BMW CE 04: ಬಿಎಂಡಬ್ಲ್ಯು ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಇ 04 ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

BMW CE 04: ಬಿಎಂಡಬ್ಲ್ಯು ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ
ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್
Follow us
Praveen Sannamani
|

Updated on: Jul 24, 2024 | 9:54 PM

ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟೊರಾಡ್ (BMW Motorrad) ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ವಿಶ್ವಾದ್ಯಂತ ಬಿಡುಗಡೆ ಮಾಡುತ್ತಿದ್ದು, ಇದೀಗ ಭಾರತದಲ್ಲಿ ಮೊದಲ ಬಾರಿಗೆ ತನ್ನ ಬಹುನೀರಿಕ್ಷಿತ ಸಿಇ 04 ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಇವಿ ಸ್ಕೂಟರ್ ಎಕ್ಸ್ ಶೋರೂಂ ಪ್ರಕಾರ ರೂ. 14.90 ಲಕ್ಷ ಬೆಲೆ ಹೊಂದಿದ್ದು, ಇದು ಸಂಪೂರ್ಣವಾಗಿ ಆಮದು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಆಧುನಿಕ ವಿನ್ಯಾಸ ಮತ್ತು ಕಟಿಂಗ್ ಎಡ್ಜ್ ತಂತ್ರಜ್ಞಾನಗಳೊಂದಿಗೆ ಅಭಿವೃದ್ದಿಗೊಂಡಿರುವ ಸಿಇ 04 ಇವಿ ಸ್ಕೂಟರ್ ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿದ್ದು, ಕಂಪನಿಯು ಇದೀಗ ಭಾರತದಲ್ಲೂ ಪರಿಚಯಿಸಿದೆ. ಹೊಸ ಇವಿ ಸ್ಕೂಟರ್ ಮೂಲಕ ಐಷಾರಾಮಿ ಸ್ಕೂಟರ್ ಸವಾರಿ ಬಯಸುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದ್ದು, ಹೊಸ ರೈಡಿಂಗ್ ಅನುಭವ ನೀಡುವುದಲ್ಲಿ ಎರಡು ಮಾತಿಲ್ಲ ಎನ್ನಬಹುದು.

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಸಿಇ 04 ಐಷಾರಾಮಿ ಇವಿ ಸ್ಕೂಟರಿನಲ್ಲಿ 8.5 ಕೆವಿಹೆಚ್ ಸಾಮರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 130 ಕಿ.ಮೀ ಮೈಲೇಜ್ ನೀಡಲಿದೆ. ಇದರೊಂದಿಗೆ ಹೊಸ ಇವಿ ಸ್ಕೂಟರ್ ಅದ್ಭುತ ಪರ್ಫಾಮೆನ್ಸ್ ಹೊಂದಿದ್ದು, ಇದು ಕೇವಲ 2 ಸೆಕೆಂಡುಗಳಲ್ಲಿ ಸೊನ್ನೆಯಿಂದ 50 ಕಿ.ಮೀ ವೇಗ ಪಡೆದುಕೊಳ್ಳುವುದರ ಜೊತೆಗೆ ಪ್ರತಿ ಗಂಟೆ 120 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.

BMW CE 04

ಇದರೊಂದಿಗೆ ಹೊಸ ಇವಿ ಸ್ಕೂಟರ್ ಖರೀದಿಯೊಂದಿಗೆ ಕಂಪನಿಯ ಕಡೆಯಿಂದ 2.3 ಕೆವಿ ಸಾಮರ್ಥ್ಯದ ಹೋಂ ಚಾರ್ಜರ್ ಸೌಲಭ್ಯ ಸಿಗಲಿದ್ದು, ಇದು ಶೇ. 80 ರಷ್ಟು ಚಾರ್ಜಿಂಗ್ ಮಾಡಲು 3 ಗಂಟೆ 30 ನಿಮಿಷ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಜೊತೆಗೆ ಹೊಸ ಇವಿ ಸ್ಕೂಟರ್ ಅನ್ನು ಫಾಸ್ಟ್ ಚಾರ್ಜಿಂಗ್ ಸೌಲಭ್ಯದಿಂದಲೂ ಚಾರ್ಜ್ ಮಾಡಬಹುದಾಗಿದ್ದು, ಇದಕ್ಕಾಗಿ ಹೆಚ್ಚುವರಿ ಬೆಲೆಯೊಂದಿಗೆ ಫಾಸ್ಟ್ ಚಾರ್ಜರ್ ವಾಲ್ ಬಾಕ್ಸ್ ಜೋಡಣೆ ಮಾಡಿಕೊಡಲಾಗುತ್ತದೆ.

ಹೊಸ ಇವಿ ಸ್ಕೂಟರಿನಲ್ಲಿ ರೈಡಿಂಗ್ ಅನುಭವ ಹೆಚ್ಚಿಸಲು ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಇಕೋ, ರೈನ್ ಮತ್ತು ರೋಡ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ನೀಡಿದ್ದು, ಇದರಲ್ಲಿರುವ ಆಟೋಮ್ಯಾಟಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್ ಸೌಲಭ್ಯವುದು ರೈಡಿಂಗ್ ವೇಳೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಇದರಲ್ಲದೇ ಹೊಸ ಇವಿ ಸ್ಕೂಟರಿನಲ್ಲಿ ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್ ಸೌಲಭ್ಯಗಳಿವೆ.

ಕೊನೆಯದಾಗಿ ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಬ್ಲೂಟೂಥ್ ಸಂಪರ್ಕಿತ 10.25 ಇಂಚಿನ ಟಿಎಫ್ ಟಿ ಮಲ್ಟಿ ಫಂಕ್ಷನಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, 12 ವೊಲ್ಟೊ ಸಾಮರ್ಥ್ಯದ ಸ್ಮಾರ್ಟ್ ಫೋನ್ ಚಾರ್ಜರ್ ಸಾಕೆಟ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಸ್ಕೂಟರಿನಲ್ಲಿ ಇನ್ನು ಹೆಚ್ಚಿನ ಐಷಾರಾಮಿ ಫೀಚರ್ಸ್ ಬಯಸುವ ಗ್ರಾಹಕರಿಗೆ ಕಂಫರ್ಟ್ ಮತ್ತು ಡೈನಾಮಿಕ್ ಆಕ್ಸಸರಿಸ್ ಪ್ಯಾಕೇಜ್ ಗಳನ್ನು ಪರಿಚಯಿಸಿದ್ದು, ಇದಲ್ಲದೇ ಹೊಸ ಸ್ಕೂಟರ್ ಖರೀದಿಗಾಗಿ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಮತ್ತು 5 ವರ್ಷಗಳ ವಿಸ್ತರಿತ ವಾರಂಟಿ ಆಯ್ಕೆ ದೊರಲಿದೆ.

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?