ಸಿಂಗಾಪುರ್: ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ವಿಶ್ವದೆಲ್ಲೆಡೆ ತನ್ನ ಬ್ರಾಂಚ್ಗಳನ್ನು ಹೊಂದಿರುವ ಆ್ಯಪಲ್ ಕಂಪನಿ ಮೊದಲ ಬಾರಿಗೆ ನೀರಿನಲ್ಲಿ ತೇಲುವ ಸ್ಟೋರ್ ಆರಂಭಿಸಲಿದೆ. ಸಿಂಗಾಪುರದಲ್ಲಿ ಇಂತಹದೊಂದು ವಿಶೇಷ ಸ್ಟೋರ್ ಆರಂಭಿಸಲಿದ್ದು, ಇದು ಸಿಂಗಾಪುರದಲ್ಲಿರುವ ಮೂರನೇ ಆ್ಯಪಲ್ ಸ್ಟೋರ್ ಆಗಲಿದೆ.
ಸಿಂಗಾಪುರದ ಮರೀನಾ ಬೇಯಲ್ಲಿ ನಿರ್ಮಾಣವಾಗಿರುವ ನೂತನ ಸ್ಟೋರ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸ್ಟೋರ್ನ ವಿಶೇಷತೆ ಅಂದ್ರೆ ಇದು ನೀರಿನಲ್ಲಿ ತೇಲುವ ಸ್ಟೋರ್ ಆಗಿದೆ. ಇದು ಗೋಲಾಕಾರದಲ್ಲಿದೆ. ಸ್ಟೋರ್ನ ಒಳಗಡೆ ಆ್ಯಪಲ್ ವಸ್ತುಗಳು, ಸರ್ವಿಸ್ ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಲಭ್ಯವಿರಲಿವೆ.
ಆ್ಯಪಲ್ ಕಂಪನಿ 2017ರಲ್ಲಿ ಸಿಂಗಾಪುರದ ಆರ್ಚರ್ಡ್ ರಸ್ತೆಯಲ್ಲಿ ತನ್ನ ಮೊದಲ ಸ್ಟೋರ್ ಆರಂಭಿಸಿತ್ತು. ನಂತರ 2019ರಲ್ಲಿ ಚುವೆಲ್ ಚಾಂಗಿ ಏರ್ಪೋರ್ಟ್ ಬಳಿ ಎರಡನೇ ಸ್ಟೋರ್ ಆರಂಭಿಸಿತ್ತು. ಈಗ ಇದು ಮರೀನಾ ಬೇನಲ್ಲಿ ತನ್ನ ಮೂರನೇ ಸ್ಟೋರ್ ಆರಂಭಿಸಲಿದೆ.