Aston Martin DB12: ವಿಶ್ವದ ಪ್ರಥಮ ಸೂಪರ್ ಟೂರರ್ ಆಸ್ಟನ್ ಮಾರ್ಟಿನ್ ಡಿಬಿ12 ಬೆಂಗಳೂರಿನಲ್ಲಿ ಬಿಡುಗಡೆ
ಆಸ್ಟನ್ ಮಾರ್ಟಿನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಸೂಪರ್ ಟೂರರ್ ಡಿಬಿ12 ಸ್ಪೋರ್ಟ್ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ವಿಶ್ವದ ಜನಪ್ರಿಯ ಬ್ರಿಟಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಆಸ್ಟನ್ ಮಾರ್ಟಿನ್ (Aston Martin) ತನ್ನ ಜನಪ್ರಿಯ ಕಾರು ಮಾದರಿಯಾದ ಡಿಬಿ12(DB12) ಸೂಪರ್ ಟೂರರ್ ಸ್ಪೋರ್ಟ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 4.59 ಕೋಟಿ ಆರಂಭಿಕ ಬೆಲೆ ಹೊಂದಿದೆ.
ಭಾರತದ ವಾಹನೋದ್ಯಮದಲ್ಲಿ ಹೊಸ ಅಲೆ ಹುಟ್ಟುಹಾಕುವುದಕ್ಕೆ ಹೊರಟಿರುವ ಆಸ್ಟನ್ ಮಾರ್ಟಿನ್ ಹೊಸ ಡಿಬಿ12 ಆವೃತ್ತಿಯು ವಿಶ್ವದ ಪ್ರಥಮ ಸೂಪರ್ ಟೂರರ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ವಿನ್ಯಾಸ ಮತ್ತು ತಂತ್ರಜ್ಞಾನದೊಂದಿಗೆ ಇದು ಅದ್ಭುತವಾದ ಡ್ರೈವಿಂಗ್ ಅನುಭವವನ್ನು ಒದಗಿಸುತ್ತದೆ.
ವಿಶಿಷ್ಠವಾದ ವಿನ್ಯಾಸ, ಐಷಾರಾಮಿ ಸೌಲಭ್ಯಗಳು ಮತ್ತು ಅದ್ಭುತವಾದ ಕಾರ್ಯಕ್ಷಮತೆಯ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಸ್ಟನ್ ಮಾರ್ಟಿನ್ ಕಂಪನಿಯು 110ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿಯೇ ಡಿಬಿ12 ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ADAS ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!
ಕಾರುಗಳ ಉತ್ಪಾದನೆಯಲ್ಲಿ ಬರೋಬ್ಬರಿ 110 ವರ್ಷಗಳ ಇತಿಹಾಸ ಹೊಂದಿರುವ ಆಸ್ಟನ್ ಮಾರ್ಟಿನ್ ಕಂಪನಿಯು ಭಾರತದಲ್ಲಿ ಸುಮಾರು 95 ವರ್ಷಗಳ ಅಸ್ತಿತ್ವವನ್ನು ಹೊಂದಿದ್ದು, 1928 ರಲ್ಲಿ ಮೊದಲ ಎಸ್ ಟೈಪ್ ಸ್ಟೋರ್ಟ್ಸ್ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಎಸ್ ಟೈಪ್ ಸ್ಟೋರ್ಟ್ಸ್ ಬಿಡುಗಡೆಯ ನಂತರ ಗ್ರಾಹಕರ ಬೇಡಿಕೆಯೆಂತೆ ಹೊಸ ರೇಂಜ್ ಬಿಡುಗಡೆ ಮಾಡಿದ ಆಸ್ಟನ್ ಮಾರ್ಟಿನ್ ಕಂಪನಿ ಇದುವರೆಗೆ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಲ್ಟ್ರಾ ಲಗ್ಷುರಿ ಡಿಬಿಎಕ್ಸ್ ಮತ್ತು ಡಿಬಿಎಚ್707 ಸೇರಿದಂತೆ ವಾಂಟೇಜ್ ಸ್ಪೋರ್ಟ್ಸ್ ಕಾರು ಮಾದರಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ವಿಶ್ವದ ಮೊದಲ ಸೂಪರ್ ಟೂರರ್ ಡಿಬಿ12 ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.
