AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BSNL Plan: ಬರೋಬ್ಬರಿ 3600GB ಡೇಟಾ: ಬಿಎಸ್​ಎನ್​ಎಲ್​ ತಂದಿದೆ 3 ತಿಂಗಳ ಭರ್ಜರಿ ಪ್ಲಾನ್

ಬಿ ಎಸ್ ಎನ್ ಎಲ್ ತನ್ನ ಬಳಕೆದಾರರಿಗೆ ಮೂರು ತಿಂಗಳ ವ್ಯಾಲಿಡಿಟಿ ಇರುವ ಉತ್ತಮ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 3600GB ಡೇಟಾವನ್ನು ಪಡೆಯುತ್ತಾರೆ. ಇದರಲ್ಲಿ ತಿಂಗಳಿಗೆ 1200GB ಹೈ ಸ್ಪೀಡ್ ಡೇಟಾವನ್ನು ನೀಡಲಾಗಿದೆ.

BSNL Plan: ಬರೋಬ್ಬರಿ 3600GB ಡೇಟಾ: ಬಿಎಸ್​ಎನ್​ಎಲ್​ ತಂದಿದೆ 3 ತಿಂಗಳ ಭರ್ಜರಿ ಪ್ಲಾನ್
BSNL Plan
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 08, 2024 | 3:59 PM

Share

ಸರ್ಕಾರಿ ಒಡೆತನದ ಬಿ ಎಸ್ ಎನ್ ಎಲ್ ತನ್ನ ಬಳಕೆದಾರರಿಗೆ ಕಳೆದ ಕೆಲವು ಸಮಯದಿಂದ ಹೊಸ ಹೊಸ ಕೊಡುಗೆಗಳನ್ನು ತರುತ್ತಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ಕೋಟಿಗಟ್ಟಲೆ ಬಳಕೆದಾರರು ಈ ಕೊಡುಗೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಬಿ ಎಸ್ ಎನ್ ಎಲ್ ತನ್ನ ನೆಟ್‌ವರ್ಕ್ ವಿಸ್ತರಣೆಯತ್ತಲೂ ಗಮನ ಹರಿಸುತ್ತಿದೆ. ಕಂಪನಿಯು ಇತ್ತೀಚೆಗೆ ಸುಮಾರು 51 ಸಾವಿರ ಹೊಸ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ. ಇದರಿಂದ ಬಳಕೆದಾರರು ಉತ್ತಮ ಸಂಪರ್ಕವನ್ನು ಪಡೆಯುತ್ತಿದ್ದಾರೆ. ಕಂಪನಿಯು ಕೇವಲ ಮೊಬೈಲ್​ಗೆ ಮಾತ್ರವಲ್ಲದೆ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಉತ್ತಮ ಕೊಡುಗೆಯನ್ನು ಪರಿಚಯಿಸಿದೆ.

ಇದೀಗ ಹೊಸದಾಗಿ ಬಿ ಎಸ್ ಎನ್ ಎಲ್ ತನ್ನ ಬಳಕೆದಾರರಿಗೆ ಮೂರು ತಿಂಗಳ ವ್ಯಾಲಿಡಿಟಿ ಇರುವ ಉತ್ತಮ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 3600GB ಡೇಟಾವನ್ನು ಪಡೆಯುತ್ತಾರೆ. ಇದರಲ್ಲಿ ತಿಂಗಳಿಗೆ 1200GB ಹೈ ಸ್ಪೀಡ್ ಡೇಟಾವನ್ನು ನೀಡಲಾಗಿದೆ. ಅಲ್ಲದೆ, ಅನಿಯಮಿತ ಕರೆಗಳ ಪ್ರಯೋಜನವನ್ನು ಭಾರತದಾದ್ಯಂತ ಯಾವುದೇ ಸಂಖ್ಯೆಗೆ ಒದಗಿಸಲಾಗುತ್ತದೆ. ಬಿ ಎಸ್ ಎನ್ ಎಲ್ ನ ಈ ಯೋಜನೆಯಲ್ಲಿ, ಬಳಕೆದಾರರಿಗೆ 25Mbps ವೇಗದಲ್ಲಿ ಇಂಟರ್ನೆಟ್ ಡೇಟಾವನ್ನು ರನ್ ಮಾಡಬಹುದು. ಬಳಕೆದಾರರು ಈ ಯೋಜನೆಯನ್ನು ಕೇವಲ 999 ರೂ. ಗೆ ಪಡೆಯುತ್ತಿದ್ದಾರೆ.

