AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AtherStack5.0: ಹೊಸ ಬದಲಾವಣೆಯೊಂದಿಗೆ ಮಿಂಚಿದ ಎಥರ್ 450ಎಕ್ಸ್ ಮತ್ತು 450 ಪ್ಲಸ್

ಎಥರ್ ಎನರ್ಜಿ ಕಂಪನಿಯು ತನ್ನ ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಮತ್ತಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ.

AtherStack5.0: ಹೊಸ ಬದಲಾವಣೆಯೊಂದಿಗೆ ಮಿಂಚಿದ ಎಥರ್ 450ಎಕ್ಸ್ ಮತ್ತು 450 ಪ್ಲಸ್
ಹೊಸ ಬದಲಾವಣೆಯೊಂದಿಗೆ ಮಿಂಚಿದ ಎಥರ್ 450ಎಕ್ಸ್ ಮತ್ತು 450 ಪ್ಲಸ್
Praveen Sannamani
Praveen Sannamani|

Updated on:Jan 10, 2023 | 8:26 PM

Share

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ(Ather Energy) ಕಂಪನಿಯು 450ಎಕ್ಸ್ ಮತ್ತು 450 ಪ್ಲಸ್ ಆವೃತ್ತಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಹೊಸ ಇವಿ ಸ್ಕೂಟರ್ ಮಾದರಿಗಳಿಗಾಗಿ 5.0 ನವೀಕರಣ ಪರಿಚಯಿಸಿದೆ. ಹೊಸ ನವೀಕರಣದೊಂದಿಗೆ ಎಥರ್ ಇವಿ ಸ್ಕೂಟರ್ ಗಳು ಇದೀಗ ಮತ್ತಷ್ಟು ಸ್ಮಾರ್ಟ್ ಆಗಿ ಮಾರುಕಟ್ಟೆಗೆ ಪ್ರವೇಶಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಗಳಲ್ಲಿ ಹಲವಾರು ಫೀಚರ್ಸ್ ಗಳನ್ನು ಉನ್ನತೀಕರಿಸಿದೆ.

450ಎಕ್ಸ್ ಮತ್ತು 450 ಪ್ಲಸ್ ಮೂರನೇ ತಲೆಮಾರಿನ ಆವೃತ್ತಿಗಳಲ್ಲಿ ಎಥರ್ ಕಂಪನಿಯು ಆಟೋ ಹೋಲ್ಡ್, ಉನ್ನತೀಕರಿಸಿದ ಗೂಗಲ್ ಮ್ಯಾಪ್ ಮತ್ತು ಲೈವ್ ಟ್ರಾಫಿಕ್, ರೈಡ್ ಮೋಡ್ ಗಳಿಗೆ ಅನುಗುಣವಾಗಿ ಬದಲಾಗುವ ಬ್ಯಾಟರಿ ಮಾಹಿತಿ ಲಭ್ಯತೆ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಹೊಸ ಇವಿ ಸ್ಕೂಟರ್ ಗಳಲ್ಲಿ ನಾಲ್ಕು ಹೊಸ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಕಾಸ್ಮಿಕ್ ಬ್ಲ್ಯಾಕ್, ಸಾಲ್ಟ್ ಗ್ರೀನ್, ಟ್ರೂ ರೆಡ್ ಮತ್ತು ಲೂನಾರ್ ಗ್ರೇ ಬಣ್ಣಗಳ ಆಯ್ಕೆ ನೀಡಲಾಗಿದೆ.

ather energy

ನವೀಕೃತ ಆಸನ ಸೌಲಭ್ಯ

ಎಥರ್ ಕಂಪನಿಯು ಈ ಬಾರಿ ಹೊಸ ಇವಿ ಸ್ಕೂಟರ್ ಗಳಲ್ಲಿನ ಸೀಟ್ ಗಳನ್ನು ಹೆಚ್ಚು ಆರಾಮದಾಯಕವಾಗುವಂತೆ ಮರುವಿನ್ಯಾಸಗೊಳಿಸಿದೆ. ಈ ಹಿಂದಿನ ಮಾದರಿಗಳಲ್ಲಿ ಹಿಂಬದಿಯ ಸವಾರರಿಗೆ ದೂರದ ಪ್ರಯಾಣ ವೇಳೆ ಆಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸಿದ್ದು, ಗ್ರಾಹಕರ ಸಲಹೆ ಮೇರೆಗೆ ಈ ಬಾರಿ ಅರಾಮದಾಯಕವಾಗಿ ಪ್ರಯಾಣಿಸಲು ಅನುಕೂಲಕರವಾಗುವಂತೆ ಮರುವಿನ್ಯಾಸಗೊಳಿಸಿದೆ.

