ಮಹೀಂದ್ರಾ ಥಾರ್ Vs ಥಾರ್ ರಾಕ್ಸ್.. ಖರೀದಿಗೆ ಯಾವುದು ಬೆಸ್ಟ್?

ಮಹೀಂದ್ರಾ ಹೊಸ ಥಾರ್ ರಾಕ್ಸ್ ಕಾರು ಬಿಡುಗಡೆಯಾಗಿದ್ದು, ಸಾಮಾನ್ಯ ಥಾರ್ ಗಿಂತಲೂ ವಿಭಿನ್ನವಾಗಿರುವ ಥಾರ್ ರಾಕ್ಸ್ ಯಾವೆಲ್ಲಾ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎನ್ನುವುದು ಇಲ್ಲಿ ತಿಳಿಯೋಣ.

ಮಹೀಂದ್ರಾ ಥಾರ್ Vs ಥಾರ್ ರಾಕ್ಸ್.. ಖರೀದಿಗೆ ಯಾವುದು ಬೆಸ್ಟ್?
ಮಹೀಂದ್ರಾ ಥಾರ್ Vs ಥಾರ್ ರಾಕ್ಸ್
Follow us
Praveen Sannamani
|

Updated on:Aug 28, 2024 | 6:16 PM

ಮಹೀಂದ್ರಾ (Mahindra) ಕಂಪನಿಯು ತನ್ನ ಹೊಸ ಥಾರ್ ರಾಕ್ಸ್ ಬಿಡುಗಡೆ ಮಾಡಿದ್ದು, ಹೊಸ ಕಾರಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಖರೀದಿಗಾಗಿ ಶೀಘ್ರದಲ್ಲಿಯೇ ಅಧಿಕೃತ ಬುಕಿಂಗ್ ಆರಂಭಿಸಲಾಗುತ್ತಿದ್ದು, ಹೊಸ ಥಾರ್ ರಾಕ್ಸ್ ಕಾರು ಸಾಮಾನ್ಯ ಥಾರ್ ಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹಾಗಾದ್ರೆ ಥಾರ್ ರಾಕ್ಸ್ ಕಾರು ಸಾಮಾನ್ಯ ಥಾರ್ ಗಿಂತಲೂ ಹೇಗೆ ವಿಭಿನ್ನವಾಗಿದೆ ಮತ್ತು ಏನೆಲ್ಲಾ ಹೊಸ ಫೀಚರ್ಸ್ ಹೊಂದಿದೆ ಎನ್ನುವ ಮಾಹಿತಿ ಇಲ್ಲಿದೆ.

ಥಾರ್ ಕಾರು ಮಾದರಿಯನ್ನು ಮಹೀಂದ್ರಾ ಕಂಪನಿಯು ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಈ ಹಿಂದೆ 3 ಡೋರ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆ ಮಾಡಿತ್ತು. ಆದರೆ ಥಾರ್ ಹಿಂಬದಿಯ ಆಸನವನ್ನು ಬಳಕೆ ಮಾಡುವ ಪ್ರಯಾಣಿಕರಿಗೆ ಕೆಲವು ಅನಾನುಕೂಲಗಳಿದ್ದು, ಈ ಹಿನ್ನಲೆಯಲ್ಲಿ ಮಹೀಂದ್ರಾ ಕಂಪನಿಯು ಲೈಫ್ ಸ್ಟೈಲ್ ಜೊತೆಗೆ ಕುಟುಂಬ ಸಮೇತರಾಗಿ ಪ್ರಯಾಣಿಸಲು ಅನುಕೂಲಕರವಾಗುವಂತೆ ಥಾರ್ ಜೊತೆ ಹೊಸದಾಗಿ ಥಾರ್ ರಾಕ್ಸ್ ಪರಿಚಯಿಸಿದೆ. ಹೊಸ ಕಾರಿನಲ್ಲಿ 5 ಡೋರ್ ಜೊತೆ ಹಲವು ವಿನೂತನ ಫೀಚರ್ಸ್ ನೀಡಲಾಗಿದ್ದು, ಇದು ಸಾಮಾನ್ಯ ಥಾರ್ ಗಿಂತಲೂ ತುಸು ದುಬಾರಿಯಾಗಿದೆ.

ಥಾರ್ ರಾಕ್ಸ್ ಕಾರು ಎಂಎಕ್ಸ್1, ಎಂಎಕ್ಸ್3, ಎಎಕ್ಸ್3 ಎಲ್, ಎಂಎಕ್ಸ್5, ಎಎಕ್ಸ್5 ಎಲ್ ಮತ್ತು ಎಎಕ್ಸ್7 ಎಲ್ ಎನ್ನುವ ಆರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12.99 ಲಕ್ಷದಿಂದ ರೂ. 20.49 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯು ಸಾಮಾನ್ಯ ಥಾರ್ ಕಾರಿಗಿಂತಲೂ ರೂ. 1.64 ಲಕ್ಷದಷ್ಟು ದುಬಾರಿಯಾಗಿದ್ದು, ಥಾರ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11.35 ಲಕ್ಷದಿಂದ ರೂ. 17.60 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯಲ್ಲಿ ಥಾರ್ ನಲ್ಲಿರುವಂತೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರೇರಿತ 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಇದನ್ನೂ ಓದಿ: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!

