World Population Day 2021: ಜಗತ್ತಿನಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳು ಯಾವುವು? ಅಲ್ಲಿನ ವಿಶೇಷಗಳೇನು? ಇಲ್ಲಿದೆ ವಿವರ

| Updated By: ganapathi bhat

Updated on: Jul 11, 2021 | 5:29 PM

Lowest Population: ವ್ಯಾಟಿಕನ್ ಸಿಟಿಯನ್ನು ವಿಶ್ವದ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಎಂದು ಕರೆಯಲಾಗುತ್ತದೆ. ಆದರೂ ಈ‌ ದೇಶಕ್ಕೆ ಸ್ವಂತ ಸೇನಾಬಲ‌ ಇದೆ.

1 / 10
ವ್ಯಾಟಿಕನ್‌ ಸಿಟಿ- ಈ ದೇಶದ ವಿಸ್ತೀರ್ಣ ಕೇವಲ 0.44 ಚದರ ಮೈಲಿಗಳು. ಇಲ್ಲಿನ ಜನಸಂಖ್ಯೆ ಕೇವಲ 801. ಈ ದೇಶದಲ್ಲಿ ವಾಸಿಸುವ ಮಹಿಳೆಯರ ಪ್ರಮಾಣವೂ ಕಡಿಮೆ‌  ಇದೆ. ಇಲ್ಲಿ ನೈಟ್ ಕ್ಲಬ್‌ಗಳು ಅಥವಾ ಬಾರ್‌ಗಳು‌‌ ಇಲ್ಲ. ವ್ಯಾಟಿಕನ್ ಸಿಟಿಯನ್ನು ವಿಶ್ವದ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಎಂದು ಕರೆಯಲಾಗುತ್ತದೆ. ಆದರೂ ಈ‌ ದೇಶಕ್ಕೆ ಸ್ವಂತ ಸೇನಾಬಲ‌ ಇದೆ.

2 / 10
ನೌರು- ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ಇಲ್ಲಿನ ಜನಸಂಖ್ಯೆ 10,824. ಈ ದೇಶದ ವಿಸ್ತೀರ್ಣ ಕೇವಲ 21 ಕಿಲೋ ಮೀಟರ್ ಮಾತ್ರ. ಇಲ್ಲಿನ ಜನರನ್ನು ಬಹಳ ಸ್ನೇಹಪರರು ಎಂದು ಗುರುತಿಸಲಾಗುತ್ತದೆ.

3 / 10
ತುವಲು- ಈ ದೇಶದ ಜನಸಂಖ್ಯೆ 11,792. ಇಲ್ಲಿನ ವಿಸ್ತೀರ್ಣ ಕೇವಲ 26 ಚದರ ಕಿಲೋಮೀಟರ್. ಸಮುದ್ರದ ನೀರಿನ ಮಟ್ಟ ಹೆಚ್ಚಾದರೆ ಕಣ್ಮರೆಯಾಗುವ ದೇಶಗಳ‌ ಪೈಕಿ ತುವಲು ಮೊದಲ ಸ್ಥಾನದಲ್ಲಿ ಇದೆ. ಇಲ್ಲಿಗೆ ಬಹಳಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.

4 / 10
ಪಲೌ- ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳ‌ ಪೈಕಿ ಪಲೌ ಕೂಡ ಒಂದು. ಇಲ್ಲಿನ ಜನಸಂಖ್ಯೆ 18,094 ಆಗಿದೆ. ಇಲ್ಲಿನ ಸಮುದ್ರತೀರವನ್ನು ಆಸ್ವಾದಿಸಬಹುದು ಹಾಗೂ ಮೀನು ಹಿಡಿಯಲೂಬಹುದು. ಈ ದೇಶವು ಹಣಕಾಸಿನ ನೆರವಿಗೆ ಅಮೆರಿಕಾವನ್ನು ಅವಲಂಬಿಸಿದೆ. ಫೋಟೊಗ್ರಫಿ ಮಾಡಲು ಕೂಡ ಇದು ಸೂಕ್ತ ಪ್ರದೇಶ.

5 / 10
ಸಾನ್ ಮರಿನೊ- ಈ ದೇಶದ ಜನಸಂಖ್ಯೆ 33,931 ಆಗಿದೆ. ಅಷ್ಟೇ ಅಲ್ಲದೆ ಇದು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿನ ಸಣ್ಣ ಬೀದಿಗಳಲ್ಲಿ ಸುತ್ತಾಟ ಮಾಡುವುದರಿಂದ ಹಿಡಿದು ಬೆಟ್ಟದ ಮೇಲಿನ ಟವರ್ ತನಕವೂ ನೋಡಲು ಬಹಳಷ್ಟು ಆಸಕ್ತಿಕರ ಸ್ಥಳಗಳಿದೆ.

