2023ರ ವಿಶ್ವದ ಅತ್ಯುತ್ತಮ ಮತ್ತು ಕಳಪೆ ಸೇವೆ ನೀಡಿದ ವಿಮಾನ ನಿಲ್ದಾಣಗಳು: ಭಾರತಕ್ಕೆ ಯಾವ ಸ್ಥಾನ?

2023ರಲ್ಲಿ ವಿಶ್ವದ ಯಾವೆಲ್ಲ ವಿಮಾನ ನಿಲ್ದಾಣಗಳು ಉತ್ತಮ ಮತ್ತು ಕೆಟ್ಟ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ಒಂದು ವರದಿ ತಿಳಿಸಿದೆ. ಯಾವೆಲ್ಲ ದೇಶದ ವಿಮಾನ ನಿಲ್ದಾಣಗಳು ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಿದೆ ಎಂಬುದನ್ನು ಹಾಗೂ ಯಾವೆಲ್ಲ ದೇಶದ ವಿಮಾನ ನಿಲ್ದಾಣಗಳು ಕೆಟ್ಟ ಸೇವೆಗಳನ್ನು ನೀಡಿದೆ ಎಂಬುದನ್ನು ಈ ವರದಿ ಪಟ್ಟಿ ಮಾಡಿದೆ.

2023ರ ವಿಶ್ವದ ಅತ್ಯುತ್ತಮ ಮತ್ತು ಕಳಪೆ ಸೇವೆ ನೀಡಿದ ವಿಮಾನ ನಿಲ್ದಾಣಗಳು: ಭಾರತಕ್ಕೆ ಯಾವ ಸ್ಥಾನ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Dec 20, 2023 | 3:49 PM

2023 ಕೊನೆಯಾಗುತ್ತಿದ್ದಂತೆ ಅನೇಕ ಕಹಿ-ಸಿಹಿ ಘಟನೆಗಳು ನಡೆದಿದೆ. ಹಲವು ಕ್ಷೇತ್ರದಲ್ಲಿ ಬದಲಾವಣೆಗಳು ಕೂಡ ಆಗಿದೆ. ಆಡಳಿತ್ಮಾಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಲವು ಬದಲಾವಣೆಗಳು ಹಾಗೂ ಈ ಕ್ಷೇತ್ರದ ಸಿಹಿ-ಕಹಿ ಘಟನೆಗಳು ನಮ್ಮ ಅನುಭವಕ್ಕೆ ಬಂದಿದೆ. ಇದೀಗ 2023ರಲ್ಲಿ ವಿಶ್ವದ ಯಾವೆಲ್ಲ ವಿಮಾನ ನಿಲ್ದಾಣಗಳು (International Airport) ಉತ್ತಮ ಮತ್ತು ಕೆಟ್ಟ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ಒಂದು ವರದಿ ತಿಳಿಸಿದೆ. ಯಾವೆಲ್ಲ ದೇಶದ ವಿಮಾನ ನಿಲ್ದಾಣಗಳು ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಿದೆ ಎಂಬುದನ್ನು ಹಾಗೂ ಯಾವೆಲ್ಲ ದೇಶದ ವಿಮಾನ ನಿಲ್ದಾಣಗಳು ಕೆಟ್ಟ ಸೇವೆಗಳನ್ನು ನೀಡಿದೆ ಎಂಬುದನ್ನು ಈ ವರದಿ ಪಟ್ಟಿ ಮಾಡಿದೆ.

ವಿಮಾನ ನಿಲ್ದಾಣದಲ್ಲಿ ವಿಮಾನಯಾನ ವಿಳಂಬವಾಗಿರುವುದು, ತಡವಾಗಿ ವಿಮಾನ ಬಂದಿರುವುದು, ನಿಲ್ದಾಣದ ಸೇವೆಯಲ್ಲಿ ಸಮಸ್ಯೆಯಾಗಿರುವುದು, ತಾಂತ್ರಿಕ ಸೇವೆಗಳ ಕೊರತೆ, ಹೀಗೆ ಅನೇಕ ವಿಚಾರಗಳನ್ನು ಇಟ್ಟುಕೊಂಡು ಒಂದು ವರದಿಯನ್ನು ತಯಾರಿಸಿದೆ. ಜನವರಿ 1 ರಿಂದ ಸೆಪ್ಟೆಂಬರ್ 30 ರವರೆಗೆ ಸಂಗ್ರಹಿಸಿದ ಡೇಟಾ ಪ್ರಕಾರ ಇದನ್ನು ತಿಳಿಸಲಾಗಿದೆ. 15,800ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

