Kia CPO: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮಕ್ಕೆ ಎಂಟ್ರಿ ಕೊಟ್ಟ ಕಿಯಾ ಇಂಡಿಯಾ
ಕಿಯಾ ಇಂಡಿಯಾ ಕಂಪನಿಯು ಬಳಕೆ ಮಾಡಿದ ಕಾರುಗಳ ಮಾಲೀಕತ್ವಕ್ಕಾಗಿ ಹೊಸ ಪ್ಲ್ಯಾಟ್ ಫಾರ್ಮ್ ಆರಂಭಿಸಿದ್ದು, ಪ್ರತ್ಯೇಕ ಮಾರಾಟ ಮಳಿಗಗಳ ಮೂಲಕ ಮಲ್ಟಿ ಬ್ರಾಂಡ್ ಯೂಸ್ಡ್ ಕಾರ್ ಉದ್ಯಮ ವ್ಯವಹಾರ ಆರಂಭಿಸಿದೆ.
ಕಾರು ಮಾರಾಟದಲ್ಲಿ ತನ್ನದೇ ಆದ ಗ್ರಾಹಕ ವಲಯ ಹೊಂದಿರುವ ಕಿಯಾ ಇಂಡಿಯಾ(Kia India) ಕಂಪನಿಯು ಇದೀಗ ಅಧಿಕೃತವಾಗಿ ಬಳಕೆ ಮಾಡಿದ ಕಾರುಗಳ(Pre-Owned Car) ಉದ್ಯಮ ವಿಭಾಗಕ್ಕೂ ಲಗ್ಗೆಯಿಟ್ಟಿದ್ದು, ಪ್ರಮಾಣೀಕೃತ ಮೌಲ್ಯಮಾಪನದೊಂದಿಗೆ ಉತ್ತಮ ಬೆಲೆಗಳಲ್ಲಿ ಬಳಸಿದ ಕಾರುಗಳನ್ನು ಖರೀದಿಸಲು ಹೊಸ ಪ್ಲ್ಯಾಟ್ ಫಾರ್ಮ್ ಅನುಕೂಲಕರವಾಗಲಿದೆ. ಸದ್ಯ ದೇಶಿಯ ಆಟೋ ಉದ್ಯಮದಲ್ಲಿ ಬಳಸಿದ ಕಾರುಗಳ ಬೇಡಿಕೆಯು ಭಾರತೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಇದೀಗ ಕಿಯಾ ಕಂಪನಿಯು ಕೂಡಾ ಹೊಸ ಉದ್ಯಮಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ.
ಕಿಯಾ ಯೂಸ್ಡ್ ಕಾರು ಮಾರಾಟ ಮಳಿಗೆಗಳಲ್ಲಿ ಕಾರು ಮರು ಮಾರಾಟ ಮತ್ತು ಖರೀದಿಗೆ ಮೊದಲು 175 ಪಾಯಿಂಟ್ ಕ್ವಾಲಿಟಿ ಚೆಕ್ ಮಾಡಲಿದ್ದು, 5 ವರ್ಷಕ್ಕಿಂತ ಕಡಿಮೆ ಬಳಕೆ ಮಾಡಿದ ಕಾರುಗಳನ್ನು ಮಾತ್ರ ಮರು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಹಾಗೆಯೇ ಬಳಕೆ ಮಾಡಿದ ಕಾರುಗಳ ಖರೀದಿ ಮೇಲೆ ಕಿಯಾ ಕಂಪನಿಯು 2 ವರ್ಷ ಅಥವಾ 40 ಸಾವಿರ ಕಿ.ಮೀ ವಾರಂಟಿ ಘೋಷಣೆ ಮಾಡಿದ್ದು, ವಾರಂಟಿ ಜೊತೆಗೆ 4 ಉಚಿತ ಸರ್ವಿಸ್ ಒದಗಿಸಲಿದೆ.
ಇದನ್ನೂ ಓದಿ: ನವೆಂಬರ್ ನಲ್ಲಿ ಬಿಡುಗಡೆಯಾದ ಟಾಪ್ 5 ಕಾರುಗಳಿವು!
ಬೆಂಗಳೂರು ಸೇರಿ ದೇಶಾದ್ಯಂತ 14 ನಗರಗಳಲ್ಲಿ 15 ಕಿಯಾ ಬಳಸಿದ ಕಾರುಗಳ ಮಾರಾಟ ಮಳಿಗೆ ಆರಂಭವಾಗಿದ್ದು, ಈ ವರ್ಷಾಂತ್ಯಕ್ಕೆ ಒಟ್ಟು 30 ಮಾರಾಟ ಮಳಿಗೆಗಳನ್ನು ಆರಂಭಿಸುವುದಾಗಿ ಕಿಯಾ ಕಂಪನಿಯು ಘೋಷಣೆ ಮಾಡಿದೆ. ಮತ್ತೊಂದು ವಿಶೇಷ ಅಂದರೆ ಬಳಸಿದ ಕಾರು ಮಾರಾಟ ಮಳಿಗೆಗಳಲ್ಲಿ ಕಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಜೊತೆ ಇತರೆ ಬ್ರಾಂಡ್ ಕಾರುಗಳನ್ನು ಸಹ ಎಕ್ಸ್ ಚೆಂಜ್ ಮತ್ತು ಖರೀದಿಗೆ ಅವಕಾಶ ನೀಡುತ್ತದೆ.
ಹೊಸ ಪ್ಲ್ಯಾಟ್ ಫಾರ್ಮ್ ಕಿಯಾ ಕಂಪನಿಗೆ ಪ್ರಮಾಣೀಕೃತ ಮೌಲ್ಯಮಾಪನದೊಂದಿಗೆ ಉತ್ತಮ ಬೆಲೆಗಳಲ್ಲಿ ಬಳಸಿದ ಕಾರುಗಳನ್ನು ಎಕ್ಸ್ ಚೆಂಜ್ ಮತ್ತು ಮರುಮಾರಾಟ ಮಾಡಲು ನೆರವಾಗಲಿದ್ದು, ಹಳೆಯ ಕಾರಿನ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಲು 175-ಪಾಯಿಂಟ್‌ಗಳಲ್ಲಿ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಇದರಿಂದ ಬಳಸಿದ ಕಾರುಗಳನ್ನು ಖರೀದಿಸಲಿರುವ ಗ್ರಾಹಕರಿಗೆ ಕಾರಿನ ಬಗ್ಗೆ ಭರವಸೆ ಹೊಂದಲು ಸಾಧ್ಯವಾಗಲಿದ್ದು, ಇಲ್ಲಿ ಯಾವುದೇ ರೀತಿಯ ಮೋಸದ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.
ಇದನ್ನೂ ಓದಿ: ಹೊಸ ನಿಯಮ ಜಾರಿಯಿಂದ ಬಂದ್ ಆಗಲಿವೆ ಸಣ್ಣ ಡೀಸೆಲ್ ಕಾರುಗಳ ಮಾರಾಟ!
ಇನ್ನು ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಆದರೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು. ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಯಾವುದೇ ರೀತಿಯ ತಾಂತ್ರಿಕ ತೊಂದರೆಗೆ ಅಧಿಕೃತ ಕಂಪನಿಯಿಂದಲೇ ವಾರಂಟಿ ಸಿಗುತ್ತದೆ.
Published On - 6:51 pm, Thu, 1 December 22