ಆಕರ್ಷಕವಾದ ವಿನ್ಯಾಸದೊಂದಿಗೆ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಆರಂಭಿಕ ಮಾದರಿಗೂ ಅನ್ವಯಿಸುವಂತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಸಿ ಆಕಾರದ ಹೋಲುವ ಎಲ್‌ಇಡಿ ಡಿಆರ್‌ಎಲ್ಸ್, ಸರ್ಕ್ಯೂಲರ್ ಆಗಿರೋ ಫಾಗ್ ಲೈಟ್ಸ್ ಜೊತೆಗೆ ಸ್ಪೋರ್ಟಿಯಾಗಿ ಬಂಪರ್ ನೀಡಲಾಗಿದೆ. ಜೊತೆಗೆ 19 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಹ್ ಗಳು, ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್, ಎಲ್ಇಡಿ ಟೈಲ್‌ಲೈಟ್ಸ್ ನೀಡಲಾಗಿದೆ.

ಹೊರಭಾಗದಂತೆ ಕಾರಿನ ಒಳಗೂ ಹಲವಾರು ಫೀಚರ್ಸ್ ಗಳಿದ್ದು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸರ್ಪೊಟ್ ಮಾಡುವ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಲಭ್ಯವಿದೆ. ಇದಲ್ಲದೇ ಸಂಪೂರ್ಣ ಡಿಜಿಟಲ್ ಆಗಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲಿ ವೆಂಟಿಲೇಟೆಡ್ ಆಸನಗಳು, ಪನೊರಮಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ ಎಸಿ ವೆಂಟ್ಸ್ ನೀಡಲಾಗಿದೆ.

ಥಾರ್ ರಾಕ್ಸ್ ಕಾರಿನಲ್ಲಿ ಸುರಕ್ಷತೆಗಾಗಿ ಮಹೀಂದ್ರಾ ಕಂಪನಿಯು ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳು, ಇಎಸ್ಇ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಆಟೋ ಹೆಡ್ ಲೈಟ್ ಅಂಡ್ ವೈಪರ್ಸ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ನೀಡಲಾಗಿದೆ. ಹೊಸ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವಿದ್ದು, ಇದು ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್ ಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..

ಈ ಮೂಲಕ ಹೊಸ ಥಾರ್ ರಾಕ್ಸ್ ಕಾರು ಸಾಮಾನ್ಯ ಕಾರಿಗಿಂತಲೂ ಹೆಚ್ಚಿನ ಫೀಚರ್ಸ್ ಹೊಂದಿದ್ದು, ಹೊಸ ಕಾರಿನಲ್ಲಿ ಥಾರ್ ಮಾದರಿಯಲ್ಲಿ ಇಲ್ಲದೆ ಇರುವ 5 ಡೋರ್ ಸೌಲಭ್ಯ, ಎಡಿಎಎಸ್ ಸೇಫ್ಟಿ ಸಿಸ್ಟಂ, ದೊಡ್ಡದಾದ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್, ಸನ್ ರೂಫ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ, ಪ್ರೀಮಿಯಂ ಆಡಿಯೋ ಸಿಸ್ಟಂ ಮತ್ತು ಕೀ ಲೆಸ್ ಸ್ಟಾರ್ಟ್/ಸ್ಟಾಪ್ ಸೌಲಭ್ಯಗಳಿವೆ. ಇದರೊಂದಿಗೆ ಥಾರ್ ಮಾದರಿಯಲ್ಲೂ ಹಲವಾರು ಫೀಚರ್ಸ್ ಗಳಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಇದೀಗ ಥಾರ್ ಅಥವಾ ಥಾರ್ ರಾಕ್ಸ್ ಆಯ್ಕೆ ಮಾಡಬಹುದಾಗಿದೆ. ಥಾರ್ ಮಾದರಿಯು ಮುಖ್ಯವಾಗಿ ಯುವ ಗ್ರಾಹಕರಿಗೆ ಆಫ್ ರೋಡ್ ಮತ್ತು ಲೈಫ್ ಸ್ಟೈಪ್ ಗೆ ಉತ್ತಮ ಆಯ್ಕೆಯಾಗಿದ್ದರೆ, ಕುಟುಂಬ ಸಮೇತ ಪ್ರಯಾಣಿಸುವವರು ಮತ್ತು ವಾಣಿಜ್ಯ ವ್ಯವಹಾರಗಳಿಗೆ ಅವಶ್ಯವಿರುವ ಗ್ರಾಹಕರು 5 ಡೋರ್ ಸೌಲಭ್ಯದ ಥಾರ್ ರಾಕ್ಸ್ ಆಯ್ಕೆ ಮಾಡಬಹುದಾಗಿದೆ.

Published On - 6:14 pm, Wed, 28 August 24

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