6 / 10
ಲಿಚ್ಟೆನ್​ಸ್ಟೈನ್- ಈ ದೇಶದ ಜನಸಂಖ್ಯೆ ಕೇವಲ 38,128. ಈ ದೇಶದ ಮಹಿಳೆಯರಿಗೆ ಜುಲೈ 1, 1984 ರಲ್ಲಿ ಮತ ಚಲಾಯಿಸುವ ಹಕ್ಕು ದೊರೆಯಿತು. ಯುರೋಪ್​ನಲ್ಲೇ ಕೊನೆಯದಾಗಿ ಮಹಿಳೆಯರು ಈ ಹಕ್ಕು ಪಡೆದ ದೇಶವಿದು. ಜಾಗತಿಕ ಮಟ್ಟದಲ್ಲಿನ ನಿರುದ್ಯೋಗ ಪ್ರಮಾಣದಲ್ಲಿ ಈ ದೇಶಕ್ಕೆ ಎರಡನೇ ಸ್ಥಾನವಿದೆ.

7 / 10
ಮೊನಾಕೊ- ಈ ದೇಶದಲ್ಲಿ 39,242 ಜನರು ವಾಸ ಮಾಡುತ್ತಿದ್ದಾರೆ. ಜಾಗತಿಕವಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೊನಾಕೊ ಕೂಡ ಮುಖ್ಯವಾಗಿ ಕಾಣಸಿಗುತ್ತದೆ.

8 / 10
ಸೈಂಟ್ ಕಿಟ್ಸ್ ಮತ್ತು ನೆವಿಸ್- ಈ ಕೆರಿಬಿಯನ್ ದೇಶದಲ್ಲಿ 53,199 ಜನರು ವಾಸಿಸುತ್ತಾರೆ. ಈ ದೇಶದ ವಿಸ್ತೀರ್ಣವು 261 ಚದರ ಕಿಲೋಮೀಟರ್ ಆಗಿದೆ. ಜನಸಂಖ್ಯೆ ವಿಚಾರದಲ್ಲಿ ಇದೂ ಕೂಡ ಕಡಿಮೆ ಜನರು ವಾಸವಿರುವ ದೇಶವಾಗಿದೆ. ಇ ದೇಶದ ಆರ್ಥಿಕತೆಯು ಬಹುಮುಖ್ಯವಾಗಿ ಪ್ರವಾಸಿಗರು ಹಾಗೂ ಕೃಷಿಯನ್ನು ಅವಲಂಬಿಸಿದೆ.

9 / 10
ಮಾರ್ಷಲ್ ಐಲ್ಯಾಂಡ್ಸ್- ಈ ದೇಶದಲ್ಲಿ 59,190 ಜನರು ವಾಸವಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಈ ದೇಶದಲ್ಲಿ 67 ಅಟಾಮಿಕ್ ಟೆಸ್ಟ್​ಗಳನ್ನು 1946 ಹಾಗೂ 1958ರ ಮಧ್ಯದಲ್ಲಿ ಸಂಘಟಿಸಿದೆ. ಇದರಲ್ಲಿ ಅತಿ ದೊಡ್ಡ ನ್ಯೂಕ್ಲಿಯರ್ ಟೆಸ್ಟ್ ಕೂಡ ಒಳಗೊಂಡಿತ್ತು.

10 / 10
ಡೊಮಿನಿಕಾ- ಈ ದೇಶದ ಜನಸಂಖ್ಯೆ 71,986 ಆಗಿದೆ. ಡೊಮಿನಿಕಾ ದೇಶವು ಪೂರ್ವ ಕೆರಿಬಿಯನ್ ದೇಶಗಳಲ್ಲೇ ಅತಿ ಕಡಿಮೆ ಜಿಡಿಪಿ ಹೊಂದಿರುವ ದೇಶ ಎಂದು ಕರೆಸಿಕೊಂಡಿದೆ. ಪ್ರಾಕೃತಿಕ ಸೊಬಗಿಗೆ ಈ ದೇಶವೂ ಹೆಸರು ಪಡೆದುಕೊಂಡಿದೆ.

Published On - 5:23 pm, Sun, 11 July 21