ ಮಗನನ್ನು 2 ವರ್ಷಗಳ ಕಾಲ ಒಂಟಿಯಾಗಿರಿಸಿದ್ದ ಮಹಿಳೆಗೆ ಜೈಲು ಶಿಕ್ಷೆ
ವಿದ್ಯುತ್ ಇಲ್ಲ, ಆಹಾರವನ್ನು ಬಿಸಿ ಮಾಡಲು ಸಿಲಿಂಡರ್ ಕೂಡ ಇಲ್ಲ, ತಿನ್ನಲು ಆಹಾರವಿಲ್ಲ ಈ ಸ್ಥಿತಿಯಲ್ಲಿ ಮಗನನ್ನು 9 ವರ್ಷಗಳ ಕಾಲ ಮನೆಯಲ್ಲಿ ಒಂಟಿಯಾಗಿರಿಸಿದ್ದ ಫ್ರಾನ್ಸ್ ಮಹಿಳೆಗೆ 18 ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಮಗನನ್ನು ಯಾವುದೇ ಸೌಲಭ್ಯವಿಲ್ಲದ ಅಪಾರ್ಟ್ಮೆಂಟ್ನ ಮನೆಯಲ್ಲಿ ಒಂಟಿಯಾಗಿ ಬಿಟ್ಟು ಆಕೆ ತನ್ನ ಲಿವ್ ಇನ್ ಸಂಗಾತಿ ಜತೆ ಅಲ್ಲಿಂದ ಐದು ಕಿ.ಮೀ ದೂರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಆಕೆಗೆ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಬಾಲಕ 2020ರಿಂದ 2022ರವರೆಗೆ ಕುಟುಂಬದವರ ಸಂಪರ್ಕವೇ ಇಲ್ಲದೆ ಮನೆಯಲ್ಲಿಯೇ ಇದ್ದ. ಕೆಲವೊಮ್ಮೆ ಆತನಿಗೆ ಆಹಾರ ನೀಡಲು ಮನೆಗೆ ಬಂದಾಗ ತಾಯಿ ಮುಖವನ್ನು ನೋಡಿದ್ದ, ಕೇಕ್, ಹತ್ತಿರದ ಬಾಲ್ಕನಿಯಿಂದ ಕದ್ದ ಟೊಮೆಟೊ, ಮನೆಯಲ್ಲಿ ಅಳಿದುಳಿದ ಆಹಾರವನ್ನೇ ತಿಂದು 2 ವರ್ಷಗಳವರೆಗೆ ಜೀವ ಉಳಿಸಿಕೊಂಡಿದ್ದ.
ಆಹಾರ ಬಿಸಿ ಮಾಡಿಕೊಳ್ಳಲು ಸಿಲಿಂಡರ್ ಕೂಡ ಇರಲಿಲ್ಲ, ವಿದ್ಯುತ್ ಸಂಪರ್ಕವೂ ಇಲ್ಲ, ಬಿಸಿನೀರು ಕೂಡ ಇರಲಿಲ್ಲ. ಆತ ದಿನವೂ ಶಾಲೆಗೆ ಹೋಗುತ್ತಿದ್ದ, ಪ್ರತಿ ದಿನ ನಗುನಗುತ್ತಾ ಶಾಲೆಗೆ ಬರುತ್ತಿದ್ದ, ಆತನ ಮುಖದಲ್ಲಿ ಅಸಹಜವಾಗಿದ್ದನ್ನು ಏನನ್ನೂ ಕಂಡಿರಲಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕ್ಯಾಲಿಫೋರ್ನಿಯಾ: ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಇರಿದಿದ್ದರೂ ಮಹಿಳೆ ಜೈಲಿಗೆ ಹೋಗಲಿಲ್ಲ ಏಕೆ?
ಉತ್ತಮ ವಿದ್ಯಾರ್ಥಿ, ಸದಾ ಸ್ವಚ್ಛವಾಗಿರುತ್ತಿದ್ದ, ಎಲ್ಲರ ಬಳಿಯೂ ನಗುತ್ತಾ ಮಾತನಾಡುತ್ತಿದ್ದ ಮಗನನ್ನು ವರ್ಷಗಳ ಕಾಲ ತಾಯಿ ದೂರವಿಟ್ಟಿದ್ದಾಳೆ ಎಂಬ ಸಂಶಯವೂ ಬರಲಿಲ್ಲ ಎಂದಿದ್ದಾರೆ. ಕೆಲವೊಮ್ಮೆ ಸಹಪಾಟಿಗಳಿಗೆ ಅವನ ಬಗ್ಗೆ ಅನುಮಾನ ಬಂದಿತ್ತು, ಆತ ಶಾಲೆಯ ಬಸ್ನಲ್ಲಿ ಬರುವುದಿಲ್ಲ, ಊಟವನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ಕೆಲವೊಮ್ಮೆ ಅಕ್ಕಪಕ್ಕದ ಮನೆಯವರು ಆತನಿಗೆ ಆಹಾರ ನೀಡುತ್ತಾರೆ ಎನ್ನುವ ವಿಚಾರ ತಿಳಿಯಿತು.
2022ರಲ್ಲಿ ಮೇಯರ್ ಆತನ ತಾಯಿಯನ್ನು ಭೇಟಿಯಾದಾಗ ಹಣದ ಅಭಾವವಿದೆ ಎಂದು ಹೇಳಿಕೊಂಡಿದ್ದರು. ಸಂಸ್ಕರಿಸಿದ ಆಹಾರ, ಆಹಾರಕ್ಕಾಗಿ ನಾಲ್ಕು ವೋಚರ್ಗಳನ್ನು ಕೂಡ ತೆಗೆದುಕೊಂಡಿದ್ದರು. ಬಳಿಕ ಮಗು ಒಂಟಿಯಾಗಿ ಅಲ್ಲಿ ವಾಸಿಸುತ್ತಿದೆ ಎಂಬ ವಿಚಾರ ತಿಳಿದು ಪೊಲೀಸರಿಗೆ ಮೇಯರ್ ಕರೆ ಮಾಡಿ ವಿಚಾರ ತಿಳಿಸಿದ್ದರು. ನ್ಯಾಯಾಲಯದಲ್ಲಿ ಆಕೆ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾಳೆ. ಎರಡು ವರ್ಷದಲ್ಲಿ ಆಕೆ ಎರಡು ಬಾರಿ ಮಾತ್ರ ಆತನನ್ನು ನೋಡಿದ್ದಳು ಎಂದು ತಿಳಿದಾಗ ಆಕೆಗೆ 18 ತಿಂಗಳ ಶಿಕ್ಷೆಯನ್ನು ವಿಧಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