Maruti Grand Vitara CNG: ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ
ಭಾರತದಲ್ಲಿ ಸಿಎನ್ ಜಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲಿಯೇ ಗ್ರ್ಯಾಂಡ್ ವಿಟಾರಾದಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆಗೆ ಸಿದ್ದವಾಗುತ್ತಿದೆ.
ಸಿಎನ್‌ಜಿ ಕಾರುಗಳ(CNG Cars) ಮಾರಾಟದಲ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ಗ್ರ್ಯಾಂಡ್ ವಿಟಾರಾ(Grand Vitara) ಮಾದರಿಯಲ್ಲೂ ಹೊಸ ವರ್ಷನ್ ಬಿಡುಗಡೆಯ ಯೋಜನೆಯಲ್ಲಿದೆ. ಹೊಸ ಗ್ರ್ಯಾಂಡ್ ವಿಟಾರಾ ಎಸ್ ಯುವಿ ಖರೀದಿಗಾಗಿ ಈಗಾಗಲೇ ಬುಕಿಂಗ್ ಸಹ ಆರಂಭಿಸಲಾಗಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಮಾದರಿಯು ರಸ್ತೆಗಿಳಿಯಲಿದೆ ಎನ್ನಲಾಗಿದೆ. ಹೊಸ ಗ್ರ್ಯಾಂಡ್ ವಿಟಾರಾದಲ್ಲಿ ಸದ್ಯ ಸಾಮಾನ್ಯ ಪೆಟ್ರೋಲ್ ಜೊತೆ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಮಾರಾಟ ಮಾಡಲಾಗುತ್ತಿದ್ದು, ಇದೀಗ ಸಿಎನ್ ಜಿ ವರ್ಷನ್ ಪರಿಚಯಿಸಲಾಗುತ್ತಿದೆ. ಈ ಮೂಲಕ ನೆಕ್ಸಾ ಶ್ರೇಣಿಯಲ್ಲೂ ಸಿಎನ್ ಜಿ ಮಾದರಿಗಳ ಮಾರಾಟ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಹೊಸ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.
ನೆಕ್ಸಾ ಶ್ರೇಣಿಯಲ್ಲಿ ಈಗಾಗಲೇ ಬಲೆನೊ, ಎಕ್ಸ್ಎಲ್6 ಸಿಎನ್ ಜಿ ಕಾರುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದೀಗ ಕಂಪನಿಯು ಗ್ರ್ಯಾಂಡಾ ವಿಟಾರಾದಲ್ಲೂ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಹೊಸ ಮಾದರಿಯು ಡೆಲ್ಟಾ ಮತ್ತು ಝೀಟಾ ವೆರಿಯೆಂಟ್ ಗಳಲ್ಲಿ ಪರಿಚಯಿಸಬಹುದಾಗುತ್ತಿದ್ದು, ಸಿಎನ್ ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.
ಇದನ್ನೂ ಓದಿ: ಹೊಸ ಇನೋವಾ ಹೈಕ್ರಾಸ್ ಕಾರಿನ ಹೈಬ್ರಿಡ್ ವರ್ಷನ್ ಖಚಿತಪಡಿಸಿದ ಟೊಯೊಟಾ
ಗ್ರ್ಯಾಂಡ್ ವಿಟಾರಾ ಹೊಸ ಆವೃತ್ತಿಯು ಸಾಮಾನ್ಯ ಮಾದರಿಯ 1.5-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಕಿಟ್ ಅನ್ನು ಹೊಂದಿರಲಿದೆ. ಇದೇ ಎಂಜಿನ್ ಅನ್ನು ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಎರ್ಟಿಗಾ ಎಸ್-ಸಿಎನ್‌ಜಿ ಮತ್ತು ಎಕ್ಸ್‌ಎಲ್ 6 ಮಾದರಿಗಳಲ್ಲೂ ನೀಡಲಾಗಿದೆ. ಇದು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಕೆಜಿ ಸಿಎನ್ ಜಿ ಗೆ ಗರಿಷ್ಠ 28 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಹೊಸ ಮಾದರಿಯು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದ್ದು, 87 ಬಿಎಚ್ ಪಿ ಮತ್ತು 121 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.
ಇನ್ನು ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಯೆಂತೆ ಫೀಚರ್ಸ್ ಮುಂದುವರಿಸಲಿದೆ. ಹೆಚ್ಚುವರಿಯಾಗಿ ಸಿಎನ್ ಜಿ ಬ್ಯಾಡ್ಜ್ ನೊಂದಿಗೆ ಹೊಸ ಕಾರಿನಲ್ಲಿ ಕೆಲವು ಹೊಸ ಸೌಲಭ್ಯಗಳನ್ನು ನೀಡಬಹುದಾಗಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಮಾರುತಿ ಆಲ್ಟೋ ಕೆ10 ಸಿಎನ್‌ಜಿ ಬಿಡುಗಡೆ
ಹೊಸ ಕಾರಿನಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿರುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವುದರ ಜೊತೆಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ನೀಡುತ್ತಿದೆ. ಆದರೆ ಹೊಸ ಸಿಎನ್ ಜಿ ಮಾದರಿಯು ಹೈಬ್ರಿಡ್ ಮಾದರಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದ್ದು, ಪ್ರಮುಖ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ.
Published On - 7:33 pm, Sun, 20 November 22