1200GB ಮಿತಿಯನ್ನು ಪೂರೈಸಿದ ನಂತರ, ಬಳಕೆದಾರರು 4Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಬಿ ಎಸ್ ಎನ್ ಎಲ್ ತನ್ನ ಅಧಿಕೃತ X ಹ್ಯಾಂಡಲ್‌ನಿಂದ ಈ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ. ಹಾಗೆಯೆ ಬಿ ಎಸ್ ಎನ್ ಎಲ್ ನ ಸೆಲ್ಫ್ ಕೇರ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆ 1800-4444 ಗೆ ಕರೆ ಮಾಡುವ ಮೂಲಕ ಈ ಕೊಡುಗೆಯನ್ನು ಪಡೆಯಬಹುದು.

ಇದನ್ನೂ ಓದಿ: ಮಾರುತಿ ಡಿಜೈರ್​ಗೆ ಶುರುವಾಯಿತು ನಡುಕ: ಬಿಡುಗಡೆ ಆಯಿತು ಹೊಸ ಹೋಂಡಾ ಅಮೇಜ್ ಕಾರು, ಬೆಲೆ ಎಷ್ಟು?

ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ದೇಶದ ಮೊದಲ ಫೈಬರ್ ಆಧಾರಿತ ಇಂಟರ್ನೆಟ್ ಪ್ರೊಟೊಕಾಲ್ ಟಿವಿ ಸೇವೆಯನ್ನು ಘೋಷಿಸಿದೆ. ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಯಾವುದೇ ಸೆಟ್-ಟಾಪ್ ಬಾಕ್ಸ್ ಇಲ್ಲದೆಯೇ 500 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು ಮತ್ತು 12 OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ.

ಬಿ ಎಸ್ ಎನ್ ಎಲ್ ಈ ಹಿಂದೆ ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಸೇವೆಯನ್ನು ಪ್ರಾರಂಭಿಸಿತ್ತು. ಈಗ ಇದನ್ನು ಪಂಜಾಬ್ ಟೆಲಿಕಾಂ ಸೇವಾ ಬಳಕೆದಾರರಿಗೆ ಪರಿಚಯಿಸಲಾಗಿದೆ. ಶೀಘ್ರದಲ್ಲೇ ಭಾರತದಾದ್ಯಂತ ಭಾರತ್ ಫೈಬರ್ ಬಳಕೆದಾರರಿಗೆ ಇದನ್ನು ಪ್ರಾರಂಭಿಸುತ್ತೇವೆ ಎಂದು ಬಿಎಸ್​ಎನ್​ಎಲ್ ಹೇಳಿದೆ.

ಇನ್ನು ಜಿಯೋ-ಏರ್ಟೆಲ್- ವಿಗೆ ಟಕ್ಕರ್ ಕೊಡಲು ಬಿಎಸ್​ಎನ್​ಎಲ್ ಇತ್ತೀಚೆಗಷ್ಟೆ ರೂ. 97 ರೀಚಾರ್ಜ್ ಯೋಜನೆಯನ್ನು ನೀಡಿದೆ. ಈ ಅಗ್ಗದ ರೀಚಾರ್ಜ್ ಯೋಜನೆಯಲ್ಲಿ, ಕಂಪನಿಯು ಗ್ರಾಹಕರಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. 15 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗಿದೆ, ಅದರ ಪ್ರಕಾರ ನೀವು ಒಟ್ಟು 30GB ಡೇಟಾವನ್ನು ಪಡೆಯುತ್ತೀರಿ. ನೀವು ಯಾವುದೇ ನೆಟ್‌ವರ್ಕ್‌ಗೆ 15 ದಿನಗಳವರೆಗೆ ಅನಿಯಮಿತ ಉಚಿತ ಕರೆ ಮಾಡಬಹುದು. ದೈನಂದಿನ ಡೇಟಾ ಮಿತಿ ಮುಗಿದ ನಂತರ, 40Kbps ವೇಗದಲ್ಲಿ ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