ಆಸ್ಟನ್ ಮಾರ್ಟಿನ್ ಕಂಪನಿ ಡಿಬಿ12 ಮೂಲಕ ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಕ್ಕೆ ಹೊಸ ಮಾನದಂಡಗಳನ್ನು ನಿಗದಿಪಡಿಸಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ ಕಾರನ್ನು ಅದ್ಭುತವಾಗಿ ಟ್ಯೂನ್ ಮಾಡಲಾಗಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಆಸ್ಟನ್ ಮಾರ್ಟಿನ್ ಹೊಸ ಡಿಬಿ12 ಕಾರಿನಲ್ಲಿ 4.0 ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಅನ್ನು ಜೋಡಿಸಲಾಗಿದ್ದು, 8 ಸ್ಪೀಡ್ ಅಟೊಮ್ಯಾಟಿಕ್ ಟ್ರಾನ್ಸ್ಮಿಶನ್ ಮೂಲಕ 670 ಹಾರ್ಸ್ ಪವರ್ ಮತ್ತು 800 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಕಾರು ಜಿಟಿ, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಡ್ರೈವ್ ಮೋಡ್ ಗಳೊಂದಿಗೆ ಕೇವಲ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪೀಡ್ ಸಾಧಿಸಲಿದ್ದು, ಪ್ರತಿ ಗಂಟೆಗೆ ಗರಿಷ್ಠ 325 ಕಿ.ಮೀ ಟಾಪ್ ಸ್ಪೀಡ್ ಸಾಧಿಸಬಲ್ಲದು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಸೂಪರ್ ಸೇಫ್ ಗಾರ್ಡ್ ಐಷಾರಾಮಿ ಕಾರಿನ ವಿಶೇಷತೆಗಳೇನು ಗೊತ್ತಾ?
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಹೊಸ ಡಿಬಿ12 ಕಾರು ಮಾದರಿಯು ತನ್ನ ವಿಭಾಗದ ಇತರೆ ಕಾರುಗಳಿಂತಲೂ ಅತ್ಯುತ್ತಮ ಗುಣಮಟ್ಟದ ಉತ್ಪಾದನಾ ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸ್ಪೋರ್ಟಿ ವಿನ್ಯಾಸವು ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಪೂರಕವಾಗಿದೆ. ಹೊಸ ಕಾರು ಈ ಹಿಂದಿನ ಡಿಬಿ11 ಮಾದರಿಯಿಂದಲೂ ಕೆಲವು ವಿನ್ಯಾಸಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ದೊಡ್ಡದಾದ ಫ್ರಂಟ್ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಮೂರು ತಂಡುಗಳ ವಿನ್ಯಾಸ ಹೊಂದಿರುವ ಎಲ್ಇಡಿ ಡಿಆರ್ ಎಲ್ ಗಳು, ಸ್ಪೋರ್ಟಿಯಾಗಿರುವ ಬಂಪರ್, 21 ಇಂಚಿನ ಅಲಾಯ್ ವ್ಹೀಲ್ ಮತ್ತು ಫ್ಲಶ್ ಫಿಟಿಂಗ್ ಡೋರ್ ಹ್ಯಾಂಡಲ್ ಗಳನ್ನು ಹೊಂದಿದೆ.
ಹಾಗೆಯೇ ಹೊಸ ಡಿಬಿ12 ಕಾರಿನ ಒಳಾಂಗಣ ಸೌಲಭ್ಯಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದ್ದು, ಇನ್ ಹೌಸ್ ತಂತ್ರಜ್ಞಾನ ಪ್ರೇರಿತ ಅತ್ಯಾಧುನಿಕ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ 12.3 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅತ್ಯಾಧುನಿಕ ಬೋವರ್ಸ್ ಅಂಡ್ ವಿಲ್ಕ್ಲಿನ್ಸ್ ಸೌಂಡ್ ಸಿಸ್ಟಂ ಸೌಲಭ್ಯ ಹೊಂದಿದೆ.
Published On - 2:53 pm, Mon, 16 October 23