ಶಾಲಾ ಪಠ್ಯಗಳಲ್ಲಿ ಮಲಾಲಾ ಯೂಸುಫ್ಝೈ ಹೆಸರು; ವಿರೋಧ ವ್ಯಕ್ತಪಡಿಸಿದ ಪಾಕಿಸ್ತಾನಿ ಪ್ರಜೆಗಳು
ಕರಾಚಿಯಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ಯೂಸಫ್ ಮಲಾಲಾರ ಹೆಸರನ್ನು ಇಡಲಾಗಿತ್ತು. ಸರ್ಕಾರದ ಈ ನಿರ್ಣಯಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಕೆಲವು ಪ್ರಜೆಗಳು, ಶಾಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಲಾಲಾರ ಹೆಸರನ್ನು ಶಾಲೆಗೆ ಇಡಬಾರದು ಎಂದು ಒತ್ತಾಯಿಸಿದ್ದಾರೆ.
ಪಾಕಿಸ್ತಾನದ ಅತ್ಯಂತ ಪ್ರಮುಖ ವ್ಯಕ್ತಿಗಳು ಎಂದು ಉಲ್ಲೇಖಿಸಲಾದ ಶಾಲಾ ಪಠ್ಯದ ಭಾಗದಲ್ಲಿ ಯುವ ಹೋರಾಟಗಾರ್ತಿ ಮಲಾಲಾ ಯೂಸುಫ್ಝೈ ಅವರ ಹೆಸರನ್ನು ತೆಗೆದುಹಾಕುವಂತೆ ಪಾಕಿಸ್ತಾನದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಠ್ಯದಲ್ಲಿ ಸದ್ಯ ಇರುವ ಮಲಾಲಾ ಯೂಸುಫ್ಝೈ ಅವರ ಹೆಸರನ್ನು ಪಠ್ಯದಲ್ಲಿ ಯಾವುದೇ ಕಾರಣಕ್ಕೂ ಸೇರಸಬಾರದು ಎಂದು ಪಾಕಿಸ್ತಾನದ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮವೊಂದರ ಬಳಕೆದಾರರೊಬ್ಬರು ಈ ಪುಸ್ತಕದ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಅಲಮಾ ಇಕ್ಬಾಲ್, ಚೌಧರಿ ರಹಮತ್ ಅಲಿ, ಲಿಯಾಕತ್ ಅಲಿ ಖಾನ್, ಮೊಹಮ್ಮದ್ ಅಲಿ ಜಿನ್ನಾ, ಬೇಗಂ ರಾಣಾ ಲಿಯಾಕತ್ ಅಲಿ ಮತ್ತು ಅಬ್ದುಲ್ ಸಿತಾರ್ ಅವರ ಚಿತ್ರಗಳ ಜತೆ ಮಲಾಲಾ ಯೂಸುಫ್ಝೈ ಅವರ ಚಿತ್ರಗಳೂ ಸಹ ಇದ್ದು, ಸಾಮಾಜಿಕ ಜಾಲತಾಣಿಗರೊಬ್ಬರು ಈ ಪುಸ್ತಕದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕರಾಚಿಯಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ಮಲಾಲಾ ಯೂಸುಫ್ಝೈರ ಹೆಸರನ್ನು ಇಡಲಾಗಿತ್ತು. ಸರ್ಕಾರದ ಈ ನಿರ್ಣಯಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಕೆಲವು ಪ್ರಜೆಗಳು, ಶಾಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಲಾಲಾರ ಹೆಸರನ್ನು ಶಾಲೆಗೆ ಇಡಬಾರದು ಎಂದು ಒತ್ತಾಯಿಸಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರ ಕಪಿಲ್ ದೇವ್ ಈ ಕುರಿತು ಟ್ವೀಟ್ ಮಾಡಿದ್ದು, ಸಿಂಧ್ ಪ್ರಾಂತ್ಯದ ಶಿಕ್ಷಣ ಮಂತ್ರಿಗಳ ಬಳಿ ನಾವು ಸರ್ಕಾರಿ ಶಾಲೆಗೆ ಮಲಾಲಾ ಯೂಸುಫ್ಝೈರ ಹೆಸರನ್ನು ಇಟ್ಟ ನಿರ್ಣಯವನ್ನು ಮರು ಪರಿಶೀಲಿಸುವಂತೆ ನಾವು ಆಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಭಾರತ ಪಾಕ್ ಒಳ್ಳೆಯ ಗೆಳೆಯರಾಗಬೇಕು; ಕನಸು ಬಿಚ್ಚಿಟ್ಟ ಮಲಾಲಾ ಯೂಸುಫ್
(Pakistani people demands exclusion of Malala Yousafzai from school books)
Published On - 5:48 pm, Sun, 11 July 21