Honda Amaze: ಮಾರುತಿ ಡಿಜೈರ್‌ಗೆ ಶುರುವಾಯಿತು ನಡುಕ: ಬಿಡುಗಡೆ ಆಯಿತು ಹೊಸ ಹೋಂಡಾ ಅಮೇಜ್ ಕಾರು, ಬೆಲೆ ಎಷ್ಟು?
ಹೋಂಡಾ ಅಮೇಜ್ ಮತ್ತು ಮಾರುತಿ ಡಿಜೈರ್ ಎರಡೂ ದೇಶದ ಅತ್ಯುತ್ತಮ ಮಾರಾಟವಾದ ಸೆಡಾನ್ ಕಾರುಗಳಾಗಿವೆ. ಮಾರುತಿ ಕೆಲ ವಾರಗಳ ಹಿಂದೆಯಷ್ಟೆ ಡಿಜೈರ್‌ನ ಇತ್ತೀಚಿನ ಮಾದರಿಯನ್ನು ಬಿಡುಗಡೆ ಮಾಡಿತ್ತು. ಈ ಕಾರು ಮೊದಲ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿತ್ತು. ಅಂತಹ ಪರಿಸ್ಥಿತಿಯಲ್ಲಿ, ಇದೀಗ ಹೊಸ ಹೋಂಡಾ ಅಮೇಜ್ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ಕಾರು ಕಂಪನಿಗಳು ಒಂದರ ಹಿಂದೆ ಒಂದರಂತೆ ಹೊಸ ಎಸ್ ಯುವಿ ಮಾಡೆಲ್ ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ, ದೇಶದಲ್ಲಿ ಕಾಂಪ್ಯಾಕ್ಟ್ ಸೆಡಾನ್ ವರ್ಗದ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಇದೀಗ ಸುದೀರ್ಘ ಕಾಯುವಿಕೆಯ ನಂತರ, ಹೋಂಡಾ ಕಾರ್ಸ್ ಇಂಡಿಯಾ ತನ್ನ ಪ್ರವೇಶ ಮಟ್ಟದ ಕಾರು ಹೋಂಡಾ ಅಮೇಜ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದರ ವಿನ್ಯಾಸದ ಜೊತೆಗೆ ಅದರ ಹಲವು ವೈಶಿಷ್ಟ್ಯಗಳನ್ನು ನವೀಕರಿಸಿದೆ. ಇದು ಮಾರುಕಟ್ಟೆಯಲ್ಲಿ ಮಾರುತಿ ಡಿಜೈರ್‌ಗೆ ನೇರವಾಗಿ ಪೈಪೋಟಿ ನೀಡಲಿದೆ.
ಹೋಂಡಾ ಅಮೇಜ್ ಮತ್ತು ಮಾರುತಿ ಡಿಜೈರ್ ಎರಡೂ ದೇಶದ ಅತ್ಯುತ್ತಮ ಮಾರಾಟವಾದ ಸೆಡಾನ್ ಕಾರುಗಳಾಗಿವೆ. ಮಾರುತಿ ಕೆಲ ವಾರಗಳ ಹಿಂದೆಯಷ್ಟೆ ಡಿಜೈರ್‌ನ ಇತ್ತೀಚಿನ ಮಾದರಿಯನ್ನು ಬಿಡುಗಡೆ ಮಾಡಿತ್ತು. ಈ ಕಾರು ಮೊದಲ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿತ್ತು. ಅಂತಹ ಪರಿಸ್ಥಿತಿಯಲ್ಲಿ, ಇದೀಗ ಹೊಸ ಹೋಂಡಾ ಅಮೇಜ್ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಹೋಂಡಾ ಅಮೇಜ್ ಬುಕ್ಕಿಂಗ್ ತೆರೆದಿದ್ದು, ಇಂದಿನಿಂದ ಟೆಸ್ಟ್ ಡ್ರೈವ್ ತೆಗೆದುಕೊಳ್ಳಬಹುದು ಮತ್ತು ಮುಂದಿನ ತಿಂಗಳಿನಿಂದ ಇದರ ವಿತರಣೆ ಪ್ರಾರಂಭವಾಗಲಿದೆ.
