ಅಟೋಮೆಟಿಕ್ ಅಥವಾ ಮ್ಯಾನುಯಲ್ ಕಾರು: ಮಹಿಳೆಯರು ಕಾರು ಖರೀದಿಸುವ ಮುನ್ನ ಈ ಸ್ಟೋರಿ ಓದಿ
ಮಹಿಳೆಯರೆ ನೀವು ಹೊಸ ಕಾರು ಖರೀದಿಸುವ ಪ್ಲಾನ್ ಹಾಕಿಕೊಂಡಿದ್ದೀರಾ?. ಆದರೆ, ಅಟೋಮೆಟಿಕ್ ಅಥವಾ ಮ್ಯಾನುಯಲ್ ಯಾವ ಕಾರು ಖರೀದಿಸಬೇಕೆಂಬ ಗೊಂದಲ ನಿಮಗಿದ್ದರೆ ಈ ಸ್ಟೋರಿ ಓದಿ. ನಿಮಗೆ ಸೂಕ್ತವಾಗುವಂತಹ ಕಾರಿನ ಆಯ್ಕೆಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಇಂದು ಅಟೋ ಮಾರುಕಟ್ಟೆಯಲ್ಲಿ ಸುಮಾರು 5 ಲಕ್ಷದಿಂದ ಹಿಡಿದು 15 ಲಕ್ಷದ ವರೆಗಿನ ಕಾರುಗಳು ಅತಿ ಹೆಚ್ಚು ಮಾರಾಟ ಆಗುತ್ತಿವೆ. ಈ ಪೈಕಿ ಹೆಚ್ಚಿನ ಕಾರುಗಳಲ್ಲಿ ಅಟೋಮೆಟಿಕ್ ಮತ್ತು ಮ್ಯಾನುಯಲ್ ಎಂಬ ಎರಡು ಆಯ್ಕೆಗಳು ಕೂಡ ಬರುತ್ತವೆ. ಮಹಿಳೆಯರೂ ಇಂದು ಕಾರು ಚಾಲನೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ತಮಗೆ ಸ್ವಯಂಚಾಲಿತ ಮತ್ತು ಹಸ್ತಚಾಲಿತ ಗೇರ್‌ಬಾಕ್ಸ್ ಇದರಲ್ಲಿ ಯಾವುದು ಉತ್ತಮ ಎಂಬ ಗೊಂದಲ ಮೂಡುತ್ತದೆ. ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಅಟೋಮೆಟಿಕ್ ಕಾರು ಅಥವಾ ಮ್ಯಾನುಯಲ್ ಕಾರು ನಡುವೆ ಮಹಿಳೆಯರು ಆಯ್ಕೆಮಾಡುವಾಗ ಅದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರ ಆಗಿರುತ್ತದೆ. ಚಾಲನಾ ಅನುಭವ ಮತ್ತು ಬಳಕೆಯ ಆದ್ಯತೆಗಳನ್ನು ಅದು ಅವಲಂಬಿಸಿರುತ್ತದೆ. ಆದಾಗ್ಯೂ, ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಯಾವ ಗೇರ್‌ಬಾಕ್ಸ್ ಆಯ್ಕೆಯು ಉತ್ತಮವಾಗಿದೆ ಎಂಬುದನ್ನು ನೋಡಬಹುದು.
ಸ್ವಯಂಚಾಲಿತ ಗೇರ್ ಬಾಕ್ಸ್:
ಸುಲಭ ಚಾಲನೆ- ಟ್ರಾಫಿಕ್‌ನಲ್ಲಿ ಬೆಸ್ಟ್: ಸ್ವಯಂಚಾಲಿತ ಕಾರುಗಳಲ್ಲಿ ನೀವು ಆಗಾಗ್ಗೆ ಗೇರ್ ಬದಲಾಯಿಸುವ ಅಗತ್ಯವಿಲ್ಲ. ಕಾರು ಸ್ವಯಂಚಾಲಿತವಾಗಿ ಗೇರ್‌ಗಳನ್ನು ಬದಲಾಯಿಸುತ್ತದೆ, ವಿಶೇಷವಾಗಿ ಬೆಂಗಳೂರಿನಂತಹ ಟ್ರಾಫಿಕ್‌ನಲ್ಲಿ ಚಾಲನೆಯನ್ನು ಹೆಚ್ಚು ಆರಾಮದಾಯಕ ಮತ್ತು ಒತ್ತಡವಿಲಲ್ಲದೆ ಓಡಿಸಬಹುದು. ಸಾಮಾನ್ಯವಾಗಿ ನಗರಗಳ ದಟ್ಟಣೆಯ ಟ್ರಾಫಿಕ್‌ನಲ್ಲಿ, ಆಗಾಗ್ಗೆ ಕಾರನ್ನು ನಿಲ್ಲಿಸಿ ಗೇರ್ ಬದಲಾಯಿಸಬೇಕು, ಈ ಸಂದರ್ಭ ಅಟೋಮೆಟಿಕ್ ಗೇರ್‌ಬಾಕ್ಸ್ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿದೆ.
