Citroen: ಸಿಟ್ರನ್ ಕಾರುಗಳ ಖರೀದಿ ಮೇಲೆ ರೂ. 2 ಲಕ್ಷದ ತನಕ ಆಫರ್
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ದೀಪಾವಳಿ ಆಫರ್ ಘೋಷಣೆ ಮಾಡಿದ್ದು, ಬರೋಬ್ಬರಿ ರೂ. 2 ಲಕ್ಷದ ತನಕ ಆಫರ್ ನೀಡುತ್ತಿದೆ.
ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ (Citroen) ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ದೀಪಾವಳಿ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಸಿಟ್ರನ್ ಕಂಪನಿಯು ಕ್ಯಾಶ್ ಡಿಸ್ಕೌಂಟ್, ವಿಸ್ತರಿತ ವಾರಂಟಿ ಮತ್ತು ಆಕರ್ಷಕ ಬೆಲೆಗೆ ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಆಫರ್ ನೀಡಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಟ್ರನ್ ಇಂಡಿಯಾ ಕಂಪನಿಯು ಸಿ3 ಮೈಕ್ರೊ ಎಸ್ ಯುವಿ, ಸಿ3 ಏರ್ ಕ್ರಾಸ್ ಎಸ್ ಯುವಿ ಮತ್ತು ಸಿ5 ಏರ್ ಕ್ರಾಸ್ ಎಸ್ ಯುವಿ ಕಾರುಗಳ ಖರೀದಿ ಮೇಲೆ ಆಫರ್ ನೀಡುತ್ತಿದ್ದು, ಗ್ರಾಹಕರು ಸಿ5 ಏರ್ ಕ್ರಾಸ್ ಎಸ್ ಯುವಿ ಕಾರು ಖರೀದಿಯ ಮೇಲೆ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದಾಗಿದೆ.
ಸಿಟ್ರನ್ ಕಂಪನಿಯು ಸಿ5 ಏರ್ ಕ್ರಾಸ್ ಎಸ್ ಯುವಿ ಕಾರು ಖರೀದಿಯ ಮೇಲೆ ಬರೋಬ್ಬರಿ ರೂ. 2 ಲಕ್ಷ ಆಫರ್ ನೀಡುತ್ತಿದ್ದು, 2022ರಲ್ಲಿ ನಿರ್ಮಾಣವಾದ ಯುನಿಟ್ ಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಇದು ಎಕ್ಸ್ ಶೋರೂಂ ಪ್ರಕಾರ ರೂ. 36.67 ಲಕ್ಷದಿಂದ ರೂ. 37.67 ಲಕ್ಷ ಬಲೆ ಹೊಂದಿದ್ದು, ಇದರಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಸಿ5 ಏರ್ ಕ್ರಾಸ್ ಕಾರು ಮಾದರಿಯು 5 ಸೀಟರ್ ಸೌಲಭ್ಯದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಹೊಂದಿದ್ದು, ಇದು ಹ್ಯುಂಡೈ ಟೂಸಾನ್ ಮತ್ತು ಜೀಪ್ ಕಂಪಾಸ್ ಕಾರು ಮಾದರಿಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.
ಸಿ5 ಏರ್ ಕ್ರಾಸ್ ಎಸ್ ಯುವಿ ನಂತರ ಸಿ3 ಏರ್‌ಕ್ರಾಸ್ ಎಸ್‍ಯುವಿ ಖರೀದಿ ಮೇಲೂ ಭರ್ಜರಿ ಆಫರ್ ಘೋಷಣೆ ಮಾಡಿದೆ. ಹೊಸ ಆಫರ್ ನಲ್ಲಿ ಗ್ರಾಹಕರು ಕ್ಯಾಶ್ ಬ್ಯಾಕ್ ಜೊತೆಗೆ ವಿಸ್ತರಿತ ವಾರಂಟಿ ಮತ್ತು ಉಚಿತ ನಿರ್ವಹಣಾ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದ್ದು, ಎಸ್ ಯುವಿ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.
ಇದನ್ನೂ ಓದಿ: ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್
ಸಿಟ್ರನ್ ಹೊಸ ಆಫರ್ ನಲ್ಲಿ ಸಿ3 ಏರ್‌ಕ್ರಾಸ್ ಎಸ್‍ಯುವಿ ಖರೀದಿದಾರರಿಗೆ ಒಟ್ಟಾರೆ ರೂ. 1 ಲಕ್ಷ ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 30 ಸಾವಿರ ಕ್ಯಾಶ್ ಡಿಸ್ಕೌಂಟ್ ಸಿಗಲಿದ್ದರೆ ರೂ 25 ಸಾವಿರ ಮೌಲ್ಯದ 5 ವರ್ಷಗಳ ಅಥವಾ 60 ಸಾವಿರ ಕಿ.ಮೀ ವಿಸ್ತೃತ ವಾರಂಟಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 5 ವರ್ಷಗಳ ಅಥವಾ 50 ಸಾವಿರ ಕಿ.ಮೀ ತನಕ ಕಾರು ನಿರ್ವಹಣೆಗಾಗಿ ರೂ 45 ಸಾವಿರ ಮೌಲ್ಯದ ನಿರ್ವಹಣಾ ಪ್ಯಾಕೇಜ್ ನೀಡಲಾಗುತ್ತಿದ್ದು, ಹೊಸ ಆಫರ್ ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.
ಹೊಸ ಆಫರ್ ನಲ್ಲಿ ಸಿಟ್ರನ್ ಕಂಪನಿಯು ಮೇಲೆ ತಿಳಿಸಿರುವ ಕ್ಯಾಶ್ ಬ್ಯಾಕ್, ವಿಸ್ತರಿತ ವಾರಂಟಿ ಮತ್ತು ಉಚಿತ ನಿರ್ವಹಣಾ ಪ್ಯಾಕೇಜ್ ಹೊರತಾಗಿಯೂ ಮತ್ತೊಂದು ಆಫರ್ ನೀಡುತ್ತಿದ್ದು, ವಿಸ್ತರಿತ ವಾರಂಟಿ ಮತ್ತು ಉಚಿತ ನಿರ್ವಹಣಾ ಪ್ಯಾಕೇಜ್ ಬಿಟ್ಟು ರೂ. 90 ಸಾವಿರ ಮೌಲ್ಯದ ಕ್ಯಾಶ್ ಬ್ಯಾಕ್ ಆಫರ್ ಪಡೆದುಕೊಳ್ಳಬಹುದಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡಿರುವ ಹೊಸ ಸಿ3 ಏರ್‌ಕ್ರಾಸ್ ಎಸ್‌ಯುವಿ ಕಾರು ಮಾದರಿಯು ಯು, ಪ್ಲಸ್ ಮತ್ತು ಮ್ಯಾಕ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ಮತ್ತು ಟಾಪ್ ಎಂಡ್ ಆವೃತ್ತಿಯು ರೂ. 12.34 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!
ಇನ್ನು ಸಿ3 ಹ್ಯಾಚ್ ಬ್ಯಾಕ್ ಕಾರು ಖರೀದಿಸುವ ಗ್ರಾಹಕರಿಗೆ ರೂ.99,000 ಆಫರ್ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮವಾದ ಮೈಕ್ರೊ ಎಸ್ ಯುವಿ ಕಾರು ಖರೀದಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆ ಎನ್ನಬಹುದು. 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 6.16 ಲಕ್ಷದಿಂದ ರೂ. 8.92 ಲಕ್ಷ ಬೆಲೆ ಹೊಂದಿದೆ.