ಅಮೇಜ್‌ನಲ್ಲಿ ADAS ಸುರಕ್ಷತಾ ವೈಶಿಷ್ಟ್ಯಗಳು:
ಕಂಪನಿಯು ಹೊಸ ಹೋಂಡಾ ಅಮೇಜ್‌ನಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ (ADAS) ಅನ್ನು ಒದಗಿಸಿದೆ. ಇದನ್ನು ಈ ವಿಭಾಗದಲ್ಲಿ ಮೊದಲ ಬಾರಿಗೆ ಕಾರಿನಲ್ಲಿ ನೀಡಲಾಗಿದೆ. ಇದಕ್ಕಾಗಿ ಕಾರಿನ ಮುಂಭಾಗದಿಂದ ಹಿಂಭಾಗಕ್ಕೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಷ್ಟೇ ಅಲ್ಲ, ಡ್ರೈವಿಂಗ್ ಮಾಡುವಾಗ ಡ್ರೈವರ್ ಬ್ಲೈಂಡ್ ಸ್ಪಾಟ್‌ಗಳನ್ನು ಎದುರಿಸಬೇಕಾಗಿಲ್ಲ. ಇದಕ್ಕಾಗಿ, ಸೈಡ್ ಮಿರರ್ನಲ್ಲೂ ಕ್ಯಾಮೆರಾವನ್ನು ಹೊಂದಿಸಲಾಗಿದೆ. ಕಾರಿನ ADAS ವ್ಯವಸ್ಥೆಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ವಯಂಚಾಲಿತ ಬ್ರೇಕಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೌಲಭ್ಯವನ್ನು ಒದಗಿಸುತ್ತದೆ.
ಹೊಸ ಹೋಂಡಾ ಅಮೇಜ್‌ನಲ್ಲಿ, ನೀವು 8-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಅನ್ನು ಪಡೆಯುತ್ತೀರಿ. ಮುಂಭಾಗದಲ್ಲಿ LED ಬೈ-ಪ್ರೊಜೆಕ್ಟರ್ ಲೆನ್ಸ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ LED ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಕಂಪನಿಯು ಕಾರಿನಲ್ಲಿ 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಿದೆ. 416 ಲೀಟರ್ಗಳಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಕಂಪನಿಯು ಹೋಂಡಾ ಅಮೇಜ್ ಅನ್ನು 6 ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಈ ಬಣ್ಣಗಳು ಅಬ್ಸಿಡಿಯನ್ ಬ್ಲೂ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್. ಈ ಕಾರಿನಲ್ಲಿ ಕಂಪನಿಯು 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರಲಿದೆ. ಇದರಲ್ಲಿ ಪೆಡ್ಲರ್ಸ್ ಶಿಫ್ಟ್ ಆಯ್ಕೆ ಲಭ್ಯವಿರುತ್ತದೆ. ಈ ಎಂಜಿನ್ 90 HP ಪವರ್ ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಮಾರುತಿ ಡಿಜೈರ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಕಾರಿನ ಮೈಲೇಜ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಲೀಟರ್‌ಗೆ 18.65 ಕಿಮೀ ಮತ್ತು ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ನಲ್ಲಿ ಲೀಟರ್‌ಗೆ 19.46 ಕಿಮೀ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಹೀಂದ್ರಾದ ಹೊಸ EVಗೆ ಟಕ್ಕರ್ ಕೊಡಲು ಬರುತ್ತಿದೆ ಹ್ಯುಂಡೈನ ಈ ಬ್ಲ್ಯಾಕ್ ಬ್ಯೂಟಿ
ಹೋಂಡಾ ಅಮೇಜ್ ಮತ್ತು ಮಾರುತಿ ಡಿಜೈರ್ ನಡುವಿನ ಬೆಲೆ:
ಹೋಂಡಾ ಅಮೇಜ್‌ನ V MT ರೂಪಾಂತರದ ಬೆಲೆ ರೂ 7,99,900, VX ಮ್ಯಾನುವಲ್ ರೂಪಾಂತರದ ಬೆಲೆ ರೂ 9,09,900 ಮತ್ತು ZX ಮ್ಯಾನುವಲ್ ರೂಪಾಂತರದ ಬೆಲೆ ರೂ 9,69,900. ಹಾಗೆಯೆ ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿರುವ ಹೊಸ ಅಮೇಜ್‌ನ ವಿ ರೂಪಾಂತರದ ಬೆಲೆ ರೂ 9,19,900, ವಿಎಕ್ಸ್ ರೂಪಾಂತರದ ಬೆಲೆ ರೂ 9,99,900 ಮತ್ತು ZX ರೂಪಾಂತರದ ಬೆಲೆ ರೂ 10,89,900 ಆಗಿದೆ.
ಅತ್ತ ಡಿಜೈರ್‌ನ ಆರಂಭಿಕ ಬೆಲೆ ರೂ 6.79 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಂಪನಿಯು ಇದರಲ್ಲಿ ಸನ್‌ರೂಫ್ ಅನ್ನು ಒದಗಿಸಿದೆ, ಆದರೆ ಹೋಂಡಾ ಅಮೇಜ್‌ನಲ್ಲಿ ಸನ್‌ರೂಫ್ ಆಯ್ಕೆ ನೀಡಲಾಗಿದೆ. ಬದಲಾಗಿ ಇದು ADAS ಸುರಕ್ಷತಾ ಸೂಟ್ ಅನ್ನು ಹೊಂದಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