Hyundai Creta EV: ಮಹೀಂದ್ರಾದ ಹೊಸ EVಗೆ ಟಕ್ಕರ್ ಕೊಡಲು ಬರುತ್ತಿದೆ ಹ್ಯುಂಡೈನ ಈ ಬ್ಲ್ಯಾಕ್ ಬ್ಯೂಟಿ
ಹ್ಯುಂಡೈ ಮೋಟಾರ್ಸ್ ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿ ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿಯನ್ನು ತರುತ್ತಿದೆ. ಕಂಪನಿಯು ಇದನ್ನು ಜನವರಿಯಲ್ಲಿ ನಡೆಯಲಿರುವ 'ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ' (ಆಟೋ ಎಕ್ಸ್‌ಪೋ 2025) ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
Upcoming Hyundai Electric Car in India: ಮಹೀಂದ್ರಾ & ಮಹೀಂದ್ರಾ ತನ್ನ ಎರಡು ಎಲೆಕ್ಟ್ರಿಕ್ ಕಾರುಗಳಾದ BE 6e ಮತ್ತು XEV 9e ಅನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಅಟೋ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಅದೇನೇ ಇರಲಿ, ದೇಶದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಹ್ಯುಂಡೈ ಕೂಡ ಎಲೆಕ್ಟ್ರಿಕ್ ಕಾರುಗಳ ಲೋಕದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದೆ. ಜನವರಿ 2025 ರಲ್ಲಿ ಮಹೀಂದ್ರಾ BE 6e ಗೆ ಸ್ಪರ್ಧಿಸಲು ಹೊಸ ಎಲೆಕ್ಟ್ರಿಕ್ ಕಾರನ್ನು ತರಲು ಹ್ಯುಂಡೈ ಹೊರಟಿದೆ.
ಹೌದು, ಹ್ಯುಂಡೈ ಮೋಟಾರ್ಸ್ ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿ ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿಯನ್ನು ತರುತ್ತಿದೆ. ಕಂಪನಿಯು ಇದನ್ನು ಜನವರಿಯಲ್ಲಿ ನಡೆಯಲಿರುವ ‘ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ’ (ಆಟೋ ಎಕ್ಸ್‌ಪೋ 2025) ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹ್ಯುಂಡೈ ಕ್ರೆಟಾ ಇವಿ ವಿಶೇಷತೆ ಏನು ತಿಳಿಯೋಣ…
ಹುಂಡೈ ಕ್ರೆಟಾ EV ನ ವೈಶಿಷ್ಟ್ಯಗಳು:
ಇಲ್ಲಿಯವರೆಗೆ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಕ್ರೆಟಾ EV ವಾಸ್ತವವಾಗಿ ಕ್ರೆಟಾ SUV ಯಂತೆಯೇ ಇರುತ್ತದೆ. EV ದೃಷ್ಟಿಕೋನದಿಂದ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ. ಅದರ ಮುಂಭಾಗದ ಗ್ರಿಲ್ ಅನ್ನು ಖಾಲಿ ಮಾಡಲಾಗಿದೆ. ಕಾರಿನ ಮೇಲೆ ಇವಿ ಬ್ಯಾಡ್ಜಿಂಗ್ ಮಾಡಲಾಗಿದೆ. ಇಷ್ಟೇ ಅಲ್ಲ, ಇದಕ್ಕೆ ಏರೋ-ಸಮರ್ಥ ಅಲಾಯ್ ಟಯರ್ಗಳನ್ನು ನೀಡಲಾಗಿದೆ. ಕಾರಿನ ಪವರ್ ಬಗ್ಗೆ ಮಾತನಾಡುವುದಾದರೆ, ಇದು 45 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದುವ ಸಾಧ್ಯತೆಯಿದೆ. 138 ಬಿಎಚ್‌ಪಿ ಪವರ್ ಮತ್ತು 255 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ನೀಡುತ್ತದೆ. ಈ ಕಾರು ಸಿಂಗಲ್ ಮೋಟಾರ್ ಫ್ರಂಟ್ ವೀಲ್ ಡ್ರೈವ್ ಸೆಟಪ್ ಅನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಇದರ ನೇರ ಸ್ಪರ್ಧೆಯು ಮಹೀಂದ್ರ BE 6e, MG ವಿಂಡ್ಸರ್ EV, ಟಾಟಾ ಕರ್ವ್ EV ಮತ್ತು MG ZS EV ಗಳೊಂದಿಗೆ ಇರುತ್ತದೆ. ಮಾರುತಿ ಸುಜುಕಿ ಇಂಡಿಯಾದ ಇವಿಟಾರಾ ಕೂಡ ಈ ವಿಭಾಗದಲ್ಲಿ ಇದೆ.
ಇದನ್ನೂ ಓದಿ: ಮಾರುತಿ ಹೊಸ ಆಲ್ಟೋ 10ನೇ ಆವೃತ್ತಿ ಬಿಡುಗಡೆಗೆ ತಯಾರಿ: ಇದರ ಮೈಲೇಜ್ ಬರೋಬ್ಬರಿ 30 ಕಿಮೀ.
BE 6e ತುಂಬಾ ಶಕ್ತಿಶಾಲಿಯಾಗಿದೆ:
ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿದ BE 6e ನಲ್ಲಿ, ಕಂಪನಿಯು 79kWh ಬ್ಯಾಟರಿ ಪ್ಯಾಕ್ ಅನ್ನು ಒದಗಿಸಿದೆ. ಇದು 362 bhp ಶಕ್ತಿಯನ್ನು ಮತ್ತು 380 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 7 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕಿಮೀ ವೇಗವನ್ನು ತಲುಪುತ್ತದೆ. ಇದು ಒಂದೇ ಚಾರ್ಜ್‌ನಲ್ಲಿ 500 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಈ ಕಾರಿನ ಆರಂಭಿಕ ಬೆಲೆಯನ್ನು 18.90 ಲಕ್ಷ ರೂ. ಎಂದು ಹೇಳಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