AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BYD Atto 3: ದುಬಾರಿ ಬೆಲೆ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಂಡ ಬಿವೈಡಿ ಅಟ್ಟೊ 3 ಇವಿ

ಬಿವೈಡಿ ಇಂಡಿಯಾ ಕಂಪನಿಯು ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಯು ಶೀಘ್ರದಲ್ಲಿಯೇ ವಿತರಣೆಗೊಳ್ಳಲಿದೆ.

BYD Atto 3: ದುಬಾರಿ ಬೆಲೆ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಂಡ ಬಿವೈಡಿ ಅಟ್ಟೊ 3 ಇವಿ
ಬಿವೈಡಿ ಅಟ್ಟೊ 3 ಇವಿ
Praveen Sannamani
Praveen Sannamani|

Updated on:Dec 09, 2022 | 7:16 PM

Share

ಚೀನಾ ಮೂಲದ ಬಿವೈಡಿ(ಬಿಲ್ಡ್ ಯುವರ್ ಡ್ರೀಮ್ಸ್) ಕಂಪನಿಯು ಭಾರತದಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಉತ್ಪನ್ನವಾದ ಅಟ್ಟೊ 3(Atto 3) ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಕಾರು(Electric Car) ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 33.99 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನಗಳ ಪ್ರೇರಣೆ ಹೊಂದಿದ್ದು, ಹೊಸ ಕಾರು ಖರೀದಿಗಾಗಿ ಇದುವರೆಗೆ ಸುಮಾರು 1500 ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ. ಹೊಸ ಕಾರನ್ನು ಬಿವೈಡಿ ಕಂಪನಿಯು ಮುಂದಿನ ತಿಂಗಳು ಜನವರಿ ಅಂತ್ಯದಲ್ಲಿ ವಿತರಣೆ ಮಾಡಲಿದ್ದು, ಹೊಸ ಕಾರು ಎಂಜಿ ಜೆಡ್ಎಸ್ ಇವಿ ಮತ್ತು ಹ್ಯುಂಡೈ ಕೊನಾ ಇವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಬಿವೈಡಿ ಕಂಪನಿಯು ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿಯಲ್ಲಿ 60.48kWh ಬ್ಲೇಡ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 521 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹೊಸ ಕಾರಿನಲ್ಲಿರುವ ಬ್ಲೇಡ್ ಬ್ಯಾಟರಿ ಪ್ಯಾಕ್ ಕಂಪನಿಯ ಎಲ್ಎಫ್ ಪಿ ಕೆಮೆಸ್ಟ್ರಿ ತಂತ್ರಜ್ಞಾನ ಹೊಂದಿದ್ದು, ಇದು ಮುಂಭಾಗದ ಚಕ್ರಗಳಿಗೆ ಶಕ್ತಿ ಪೂರೈಸುತ್ತದೆ. ಇದರೊಂದಿಗೆ ಅಟ್ಟೊ 3 ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, ಇದು 201 ಹಾರ್ಸ್ ಪವರ್, 310 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಹೊಸ ಕಾರು 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಇದರಲ್ಲಿ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಹೊಸ ಕಾರಿನ ಬ್ಯಾಟರಿ ಪ್ಯಾಕ್ ಕೇವಲ 50 ನಿಮಿಷಗಳಲ್ಲಿ 80kW ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಸೊನ್ನೆಯಿಂದ ಶೇ. 80 ರಷ್ಟು ಚಾರ್ಜ್ ಆಗಲಿದ್ದು, ಎಸಿ ಚಾರ್ಜರ್ ನಲ್ಲಿ ಪೂರ್ತಿ ಚಾರ್ಜ್ ಆಗಲು ಗರಿಷ್ಠ 10 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.