ವರದಿ ಪ್ರಕಾರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವು ಓಮನ್‌ನ ಮಸ್ಕತ್ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣ ಎಂದು ಹೇಳಲಾಗಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿ ಬ್ರೆಜಿಲ್‌ನ ರೆಸಿಫ್-ಗುರಾರಾಪ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಜಪಾನ್ ಮತ್ತು ಬ್ರೆಜಿಲ್ ವಿಮಾನ ನಿಲ್ದಾಣದ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಹೇಳಿದೆ. ಆದರೆ ಭಾರತ ಈ ಪಟ್ಟಿಯಲ್ಲಿ ಇಲ್ಲ ಎಂದು ಹೇಳಲಾಗಿದೆ. ಭಾರತದ ತನ್ನ ವಿಮಾನ ನಿಲ್ದಾಣಗಳು ಅಭಿವೃದ್ಧಿ ಮಾಡುತ್ತಿದೆ ಎಂದು ಹೇಳಿದೆ.

ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

1.ಮಸ್ಕತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಓಮನ್ (MCT)

2.ರೆಸಿಫ್/ಗ್ವಾರಾರಾಪ್ಸ್-ಗಿಲ್ಬರ್ಟೊ ಫ್ರೈರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬ್ರೆಜಿಲ್ (REC)

3. ಕೇಪ್ ಟೌನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಆಫ್ರಿಕಾ (CPT)

4. ಬ್ರೆಸಿಲಿಯಾ-ಅಧ್ಯಕ್ಷ ಜಸ್ಸೆಲಿನೊ ಕುಬಿಟ್‌ಚೆಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬ್ರೆಜಿಲ್ (BSB)

5. ದೋಹಾ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕತಾರ್ (DOH)

6. ಒಸಾಕಾ ಇಟಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜಪಾನ್ (ITM)

7. ಬೆಲೆಮ್/ವಾಲ್-ಡಿ-ಕಾನ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬ್ರೆಜಿಲ್ (BEL)

8. ಬೆಲೊ ಹಾರಿಜಾಂಟೆ ಟ್ಯಾಂಕ್ರೆಡೊ ನೆವೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬ್ರೆಜಿಲ್ (CNF)

9. ಟೋಕಿಯೋ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜಪಾನ್ (NRT)

10. ಅಮಾಮಿ ವಿಮಾನ ನಿಲ್ದಾಣ, ಜಪಾನ್ (ASJ)

ಇದನ್ನೂ ಓದಿ: ಮುಂದಿನ ತಿಂಗಳಿಂದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಸಂಪೂರ್ಣ ನಿಯಂತ್ರಣ ಅದಾನಿ ಗ್ರೂಪ್ ತೆಕ್ಕೆಗೆ

ವಿಶ್ವದ 10 ಕೆಟ್ಟ ವಿಮಾನ ನಿಲ್ದಾಣಗಳು

1. ಬಂಜರ್ಮಸಿನ್ ಶ್ಯಾಮ್ಸುದಿನ್ ನೂರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇಂಡೋನೇಷ್ಯಾ (BDJ)

2. ಮಾಲ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (MLA)

3. ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣ, ಯುಕೆ (LGW)

4. ಲಿಸ್ಬನ್ ಹಂಬರ್ಟೊ ಡೆಲ್ಗಾಡೊ ವಿಮಾನ ನಿಲ್ದಾಣ, ಪೋರ್ಚುಗಲ್ (LIS)

5. ಬೆಲ್‌ಗ್ರೇಡ್ ನಿಕೋಲಾ ಟೆಸ್ಲಾ ವಿಮಾನ ನಿಲ್ದಾಣ (BEG)

6. ಡೆನ್‌ಪಾಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬಾಲಿ (DPS)

7. ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (YYZ)

8. ಸೋಫಿಯಾ ವಿಮಾನ ನಿಲ್ದಾಣ, ಬಲ್ಗೇರಿಯಾ (SOF)

9. ಮಾರ್ಸಿಲ್ಲೆ ಪ್ರೊವೆನ್ಸ್ ವಿಮಾನ ನಿಲ್ದಾಣ, ಫ್ರಾನ್ಸ್ (MRS)

10. ಹಲೀಮ್ ಪೆರ್ದನಕುಸುಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇಂಡೋನೇಷ್ಯಾ (HLP)

ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?