ವಿಸ್ತರಿತ ಬ್ಯಾಟರಿ ವಾರಂಟಿ

ಎಥರ್ ಎನರ್ಜಿ ಕಂಪನಿಯು ಇವಿ ಸ್ಕೂಟರ್ ಗಳಿಗೆ ಈಗಾಗಲೇ ನೀಡಲಾಗುತ್ತಿರುವ ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿ ಎರಡು ವರ್ಷಗಳ ವಿಸ್ತರಿತ ವಾರಂಟಿ ಪರಿಚಯಿಸಿದೆ. ಮೂರು ವರ್ಷಗಳ ನಂತರ ಐದು ವರ್ಷಗಳಿಗೆ ಬ್ಯಾಟರಿ ವಾರಂಟಿ ವಿಸ್ತರಿಸುವ ಗ್ರಾಹಕರು ರೂ. 6,999 ಪಾವತಿ ಮಾಡಬೇಕಾಗುತ್ತದೆ. ಇದು ನಿಮ್ಮ ಇವಿ ಸ್ಕೂಟರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದು, 5 ವರ್ಷಗಳ ಕೊನೆಯಲ್ಲಿ ಬ್ಯಾಟರಿಗೆ ಕನಿಷ್ಠ ಶೇ. 70 ರಷ್ಟು ಗುಣಮಟ್ಟವನ್ನು ಖಾತರಿಪಡಿಸುತ್ತದೆ.

ಬೆಲೆ ಮತ್ತು ಬ್ಯಾಟರಿ

ಹೊಸ ಎಥರ್ 450ಎಕ್ಸ್ ಮತ್ತು 450 ಪ್ಲಸ್ ಸ್ಕೂಟರ್ ಮಾದರಿಗಳು ನಮ್ಮ ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ. 1,35,452 ರಿಂದ ರೂ. 1,58,462 ಬೆಲೆ ಹೊಂದಿದ್ದು, ಇದರಲ್ಲಿ 3.7 kWh ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ 450 ಪ್ಲಸ್ ಪ್ರತಿ ಚಾರ್ಜ್ ಗೆ 85 ಕಿ.ಮೀ ಮೈಲೇಜ್ ನೀಡಿದರೆ 450ಎಕ್ಸ್ ಪ್ರತಿ ಚಾರ್ಜ್ ಗೆ 105 ಕಿ.ಮೀ ಮೈಲೇಜ್ ನೀಡುತ್ತದೆ.

ಇನ್ನು ಹೊಸ ಇವಿ ಸ್ಕೂಟರ್ ಮಾದರಿಗಳೊಂದಿಗೆ ಎಥರ್ ಕಂಪನಿಯ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಮಾರಾಟ ದಾಖಲೆಯೊಂದಿಗೆ ಕಂಪನಿಯು ಹೊಸೂರಿನಲ್ಲಿರುವ ತನ್ನ ಇವಿ ಸ್ಕೂಟರ್ ಉತ್ಪಾದನಾ ಘಟಕವನ್ನು ವಿಸ್ತರಿಸುತ್ತಿದೆ. ಬೇಡಿಕೆ ತಕ್ಕಂತೆ ಮಾರಾಟ ಮಳಿಗೆಗಳನ್ನು ಕೂಡಾ ಹೆಚ್ಚಿಸುತ್ತಿದ್ದು, ಸದ್ಯ ಕರ್ನಾಟಕದಲ್ಲಿ ನಮ್ಮ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಮಾರಾಟ ಮಳಿಗೆ ಹೊಂದಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ.

Published On - 8:26 pm, Tue, 10 January 23

Follow Us
Praveen Sannamani
Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