ಕಡಿಮೆ ಆಯಾಸ: ದೀರ್ಘಕಾಲ ಚಾಲನೆ ಮಾಡುವಾಗ, ಅಟೋಮೆಟಿಕ್ ಕಾರಿನಲ್ಲಿ ಚಾಲಕನಿಗೆ ಹೆಚ್ಚು ಸುಸ್ತಾಗುವುದಿಲ್ಲ. ಏಕೆಂದರೆ ಕ್ಲಚ್ ಮತ್ತು ಗೇರ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಗೇರ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲದ ಕಾರಣ ಸುಗಮ ಮತ್ತು ಹೆಚ್ಚು ಆರಾಮದಾಯಕವಾಗಿ ಡ್ರೈವಿಂಗ್ ಮಾಡಬಹುದು.
ಮ್ಯಾನುಯಲ್ ಗೇರ್ ಬಾಕ್ಸ್:
ಹೆಚ್ಚು ನಿಯಂತ್ರಣ: ಮ್ಯಾನುಯಲ್ ಗೇರ್‌ಬಾಕ್ಸ್ ಚಾಲಕನಿಗೆ ವಾಹನದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ, ವಿಶೇಷವಾಗಿ ಹೆಚ್ಚಿನ ವೇಗದಲ್ಲಿ ಅಥವಾ ಗಿರಿಧಾಮಗಳಂತಹ ಸ್ಥಳಗಳಲ್ಲಿ ಇದು ಸೂಕ್ತವಾಗಿದೆ. ಡ್ರೈವಿಂಗ್ ಅನುಭವವನ್ನು ಇಷ್ಟಪಡುವ ಚಾಲಕರಿಗೆ ಇದು ಒಳ್ಳೆಯದು.
ಇಂಧನ ದಕ್ಷತೆ- ಕಡಿಮೆ ವೆಚ್ಚ: ಕೆಲವು ಸಂದರ್ಭಗಳಲ್ಲಿ, ಹಸ್ತಚಾಲಿತ ಕಾರುಗಳು ಅಟೋಮೆಟಿಕ್ ಕಾರುಗಳಿಗಿಂತ ಸ್ವಲ್ಪ ಹೆಚ್ಚು ಮೈಲೇಜ್ ನೀಡುತ್ತದೆ. ಜೊತೆಗೆ ಬೆಲೆ ಕೂಡ ಕಡಿಮೆ. ಹಾಗೆಯೆ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಕಾರುಗಳ ನಿರ್ವಹಣೆ ಮತ್ತು ದುರಸ್ತಿ ವೆಚ್ಚವು ಸ್ವಯಂಚಾಲಿತಕ್ಕಿಂತ ಕಡಿಮೆಯಿರುತ್ತದೆ.
ಇದನ್ನೂ ಓದಿ: ಮಹೀಂದ್ರಾ ಥಾರ್ ರಾಕ್ಸ್ 4X4 ವೆರಿಯೆಂಟ್ ಗಳ ಬೆಲೆ ಬಹಿರಂಗ
ಮಹಿಳೆಯರಿಗೆ ಯಾವ ಗೇರ್ ಬಾಕ್ಸ್ ಉತ್ತಮ?:
ಹೊಸ ಚಾಲಕರಿಗೆ ಸ್ವಯಂಚಾಲಿತ ಗೇರ್ ಬಾಕ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಅವರಿಗೆ ರಸ್ತೆಯ ಮೇಲೆ ಹೆಚ್ಚು ಗಮನಹರಿಸಲು ಮತ್ತು ಟ್ರಾಫಿಕ್‌ನಲ್ಲಿ ಭಯವಿಲ್ಲದೆ ಓಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಮಹಿಳೆಯರಿಗೆ ಸ್ವಯಂಚಾಲಿತ ಗೇರ್‌ಬಾಕ್ಸ್ ಚಾಲನೆ ಹೆಚ್ಚು ಸುಗಮ ಮತ್ತು ಆರಾಮದಾಯಕವಾಗಿಸುತ್ತದೆ. ಆದಾಗ್ಯೂ, ಡ್ರೈವಿಂಗ್ ಅನ್ನು ಆನಂದಿಸುವ ಮತ್ತು ಕಾರಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಬಯಸುವ ಚಾಲಕರಿಗೆ ಮ್ಯಾನುಯಲ್ ಗೇರ್‌ಬಾಕ್ಸ್‌ಗಳು ಆಕರ್ಷಕ ಆಯ್ಕೆಯಾಗಿದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