BYD Atto 3

ಡಿಸೈನ್ ಮತ್ತು ಫೀಚರ್ಸ್

ಹೊಸ ಕ್ರಾಸ್ ಓವರ್ ಎಸ್ ಯುವಿ ವಿನ್ಯಾಸ ಹೊಂದಿದ್ದು, ಅತ್ಯುತ್ತಮ ಏರೋಡೈನಾಮಿಕ್ ಮೂಲಕ 0.29 ಸಿಡಿ ಡ್ರ್ಯಾಗ್‌ ಗುಣಾಂಕ ಹೊಂದಿದೆ. ಇದರಲ್ಲಿ ಕಂಪನಿಯು ಎಲ್ಇಡಿ ಹೆಡ್ ಲೈಟ್ಸ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್ ಎಲ್ಎಸ್, ಬಾರ್ ಕ್ರೊಮ್ ನೊಂದಿಗೆ ಬಿವೈಡಿ ಲೋಗೊ ಜೊತೆಗೆ ಎಲ್ಲಾ ಮಾದರಿಯು ಲೈಟಿಂಗ್ ಸೌಲಭ್ಯಗಳು ಎಲ್ಇಡಿ ವೈಶಿಷ್ಟ್ಯತೆ ಹೊಂದಿವೆ. ಹಾಗೆಯೇ ಹೊಸ ಕಾರಿನಲ್ಲಿ ಎಸ್ ಯುವಿ ವಿನ್ಯಾಸಕ್ಕೆ ಪೂರಕವಾದ ಸ್ಪೋರ್ಟಿ ಸ್ಟೈಲ್ ಹೊಂದಿರುವ 18 ಇಂಚಿನ ಅಲಾಯ್ ವ್ಹೀಲ್, ಇಂಟ್ರಾಗ್ರೆಟೆಡ್ ರೂಫ್ ಸ್ಪಾಯ್ಲರ್, ಸಿಂಗಲ್ ಪೀಸ್ ಟೈಲ್ ಗೇಟ್ ಸೌಲಭ್ಯಗಳಿವೆ. ಹೊಸ ಕಾರು ಒಟ್ಟು ನಾಲ್ಕು ಬಣ್ಣಗಳ ಆಯ್ಕೆ ಹೊಂದಿದ್ದು, ಗ್ರಾಹಕರು ಬಂಡ್ಲರ್ ಗ್ರೇ, ಪಾರ್ಕೌರ್ ರೆಡ್, ಸ್ಕಿ ವೈಟ್ ಮತ್ತು ಸರ್ಫ್ ಬ್ಲ್ಯೂ ಬಣ್ಣಗಳ ಆಯ್ಕೆ ಹೊಂದಿದೆ.

ಇಂಟಿರಿಯರ್ ಫೀಚರ್ಸ್

ಅಟ್ಟೊ 3 ಹೊಸ ಕಾರು ಹೊರಭಾಗದಲ್ಲಿರುವಂತೆ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ. ಹೊಸ ಕಾರಿನಲ್ಲಿ ಗ್ರೇ ಬ್ಲ್ಯೂ ಜೊತೆ ರೆಡ್ ಹೈಲೈಟ್ಸ್ ನೀಡಲಾಗಿದ್ದು, ಡೆಬಲ್ ಶೇಫ್ ಹೊಂದಿರುವ ಎಸಿ ವೆಂಟ್ಸ್, ಗ್ರಿಲ್ ಸ್ಟೈಲ್ ಹೊಂದಿರುವ ಡೋರ್ ಹ್ಯಾಂಡಲ್ ಗಳು, ಚಾಲನೆಗೆ ಸಹಕಾರಿಯಾಗುವಂತೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ 12.8 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಒನ್ ಟಚ್ ಎಲೆಕ್ಟ್ರಿಕ್ ಕಂಟ್ರೋಲ್ ಟೈಲ್ ಗೇಟ್, 8 ಸ್ಪೀಕರ್ಸ್ ಆಡಿಯೋ ಸಿಸ್ಟಂ, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಆಸನಗಳು, ವಾಯ್ಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ಸ್, ಪಿಎಂ 2.5 ಏರ್ ಫಿಲ್ಟರ್ ಸೇರಿದಂತೆ ಪನೋರಮಿಕ್ ಸನ್ ರೂಫ್ ಮತ್ತು ವೈರ್ ಲೈಸ್ ಸ್ಮಾರ್ಟ್ ಫೋನ್ ಚಾರ್ಜಿಂಗ್ ಸೌಲಭ್ಯಗಳಿವೆ.

ಇನ್ನು ಹೊಸ ಕಾರಿನ ಅರಾಮದಾಯಕ ಪ್ರಯಾಣಕ್ಕಾಗಿ ಉತ್ತಮ ಉದ್ದಳತೆ ನೀಡಲಾಗಿದ್ದು, ಇದು 4,455 ಎಂಎಂ ಉದ್ದ, 1,875 ಎಂಎಂ ಅಗಲ, 1,615 ಎತ್ತರ, 2,720 ಎಂಎಂ ವ್ಹೀಲ್ ಬೆಸ್, 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಇದರೊಂದಿಗೆ ಹೊಸ ಕಾರಿನಲ್ಲಿ 440 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿದ್ದು, ಇದು ಒಟ್ಟು 1,750 ಕೆ.ಜಿ ತೂಕ ಪಡೆದುಕೊಂಡಿದೆ.

Published On - 6:55 pm, Fri, 9 December 22

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್